ಮಂಗಳೂರು: ಪಾಂಡೇಶ್ವರದಲ್ಲಿರುವ ಫಿಝಾ ಬೈ ನೆಕ್ಸಸ್ ಮಾಲ್ ಮತ್ತು ಮಂಗಳೂರಿನ ಪ್ರಸಿದ್ಧ ತಿಂಡಿ Try Tinidi Instagram ಪೇಜ್ ಸಹ ಭಾಗಿತ್ವದಲ್ಲಿ ಇದೇ ಬರುವ ಜನವರಿ 16, 17 ಮತ್ತು 18, 2026 ರಂದು 3 ದಿನಗಳ ಐಸ್ ಕ್ರೀಮ್ ಪರ್ಬವನ್ನು ಆಯೋಜಿಸಲಾಗಿದೆ. 3ನೇ ಅವ್ರತ್ತಿಯ ಐಸ್ ಕ್ರೀಮ್ ಪರ್ಬ ಇದಾಗಿದ್ದು ಮೂರೂ ದಿನ ಕೂಡ ಬೆಳಗ್ಗೆ 11 ರಿಂದ ರಾತ್ರಿ 9 ರವರೆಗೆ ನಡೆಯಲಿದೆ. ಮಂಗಳೂರನ್ನು "ಐಸ್ ಕ್ರೀಮ್ ಕ್ಯಾಪಿಟಲ್ ಆಫ್ ಇಂಡಿಯಾ" ಎಂದು ಕರೆಯುವ ಈ ಸಂದರ್ಭದಲ್ಲಿ – ಎಲ್ಲಾ ಐಸ್ ಕ್ರೀಮ್ ಸಂಸ್ಥೆಗಳನ್ನ ಒಂದೇ ಸೂರಿನಡಿ ಸೇರಿಸ ಬೇಕು ಅನ್ನುವ ಆಲೋಚನೆ ಆಯೋಜಕರದ್ದು ಹಾಗಾಗಿ ಈ ಬಾರಿ 17 ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ. ಭಾಗವಿಸುವ ಐಸ್ ಕ್ರೀಮ್ ಸಂಸ್ಥೆಗಳು , ಐಡಿಯಲ್-ಪಬ್ಬಾಸ್, ಹ್ಯಾಂಗ್ಯೋ, ಕೈಲಾರ್ಸ್, ಫ್ಲೇವರ್ಸ್, F5, ಮಾವಿನ ಹಣ್ಣುಗಳು, LATO, ಮಿಲ್ಕಿ ಮಿಸ್ಟ್, ಕ್ಯಾಮರಿ, ಅಪ್ಸರಾ, ಬೋನ್‌ಬನ್ಸ್, ಕಿವಿ, ಸೆರೆನೊ ಗೆಲಾಟೊ, ಸ್ವಿರ್ಲಿಯೊ, ಫ್ರೂಟ್ ಪಾಪ್ಜ್, ಕಿಂಗ್ ಐಸ್‌ಕ್ರೀಮ್ ಗಳು ಭಾಗವಹಿಸಲಿವೆ ಎಂದು ಸಂಘಟಕರಾದ ಕಿರಣ್ ಶೆಣೈ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
2024 ಮತ್ತು 2025 ರಲ್ಲಿ ನಡೆದ ಐಸ್ ಕ್ರೀಮ್ ಪರ್ಬದ ಮೊದಲ ಮತ್ತು ಎರಡನೆಯ ಅವೃತ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಉತ್ತಮ ಸ್ಪಂದನೆ ಸಿಕ್ಕಿತ್ತು. ಈ ಬಾರಿಯೂ ಅತೀ ಹೆಚ್ಚಿನ ಜನ ಸೇರುವ ನಿರೀಕ್ಷೆ ಇದ್ದು, ಸಾಮಾಜಿಕ ಜಾಲತಾಣ ದಲ್ಲಿ ಪ್ರಸಾರ ಮಾಡಿದ ವಿಡಿಯೋಗಳಿಗೆ ಈಗಗಾಲೇ ಹೆಚ್ಚಿನ ಜನ ಉತ್ತಮ ಪ್ರತಿಕ್ರಿಯೆ ನೀಡಿದ್ದು, ಹೆಚ್ಚಿನ ಬಸ್ ಕ್ರೀಮ್ ಪ್ರಿಯರು ಭಾಗಿಯಾಗುವ ಎಲ್ಲ ಲಕ್ಷಣ ಕಂಡು ಬಂದಿದೆ.
ಪ್ರತಿ ಬಾರಿ ಐಸ್ ಕ್ರೀಮ್ ಹಬ್ಬದಲ್ಲಿ ಎಲ್ಲ ಬ್ರಾಂಡ್ ಗಳು ವಿಶೇಷ ವಿಭಿನ್ನ ಐಸ್ ಕ್ರೀಮ್ ಗಳನ್ನೂ ಪ್ರಸ್ತುತ ಪಡಿಸುತ್ತಾರೆ. ಈ ಬಾರಿ ಮಂಗಳೂರಿನ ಬ್ರಾಂಡ್ ಒಂದು ಪಟ್ಟೋಡಿ ಐಸ್ ಕ್ರೀಮ್ ಬಿಡುಗಡೆ ಮಾಡಲಿದ್ದು, ಐಸ್ ಕ್ರೀಮ್ ಹಬ್ಬದಲ್ಲಿ ಭಾಗಿಯಾಗಲು ಹೊಸದೊಂದು ಕಾರಣ ಸೇರಿದಂತಾಗಿದೆ. ಇದರೊಂದಿಗೆ ಐಸ್ ಕ್ರೀಮ್ ಕೇಕ್, ಬೆಳಗಾವಿ ಕುಂದ ಐಸ್ ಕ್ರೀಮ್, ಮಿನಿ ಗಡ್ ಬಡ್, ಪಾನಿ ಪುರಿ ಐಸ್ ಕ್ರೀಮ್, ವಿಶ್ವ ಮನ್ನಣೆ ಪಡೆದ ಪೇರಳೆ ಐಸ್ ಕ್ರೀಮ್ ಹಾಗು ಸಾಕಷ್ಟು ಐಸ್ ಕ್ರೀಮ್ ಲಭ್ಯವಿರಲಿದೆ ಎಂದು ಅವರು ಮಾಹಿತಿ ನೀಡಿದರು.