image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸ್ವಾಮಿ ವಿವೇಕಾನಂದರು ಯುವಕರ ನಿಜವಾದ ಸಾಮರ್ಥ್ಯವನ್ನು ಗುರುತಿಸಿದರು - ಪಿ. ಪ್ರದೀಪ್ ಕುಮಾರ್

ಸ್ವಾಮಿ ವಿವೇಕಾನಂದರು ಯುವಕರ ನಿಜವಾದ ಸಾಮರ್ಥ್ಯವನ್ನು ಗುರುತಿಸಿದರು - ಪಿ. ಪ್ರದೀಪ್ ಕುಮಾರ್

ಮಂಗಳೂರು : “ಸ್ವಾಮಿ ವಿವೇಕಾನಂದರು ಯುವಕರನ್ನು ಕೇವಲ ಜನಸಂಖ್ಯೆಯಾಗಿ ನೋಡಲಿಲ್ಲ, ಬದಲಾಗಿ ಅವರನ್ನು ಚಾಲನಾ ಶಕ್ತಿ ಮತ್ತು ಅಭಿವೃದ್ಧಿಯ ಪ್ರೇರಕಶಕ್ತಿಯಾಗಿ ನೋಡಿದರು. ಸ್ವಾಮೀಜಿ ಯುವಕರ ನಿಜವಾದ ಸಾಮರ್ಥ್ಯವನ್ನು ಗುರುತಿಸಿದರು ಮತ್ತು ರಾಷ್ಟ್ರವನ್ನು ಪರಿವರ್ತಿಸಲು ಈ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಯಾವಾಗಲೂ ಒತ್ತಾಯಿಸಿದರು. ವ್ಯಕ್ತಿತ್ವವನ್ನು ನಿರ್ಮಿಸುವ ಶಿಕ್ಷಣ ಮುಖ್ಯ. ಭೂಮಿಯ ಬಗ್ಗೆ ಕಲಿಯುವುದು ಜೀವನದಲ್ಲಿ ಎಂದಿಗೂ ನಿಲ್ಲುವುದಿಲ್ಲ. ಪ್ರತಿಯೊಬ್ಬರೂ ನೆಲದ ಕಾನೂನನ್ನು ಗೌರವಿಸಿ. ನೈತಿಕತೆ, ಮಾನವೀಯತೆ ಮತ್ತು ಮೌಲ್ಯಗಳನ್ನು ಎಂದಿಗೂ ಬಿಡಬಾರದು" ಎಂದು ಕರ್ನಾಟಕ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷರಾದ ಪಿ. ಪ್ರದೀಪ್ ಕುಮಾರ್ ಹೇಳಿದರು.

ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್‌ನ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ನಡೆದ ರಾಷ್ಟ್ರಿಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ಕೆನರಾ ಹೈಸ್ಕೂಲ್ ಅಸೋಸಿಯೇಷನ್‌ನ ಗೌರವ ಕಾರ್ಯದರ್ಶಿಗಳಾದ ಶ್ರೀ ಎಂ. ರಂಗನಾಥ ಭಟ್ ಅವರು ಮಾತನಾಡಿ “ಬಾಲ್ಯದಿಂದಲೇ ಸ್ವಾಮಿ ವಿವೇಕಾನಂದರ ಚಿಂತನೆಗಳು ನನ್ನ ಮೇಲೆ ಹಲವು ರೀತಿಯಲ್ಲಿ ಪ್ರಭಾವ ಬೀರಿದೆ. ಸ್ವಾಮಿ ವಿವೇಕಾನಂದರ ಮಾತುಗಳು ನನ್ನ ಜೀವನದುದ್ದಕಕ್ಕೂ ನೆರಳಿನಂತೆ ಸ್ಪೂರ್ತಿ ತುಂಬಿವೆ. ಸ್ವಾಮಿ ವಿವೇಕಾನಂದರ ಬಗ್ಗೆ ಅರಿತುಕೊಂಡಾಗ ಸುಭೀಕ್ಷ ಜೀವನ ನಮ್ಮದಾಗುತ್ತದೆ" ಎಂದು ಅಭಿಪ್ರಾಯಪಟ್ಟರು. ಉತ್ತರಾಖಂಡದ ಮಾಯಾವತಿಯ ಅದ್ವೈತ ಆಶ್ರಮದ ಪ್ರಬುದ್ಧ ಭಾರತ ಮಾಸಪತ್ರಿಕೆಯ ಸಹ ಸಂಪಾದಕರಾದ ಸ್ವಾಮಿ ಜ್ಞಾನೀಶಾನಂದಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಮಂಗಳೂರು ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿಗಳಾದ ಸ್ವಾಮಿ ಜಿತಕಾಮಾನಂದಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೆಂಗಳೂರಿನ ಲೇಖಕರು ಹಾಗೂ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆಯವರು ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ಕಾರ್ಯಕ್ರಮದ ಮೊದಲನೇ ಅವಧಿಯಲ್ಲಿ ಉತ್ತರಾಖಂಡದ ಮಾಯಾವತಿಯ ಅದ್ವೈತ ಆಶ್ರಮದ ಪ್ರಬುದ್ಧ ಭಾರತ ಮಾಸಪತ್ರಿಕೆಯ ಸಹ ಸಂಪಾದಕರಾದ ಸ್ವಾಮಿ ಜ್ಞಾನೀಶಾನಂದಜಿ ಅವರು “Energy, Efficiency, Excellence – The Youth Formula” ಎಂಬ ವಿಷಯದ ಬಗ್ಗೆ ಮಾತನಾಡಿದರು. ಎರಡನೇ ಅವಧಿಯಲ್ಲಿ ಬೆಂಗಳೂರಿನ ಲೇಖಕರು ಹಾಗೂ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆಯವರು “ಸ್ವಾಮಿ ವಿವೇಕಾನಂದರ ಜೀವನ: ೨೧ನೇ ಶತಮಾನದ ಯುವಕರಿಗೆ ದಾರಿದೀಪ” ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು. ನಂತರ “From Learning to Leadership – The Vivekananda Way” ಎಂಬ ವಿಷಯದ ಕುರಿತು ನಡೆದ ಸಂವಾದ ನಡೆಯಿತು. ಈ ಸಂವಾದದಲ್ಲಿ ಚಕ್ರವರ್ತಿ ಸೂಲಿಬೆಲೆ, ಮಂಗಳೂರಿನ ಫಾದರ್ ಮ್ಯುಲ್ಲರ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಪ್ರಾಧ್ಯಾಪಕರಾದ ಡಾ. ಅರುಣಾ ಯಡಿಯಾಳ್ ಹಾಗೂ ಮೂಡಬಿದ್ರೆಯ Sಏಈ ಇಟixeಡಿ Iಟಿಜiಚಿ Pvಣ. ಐಣಜ. ಇದರ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಪ್ರಜ್ವಲ್ ಆಚಾರ್ಯ, ಅವರು ಭಾಗವಹಿಸಿದರು. ಮಂಗಳೂರು ರಾಮಕೃಷ್ಣ ಮಿಷನ್‌ನ ಸ್ವಯಂಸೇವಕರಾದ ರಂಜನ್ ಬೆಳ್ಳರ್ಪಾಡಿ ಅವರು ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು. 

ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಹಾಗೂ ನಿರಂಜನಸ್ವಾಮಿ ಪಾಲಿಟೆಕ್ನಿಕ್ ಹಾಗೂ ಶ್ರೀನಿವಾಸ ಕಾಲೇಜಿನ ನ ೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾರತೀಯ ಸೇನೆಯ ನಿವೃತ್ತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಈ ಸ್ವಾಗತಿಸಿ, ಭಾರತೀಯ ಸೇನೆಯ ನಿವೃತ್ತ ಯೋಧರಾದ ಬೆಳ್ಳಾಲ ಗೋಪಿನಾಥ್ ರಾವ್ ವಂದಿಸಿದರು, ಕುಮಾರಿ ಶ್ರೀದೇವಿ ಕಾರ್ಯಕ್ರಮ ನಿರ್ವಹಿಸಿದರು.

Category
ಕರಾವಳಿ ತರಂಗಿಣಿ