ಸುಳ್ಯ: ಬೆಳ್ಳಾರೆಯಲ್ಲಿರುವ ಮಸೀದಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿರುವ ಆರೋಪದಲ್ಲಿ ಮುಸ್ಲಿಂ ಮುಖಂಡನ ವಿರುದ್ಧವೇ ಬೆಳ್ಳಾರೆ ಮಸೀದಿ ಆಡಳಿತ ಮಂಡಳಿ ಪೊಲೀಸ್ ದೂರು ದಾಖಲಿಸಿದೆ. ಈತ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬೆಳ್ಳಾರೆ ಮಸೀದಿಯಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ ಎಂದು ಬರೆದು ಪೋಸ್ಟ್ ಮಾಡಿದ್ದ ಎನ್ನಲಾಗಿದ್ದು, ಆದ್ದರಿಂದ ಮಸೀದಿ ಆಡಳಿತ ಮಂಡಳಿ ಈತ ಸುಳ್ಳು ದ್ವೇಷದ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿದ್ದಾನೆ. ಪ್ರವೀಣ್ ನೆಟ್ಟಾರು ಹತ್ಯೆಯನ್ನೂ ಉಲ್ಲೇಖಿಸಿ ಬೆಳ್ಳಾರೆ ಮಸೀದಿಗೆ ತಳುಕು ಹಾಕಿ ಪೋಸ್ಟ್ ಮಾಡಿದ್ದಾನೆ. ಜಾತಿಗಳ ನಡುವೆ ವೈಷಮ್ಯ, ಕೋಮು ಪ್ರಚೋದನೆಯ ರೀತಿಯಲ್ಲಿ ಬರೆದಿದ್ದಾನೆ. ಈತನ ಮೇಲೆ ಕಾನೂನು ಕ್ರಮ ಜರುಗಿದಬೇಕೆಂದು ಬೆಳ್ಳಾರೆ ಮಸೀದಿ ಆಡಳಿತ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.