ಮಂಗಳೂರು: ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆನ್ನುವುದು ಕಯ್ಯಾರ ಕಿಂಞಣ್ಣ ರೈಗಳ ಅಂತಿಮ ಆಶಯವಾಗಿತ್ತು ಎಂದು ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಶ್ರೀನಾಥ್ ತಿಳಿಸಿದ್ದಾರೆ.
ಆರ್ಟ್ ಕೆನರಾ ಟ್ರಸ್ಟ್ ಮಂಗಳೂರು, ಕವಿತಾ ಕುಟೀರ (ರಿ).ಪೆರಡಾಲ ಮತ್ತು ನವಜೀವನ ಹೈಸ್ಕೂಲ್ ಪೆರಡಾಲ,ಕಾಸರಗೋಡು ಇದರ ಹಿರಿಯ ವಿದ್ಯಾರ್ಥಿಗಳ ಸಹಯೋಗ ದೊಂದಿಗೆ ಶನಿವಾರ ಬಿಇಎಂ ಹೈಸ್ಕೂಲ್ ಸಭಾಂಗಣದಲ್ಲಿ ಉಡುಪಿ,ದಕ್ಷಿಣ ಕನ್ನಡ ಉಮತ್ತು ಕಾಸರ ಗೋಡು ಜಿಲ್ಲೆ ಗಳ ಬರಹಗಾರರ ಆಯ್ದ ಕತೆ ಕವನ ಸಂಕಲನ ಕವಿ ಕಯ್ಯಾರ ಸ್ಮೃತಿ ಐಕ್ಯವೇ ಮಂತ್ರ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಮಾತನಾಡುತ್ತಿದ್ದರು.ಅವರ ಬಗ್ಗೆ ಸಂಶೋಧನೆ ಮಾಡಿದಾಗ ಅವರ ಜ್ಞಾನದ ಬಲದಿಂದ ಅವರೆ ನನಗೆ ಮಾರ್ಗದರ್ಶಕರಾಗಿದ್ದರು ಅವರ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಬದುಕಿನ ಕೊನೆಯ ಘಟ್ಟದವರೆಗೂ ಹೋರಾಟ ಮಾಡಿದವರು.ಆದರೆ ಅವರ ಆಸೆ ಕೊನೆಗೂ ನೆರವೇರಲಿಲ್ಲ.
ಕಯ್ಯಾರರು ತುಳು,ಕನ್ನಡ ಸಾಹಿತ್ಯದ ಜೊತೆ ಕೃಷಿ ಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಕೃತಿ ಯನ್ನು ಬಿಡುಗಡೆ ಮಾಡಿದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತ ನಾಡುತ್ತಾ,ಕಯ್ಯಾರ ಕಿಂಞಣ್ಣ ರೈಗಳು ಸಾಹಿತ್ಯ ಲೋಕದ ದೊಡ್ಡ ಣ್ಣ ಮಾತ್ರವಲ್ಲ ಕನ್ನಡ ತುಳು ಸಾಹಿತ್ಯಲೋಕದ ಅಪಾರ ಅಭಿಮಾನಕ್ಕೆ ಪಾತ್ರರಾದವರು ಎಂದು ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಯ ಅಧ್ಯಕ್ಷ ತಾರಾನಾಥ ಗಟ್ಟಿ ಮಾತ ನಾಡು ತ್ತಾ,ಕಾಸರಗೋಡು ಕರ್ನಾಟಕಕ್ಕೆ ಸೇರ ಬೇಕೆಂದು ಬಲವಾಗಿ ಪ್ರತಿಪಾದಿಸಿದವರು. ಐಕ್ಯವೊಂದೇ ಮಂತ್ರ ಗೀತೆಯನ್ನು ರಚಿಸಿದವ ರು ಕವಿ ಬಿ.ಎಂ.ಇದಿನಬ್ಬ ಆ ಗೀತೆಯನ್ನು ಇನ್ನಷ್ಟು ಪ್ರಚಾರ ಮಾಡಿದವರು.ಕನ್ನಡ ತುಳು ಸಾಹಿತ್ಯಕ್ಕೆ ಅಪಾರ ಕೊಡುಗೆಯಾಗಿ ನೀಡಿದವರು ಅವರ ಬಗ್ಗೆ ಕೃತಿ ರಚನೆ ಅತ್ಯಂತ ಶ್ಲಾಘನೀಯ ಎಂದರು.
ಕೃತಿ ಯನ್ನು ಪರಿಚಯಿಸಿದ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಕೃಷ್ಣ ಮೂರ್ತಿ ಮಾತನಾಡುತ್ತಾ,ಕವಿ ಕಯ್ಯಾರರು ಐಕ್ಯವೊಂದೇ ಮಂತ್ರ ಎನ್ನುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿದವರು. ಪತ್ರಕರ್ತರಾಗಿ ನವಜೀವನ ಹೈಸ್ಕೂಲ್ ಮೂಲಕ ಶಿಕ್ಷಣಸಂಸ್ಥೆ ನಡೆಸಿದವರು, ಕವಿಗಳಿಗೆ ಗೌರವ ದೊರೆಯುವುದು ಅವರಿಗೆ ನಿರ್ಮಿಸುವ ಸ್ಮಾರಕಗಳಿಂದಲ್ಲ ಅವರ ಬಗ್ಗೆ ಕೃತಿ ಗಳು ಸೃಷ್ಟಿ ಯಾದರೆ ಅದು ಅವರಿಗೆ ಸಲ್ಲುವ ಗೌರವ.ಇಂತಹ ಗೌರವ ಐಕ್ಯವೇ ಮಂತ್ರ ಕೃತಿಯ ಮೂಲಕ ಕಯ್ಯಾರರಿಗೆ ಸಂದಂತಾ ಗಿದೆ ಈ ಕೃತಿಯಲ್ಲಿ ಒಟ್ಟು 99 ಕವಿತೆಗಳು, 11ಕಥೆಗಳು ಒಳಗೊಂಡ ಐಕ್ಯವೇ ಮಂತ್ರ ಹಿರಿಯ ಕಿರಿಯ ಕವಿಗಳ ಕವನ ಕಥೆಗಳ ಅಮೂಲ್ಯ ಸಂಗ್ರಹವಾಗಿದೆ ಎಂದರು.
ಸಮಾರಂಭದಲ್ಲಿ ದುರ್ಗಾ ಪ್ರಸಾದ್ ರೈ,ಡಾ.ಸಾಯಿಗೀತಾ ಹೆಗ್ಡೆ, ಕಯ್ಯಾರ ಕಿಂಞಣ್ಣ ರೈರ ಶಿಷ್ಯರಾದ ಫ್ರಾನ್ಸಿಸ್ ಡಿ ಸೋಜ ರಾಧಾಕೃಷ್ಣ ಉಳಿಯತಡ್ಕ,ಬಿಇಎಂ ಸ್ಕೂಲ್ ನ ಸಂಚಾಲಕ ಮನೋಜ್ , ಮುಖ್ಯೋ ಪಾಧ್ಯಾಯ ಯಶವಂತ ಮಾಡ,ಆರ್ಟ್ ಕೆನರಾ ಟ್ರಸ್ಟ್ ನ ಟ್ರಸ್ಟಿಗಳಾದ ಸುಭಾಸ್ ಚಂದ್ರ ಬಸು,ರಾಜೇಂದ್ರ ಕೇದಿಗೆ ಉಪಸ್ಥಿತರಿದ್ದರು.ಕವಿತಾ ಕುಟೀರದ ಅಧ್ಯಕ್ಷ ಪ್ರಸನ್ನ ರೈ ಸ್ವಾಗತಿಸಿದರು.ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು, ನೇಮಿರಾಜ ಶೆಟ್ಟಿ ವಂದಿಸಿದರು.