image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜ.10ನಲ್ಲಿ ಓಶಿಯನ್ ಪರ್ಲ್ ನಲ್ಲಿ 'ಸ್ವರಾನುಬಂಧ ಸಂಗೀತ ಉತ್ಸವ'

ಜ.10ನಲ್ಲಿ ಓಶಿಯನ್ ಪರ್ಲ್ ನಲ್ಲಿ 'ಸ್ವರಾನುಬಂಧ ಸಂಗೀತ ಉತ್ಸವ'

ಮಂಗಳೂರು,ಜ.6;ನಗರದ ನವ ಭಾರತ್ ಸರ್ಕಲ್ ಬಳಿಯಿರುವ   ಓಶಿಯನ್ ಪರ್ಲ್ ಸಭಾಂಗಣದಲ್ಲಿ  ಜನವರಿ 10 ರಂದು ಶನಿವಾರ ರಂದು ಮಧ್ಯಾಹ್ನ 3.00 ರಿಂದ ರಾತ್ರಿ 8  ಗಂಟೆಯ  ವರೆಗೆ ಸ್ವರಾನುಬಂಧ ಸಂಗೀತ ಉತ್ಸವ ನಡೆಯಲಿದೆ. ಈ ಉತ್ಸವದಲ್ಲಿ ಕಲಾಸಾಧನ  ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ, ಬಳಿಕ ಶ್ರೀಮತಿ ವಿಭಾ ಎಸ್. ನಾಯಕ್ ಮಂಗಳೂರು ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ.ತಬಲಾದಲ್ಲಿ ವಿಘ್ನೇಶ್ ಪ್ರಭು, ಹಾಗೂ ಹಾರ್ಮೋನಿಯಂ:ನಲ್ಲಿ ಮೇಧಾ ಜಿ. ಭಟ್ ಸಾಥ್ ನೀಡಲಿದ್ದಾರೆ.

ಉಸ್ತಾದ್ ರಫೀಕ್ ಖಾನ್ ಮತ್ತು ಪಿ. ಸಮೀರ್ ರಾವ್ ಅವರಿಂದ ಸಿತಾರ್ ಮತ್ತು ಕೊಳಲು ಜುಗಲ್ಬಂದಿ, ಪಂ. ರಾಜೇಂದ್ರ ನಾಕೋಡ್ ಅವರೊಂದಿಗೆ ನಡೆಯಲಿದೆ.

ಯುವ ಕಲಾವಿದರಲ್ಲಿ ಸಂಗೀತದ ಕುರಿತು ಆಸಕ್ತಿ ಹೆಚ್ಚಿಸಲು ಹಾಗೂ ಅವರಿಗೆ ವೇದಿಕೆ ಕಲ್ಪಿಸಲು ಪ್ರತೀ ವರ್ಷ ಸಂಗೀತ ಉತ್ಸವ ಆಯೋಜಿಸಲಾಗುತ್ತಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಭಾರತೀಯ ಹಿಂದುಸ್ಥಾನಿ ಸಂಗೀತ ಪರಂಪರೆ ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಗಳನ್ನು ಪ್ರತೀ ವರ್ಷ ಆಯೋಜಿಸಲಾಗುತ್ತಿದೆ. ಸಂಗೀತ ಕಾರ್ಯಕ್ರಮ ದಲ್ಲಿ ಎಲ್ಲರಿಗೂ ಉಚಿತ ಪ್ರವೇಶ ವಿದೆ ಎಂದು ಕಲಾ ಸಾಧನ ಸಂಸ್ಥೆ ನಿರ್ದೇಶಕಿ  ಶ್ರೀಮತಿ ವಿಭಾ ನಾಯಕ್ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿ ಯಲ್ಲಿ ಸಂಸ್ಥೆಯ ಗೌರವ ಸಲಹೆಗಾರ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.

 

Category
ಕರಾವಳಿ ತರಂಗಿಣಿ