image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೊಡಿಯಾಲ್‌ಗುತ್ತು ವೆಟ್‌ವೆಲ್‌ನಿಂದ ಕೊಳಚೆ ನೀರು ತೋಡುಗಳಿಗೆ ಹರಿವು: ಸ್ಥಳಕ್ಕೆ ಐವನ್ ಡಿʼಸೋಜಾ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ

ಕೊಡಿಯಾಲ್‌ಗುತ್ತು ವೆಟ್‌ವೆಲ್‌ನಿಂದ ಕೊಳಚೆ ನೀರು ತೋಡುಗಳಿಗೆ ಹರಿವು: ಸ್ಥಳಕ್ಕೆ ಐವನ್ ಡಿʼಸೋಜಾ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ

ಮಂಗಳೂರು:  ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಡಿಯಾಲ್‌ಬೈಲ್‌ ವಾರ್ಡಿನಲ್ಲಿ ಕೊಡಿಯಾಲ್‌ಗುತ್ತು ವೆಟ್‌ವೆಲ್‌ನಿಂದ ಕೊಳಚೆ ನೀರುನ್ನು  ತೋಡುಗಳಲ್ಲಿ ಬಿಟ್ಟಿದ್ದು, ಸ್ಥಳೀಯ ಬಾವಿಗಳ ನೀರು ಕಲುಷಿತಗೊಂಡು ದುರ್ನಾತ ಬೀರುತ್ತಿದ್ದು, ಇಂತಹ ಬಾವಿಗಳ ನೀರನ್ನು ಉಪಯೋಗಿಸಿದಲ್ಲಿ ಸದ್ರಿ ಪ್ರದೇಶದ ನಿವಾಸಿಗಳಿಗೆ ರೋಗ-ರುಜಿನಗಳು ಬರುವ ಸಾದ್ಯತೆ ಇದ್ದು ಸ್ಥಳೀಯ ಮಾಜಿ ಕಾರ್ಫೋರೇಟರ್‌ ಪ್ರಕಾಶ್‌ ಬಿ. ಸಾಲ್ಯಾನ್‌  ವಿನಂತಿ ಮೇರೆಗೆ ವಿಧಾನ ಪರಿಷತ್‌ ಶಾಸಕ ಐವನ್‌ ಡಿʼಸೋಜಾ ಸದ್ರಿ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಸದ್ರಿ ಪ್ರದೇಶದ ನಾಗರಿಕರಲ್ಲಿ ಸಮಸ್ಯೆಗಳ ಬಗ್ಗೆ  ತಿಳಿದುಕೊಂಡು ಕೂಡಲೇ ಇದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಈ ಪ್ರದೇಶದಲ್ಲಿ ವೆಟ್‌ವೆಲ್‌ನಿಂದ ಬರುವಂತಹ  ಕೊಳಚೆ ನೀರು ಕುದ್ರೋಳಿ ವೆಟ್‌ವೆಲ್‌ ಹೋಗಬೇಕಾಗಿದ್ದು, ಅಲ್ಲಿಯ ಇರತಕ್ಕಂತಹ ಪೈಪ್‌ಗಳು ಹಳೆಯದಾಗಿರುವುದರಿಂದ ಸದ್ರಿ ಕೊಳಚೆ ನೀರುನ್ನು  ಸಾರ್ವಜನಿಕ ತೋಡಿಗೆ ಬಿಟ್ಟಿರುವುದರಿಂದ ಸದ್ರಿ ಪ್ರದೇಶವು ದುರ್ವಾಸನೆ ಬೀರುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಪ್ಷರಿಣಾಮ ಬೀರುವುದರಿಂದ ದೂರು ನೀಡಿದ್ದರು. ಅಲ್ಲದೇ ಬಾವಿಗಳ ನೀರು ಸೊಳ್ಳೆಗಳ ಕಾಟದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ತಿಳಿಸಿದರು ಈ ಬಗ್ಗೆ ಅಧಿಕಾರಿಗಳಿಗೆ ಮಾತನಾಡಿ ಅಧಿಕಾರಿಗಳಿಗೆ ಈ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುವುದರ ಜೊತೆಗೆ ಕೂಡಲೇ ಇದನ್ನು ಸರಿಪಡಿಸುವಂತೆ ನಗರ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು

.ಈ ಬಗ್ಗೆ ಕೂಡಲೇ ಕ್ರಮವಹಿಸುವುದಾಗಿ ಮತ್ತು ಕೊಳಚೆ ನೀರನ್ನು ಪೈಪ್‌ನ ಮುಖಾಂತರ ಹರಿಯವಂತೆ ಕ್ರಮಕೈಗೊಳೂವುದಾಗಿ ಅಧಿಕಾರಿಗಳು ತಿಳಿಸಿದರು. ಮೂರು ಪೈಪ್‌ಗಳಿಗೆ 5ಕೋಟಿಯ ಪ್ರಸ್ತಾವನೆ ಸಲ್ಲಿಸಿದ್ದು, ಕೂಡಲೇ ಸದ್ರಿ ಕಾಮಗಾರಿಯನ್ನು ಕೈಗೋಳ್ಳುವುದಾಗಿ ಇಂಜಿನಿಯರ್‌ ತಿಳಿಸಿದ್ದಾರೆ ಎಂದು ಐವನ್‌ ಡಿʼಸೋಜಾ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಕಾಶ್ ಬಿ ಸಾಲ್ಯಾನ್, ಅನಂತ್ ಕಾಮತ್, ಸಂಜಯ್ ಶೇಟ್, ರಘುರಾಜ್ ಕದ್ರಿ, ದಿನೇಶ್ ಬಲಿಪತೋಟ, ದೇವಿ ಪ್ರಸಾದ್ ಕದ್ರಿ, ಹರೀಶ್ ಕೊಡಿಯಾಲ್ ಬೈಲ್, ಕೇಶವ , ಉಮಾನಾಥ ಗುರಿಕಾರ,  ರವಿ ಬಲಿಪತೋಟ, ಶೈಲೇಶ್ ಬಲಿಪತೋಟ, ಸುರೇಶ್ , ಧನಂಜಯ್, ಗಂಗಾಧರ್ ಮಾಸ್ಟರ್, ಮತ್ತಿತರರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ