ಮಂಗಳೂರು: ಬಿಕರ್ನಕಟ್ಟೆ ಕಾರ್ಮೆಲ್ ಹಿಲ್‌ನಲ್ಲಿರುವ ಬಾಲಯೇಸು ಪುಣ್ಯಕ್ಷೇತ್ರದಲ್ಲಿ ಜ.14 ಹಾಗೂ 15ರಂದು ವಾರ್ಷಿಕ ಮಹೋತ್ಸವ ನಡೆಯಲಿದೆ. ಜ. 14ರಂದು ಸಂಜೆ 6 ಗಂಟೆಗೆ ಮಹೋತ್ಸವದ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ನಡೆಸಿಕೊಡಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ವೃದ್ಧರು ಹಾಗೂ ಅಸ್ವಸ್ಥರಿಗಾಗಿ ಪ್ರಾರ್ಥನೆ ಹಾಗೂ ಬಲಿಪೂಜೆ ನಡೆಯಲಿದ್ದು, ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಅ.ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಬಲಿಪೂಜೆ ನೆರವೇರಿಸಲಿದ್ದಾರೆ ಎಂದು ಬಾಲಯೇಸು ಪುಣ್ಯಕ್ಷೇತ್ರದ ನಿರ್ದೇಶಕ ವಂ. ಸ್ಟೀಫನ್ ಪಿರೇರಾ ಅವರು ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜ. 15ರಂದು ಬೆಳಗ್ಗೆ 10 ಗಂಟೆಗೆ ಮಕ್ಕಳಿಗಾಗಿ ನಡೆಯುವ ವಿಶೇಷ ಬಲಿಪೂಜೆಯನ್ನು ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ. ವಂ. ದುಮಿಂಗ್ ಡಾಯಸ್ ನಡೆಸಲಿದ್ದಾರೆ. ಮಹೋತ್ಸವದ ಸಮಾರೋಪ ಪ್ರಾರ್ಥನಾವಿಧಿ ಸಂಜೆ 6 ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಗುರು ವಂ. ಮ್ಯಾಕ್ಸಿಂ ಎಲ್. ನೊರೊನ್ಹಾ ನೆರವೇರಿಸಲಿದ್ದಾರೆ. ನವೆನಾ ಸಂದರ್ಭದಲ್ಲಿ ಜ. 5 ರಂದು ಬೆಳಗ್ಗೆ 10.30ರ ಪ್ರಾರ್ಥನಾ ವಿಧಿಯನ್ನು ಬರೇಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ. ವಂ. ಇಗ್ನೇಶಿಯಸ್ ಡಿಸೋಜಾ ಹಾಗೂ ಜ.10ರಂದು ಬೆಳಗ್ಗೆ 10:30ರ ಬಲಿಪೂಜೆಯನ್ನು ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ. ಹೆನ್ರಿ ಡಿಸೋಜಾ ನೆರವೇರಿಸಲಿದ್ದಾರೆ.
ಜ.5ರಿಂದ ನವೇನಾ ಪ್ರಾರ್ಥನೆ:
ವಾರ್ಷಿಕ ಮಹೋತ್ಸವಕ್ಕೆ ಸಿದ್ದತೆಯಾಗಿ ಜ.5ರಿಂದ 13ವರೆಗೆ ನವೇನಾ ಪ್ರಾರ್ಥನೆ ನಡೆಯಲಿದೆ. ನವೇನಾ ಸಂದರ್ಭದಲ್ಲಿ ಪ್ರತಿದಿನ 9 ಪ್ರಾರ್ಥನಾ ವಿಧಿಗಳು ನಡೆಯಲಿವೆ. ನವೇನಾ ಹಾಗೂ ಹಬ್ಬದ ದಿನಗಳಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ ಇರಲಿದೆ.
400 ಮಕ್ಕಳಿಗೆ ವಿದ್ಯಾರ್ಥಿ ವೇತನ:
ಕಾರ್ಮೆಲ್ ಸಭೆಯ ಸುಧಾರಕ ಸಂತ ಯೊವಾನ್ನರನ್ನು ಸಂತ ಪದವಿಗೇರಿಸಿ 300 ವರ್ಷಗಳಾದ ಹಿನ್ನೆಲೆಯಲ್ಲಿ ಸುಮಾರು 400 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುತ್ತದೆ. ಜ. 7ರಂದು ಬೆಳಗ್ಗೆ 8.30ರಿಂದ ಕಣ್ಣು ತಪಾಸಣಾ ಶಿಬಿರ, ಜ.9 ಮತ್ರಂತು 10 ರಂದು ಬೆಳಗ್ಗೆ 8.30ರಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಾಲಯೇಸು ಗುರುಮಠದ ಮುಖ್ಯಸ್ಥ ವಂ. ಮೆಲ್ವಿನ್ ಡಿಕುನ್ಹಾ, ವಂ. ದೀಪ್ ಫೆರ್ನಾಂಡಿಸ್, ವಲೇರಿಯನ್ ಫುರ್ಟಾಡೊ, ವಿಲ್ ಫ್ರೆಡ್ ಲಸ್ರಾದೊ ಉಪಸ್ಥಿತರಿದ್ದರು.