image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದ.ಕ. ಜಿಲ್ಲಾ ಪ್ರಾಣಿ ದಯಾ ಸಂಘದಿಂದ ಜ.4 ರಂದು ಪ್ರತಿಭಟನೆ

ದ.ಕ. ಜಿಲ್ಲಾ ಪ್ರಾಣಿ ದಯಾ ಸಂಘದಿಂದ ಜ.4 ರಂದು ಪ್ರತಿಭಟನೆ

ಮಂಗಳೂರು: ಬೀದಿ ನಾಯಿಗಳನ್ನು ಶೆಲ್ಟರ್ ಮಾಡುವಂತೆ ಆದೇಶ ಹೊರಡಿಸಿರುವ ಬೆನ್ನಲ್ಲಿಯೇ ಪ್ರಾಣಿ ಪ್ರೇಮಿಗಳು ರಾಜ್ಯಾಧ್ಯಂತ ಜ.4 ರಂದು ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಮುಷ್ಕರ ನಡೆಸಲಿದ್ದು, ಈ ಸಲುವಾಗಿ ದ.ಕ. ಜಿಲ್ಲಾ ಪ್ರಾಣಿ ದಯಾ ಸಂಘದ ವತಿಯಿಂದ ಮಂಗಳೂರಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎನಿಮಲ್ ಕೇರ್ ಟ್ರಸ್ಟ್‌ನ ಟ್ರಸ್ಟಿ ಹಾಗೂ ನ್ಯಾಯವಾದಿ ಸುಮಾ ನಾಯಕ್ ಹೇಳಿದರು. ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಮಂಗಳೂರಿನಲ್ಲಿ ಕಳೆದ 20 ವರ್ಷಗಳಿಂದ ಸರಿಯಾದ ಎಬಿಸಿ ಕೇಂದ್ರಗಳು ಕಾರ್ಯಚರಿಸುತ್ತಿದ್ದು, 2006 ರಿಂದ ಬೀದಿ ನಾಯಿಗಳಿಗೆ ಪರಿಣಾಮಕಾರಿಯಾಗಿ ಸಂತಾನಹರಣ ಚಿಕಿತ್ಸೆ ನೀಡುತ್ತಿದೆ. ಮಾತ್ರವಲ್ಲ 500 ಜನರು ಪ್ರತಿನಿತ್ಯ ಬೀದಿ ನಾಯಿಗಳಿಗೆ ಆಹಾರವನ್ನು ನೀಡುತ್ತಿದ್ದಾರೆ. ಕಳೆದ 20 ವರ್ಷದಿಂದ ಸರ್ಕಾರಕ್ಕೆ ಎಬಿಸಿಯನ್ನು ಸ್ಥಾಪಿಸಲು ಹೇಳಿದಾಗ ಹಣ ಇಲ್ಲದಿರುವುದು ನಾಯಿಗಳನ್ನು ಶೆಲ್ಟರ್ ಮಾಡಲು ಮಾತ್ರ ಹಣವಿದಿಯೇ ಎಂದು ಪ್ರಶ್ನಿಸಿದರು.

ಸುಪ್ರಿಂಕೋರ್ಟ್ ಏಕಾಏಕಿ ಸದೇಶವನ್ನು ಹೊರಡಿಸಿದ್ದು, ಎಡಬ್ಲೂಬಿಐನ ಎಸ್‌ಒಪಿಯಲ್ಲಿರುವ ಅನೇಕ ಅಂಶಗಳು ಇರುವುದಿಲ್ಲ. ಎಸ್‌ಒಪಿಯಲ್ಲಿ ಹೆದ್ದಾರಿಯಲ್ಲಿ ಇರುವ ಜಾನುವಾರುಗಳನ್ನೂ ಒಂದು ಗೂಡಿನಲ್ಲಿ ಇರಿಸಬೇಕು ಎಂದು ಇದೆ ಆದರೆ ಸುಪ್ರಿಂ ಕೋರ್ಟ್ ಇದನ್ನು ಬಿಟ್ಟು ಕೇವಲ ನಾಯಿಗಳನ್ನು ಮಾತ್ರ ಗೂಡಿನಲ್ಲಿ ಕೂರಿಸಲು ಹೊರಟಿದ್ದಾರೆ. ನಾಯಿಗಳು ಭಾವನಾತ್ಮಕವಾಗಿ ಮನುಷ್ಯರೊಂದಿಗೆ ಬೆರೆಯುತ್ತವೆ. ಅವರುಗಳನ್ನು ದಿನವಿಡಿ ಗೂಡಿನಲ್ಲಿ ಕೂರಿಸಿದರೆ ಮಾನಸಿಕ ಖಿನ್ನತೆಗೆ ಒಳಗಾಗುತ್ತವೆ ಎಂದರು. ಸುಪ್ರಿಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಕೇಸನ್ನು ತೆಗೆದುಕೊಂಡು ನ.2 ರಂದು ಆದೇಶ ಹೊರಡಿಸಿದ್ದು, ನಾವು ನಮ್ಮ ವಾದವನ್ನು ಆಲಿಸುವಂತೆ ಕೋರ್ಟ್‌ಗೆ 2 ಲಕ್ಷ ಹಣವನ್ನು ಕಟ್ಟಿ ಅವಕಾಶ ಮಾಡಿಕೊಡಲು ಕೇಳಿದಾಗ ಕೋಟ್ ರಜೆಯ ಕೊನೆಯ ದಿನ ಡಿ.17ಕ್ಕೆ ನಿಗಧಿಯಾಗಿದ್ದು, ಅದನ್ನು ಏಕಾಏಕಿ ಜ.7ಕ್ಕೆ ಮುಂದೂಡಲಾಗಿದ್ದು, ಈ ಮೂಲಕ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಆದುದರಿಂದ ಪ್ರತಿಭಟನೆಯ ಮೂಲಕ ಸುಪ್ರಿಂಕೋರ್ಟ್‌ಗೆ ನಮ್ಮ ವಾದ ಕೇಳಲಿ ಎಂದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ನಾವು ಈಗಗಲೇ ಸ್ಥಳೀಯ ಸರ್ಕಾರದ ಜೊತೆ ಮಾತನಾಡಿದ್ದು, ಮಂಗಳೂರಿನ ಮನಪಾದ ಪ್ರತೀ ವಾರ್ಡ್‌ಗಳಲ್ಲಿ ಪ್ರತ್ಯೇಕವಾಗಿ ಆಹಾರ ನೀಡಲು ತಾಣಗಳನ್ನು ಗುರುತಿಸುವಂತೆ ಮನವಿ ಮಾಡಿದ್ದು, ಅದಕ್ಕೆ ಪೂರಕವಾಗಿ ಸ್ಪಂಧನೆ ಸಿಕ್ಕಿದೆ ಎಂದ ಅವರು ನ್ಯಾಯಾಲಯ ಆದೇಶ ಮಾಡಿದರೆ ಸಾಕಾಗುವುದಿಲ್ಲ. ಸರ್ಕಾರವೂ ಸಂತಾನಹರಣಕ್ಕೆ ಕ್ರಮ ಹಾಗೂ ರೇಬೀಸ್ ಲಸಿಕೆಯನ್ನು ಸರಿಯಾದ ರೀತಿಯಲ್ಲಿ ನೀಡುವಂತೆ ಮಾಡಬೇಕು ಎಂದರು. ಬೀದಿ ನಾಯಿಗಳಿಗೆ ಆಹಾರ ಹಾಕುವುದರಿಂದ ಅವುಗಳು ಸ್ನೇಹವನ್ನು ಹೊಂದುತ್ತವೆ. ಇದರಿಂದಾಗಿ ನಾಯಿಗಳ ಸಂತಾನಹರಣ ಹಾಗೂ ಲಸಿಕೆ ನೀಡಲು ಸುಲಭವಾಗುತ್ತದೆ ಎಂದ ಅವರು ಸರ್ಕಾರ ಬೀದಿ ನಾಯಿಗಳಿಂದ ರೇಬೀಸ್ ಬರುತ್ತಿದೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಬೀದಿ ನಾಯಿಗಳಿಂದ ಯಾವುದೇ ರೇಬೀಸ್ ಬರುತ್ತಿಲ್ಲ. ಬದಲಾಗಿ ಮನೆಯಲ್ಲಿ ಸಾಕಿದ ನಾಯಿಯಿಂದ ಬರುತ್ತಿದೆ. ಮಾತ್ರವಲ್ಲ. ಬೆಕ್ಕು, ಇಲಿ ಕಚ್ಚಿದರೂ ರೇಬೀಸ್ ಕಾಯಿಲೆ ಬರುತ್ತಿದೆ. ಆದರೆ ಎಲ್ಲವನ್ನೂ ನಾಯಿ ಕಡಿತದಿಂದ ಬರುತ್ತಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ದಿನೇಶ್ ಪೈ, ಹರೀಶ್ ರಾಜಕುಮಾರ, ಡಾ. ಯಶಸ್ವೀ ನಾರಾವಿ, ರಜನಿ ಶೆಟ್ಟಿ, ಡಾ. ಶೃತಿ, ಚಾಲ್ಸ್ ಇದ್ದರು.

Category
ಕರಾವಳಿ ತರಂಗಿಣಿ