image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಸ್‌ ಸಿಡಿಸಿಸಿ ಬ್ಯಾಂಕಿನಲ್ಲಿ ಕೃಷಿತಜ್ಞ ಪ್ರತಿನಿಧಿಗಳ ಸಭೆ

ಎಸ್‌ ಸಿಡಿಸಿಸಿ ಬ್ಯಾಂಕಿನಲ್ಲಿ ಕೃಷಿತಜ್ಞ ಪ್ರತಿನಿಧಿಗಳ ಸಭೆ

ಮಂಗಳೂರು 2026-27ನೇ ಸಾಲಿಗೆ ಅಲ್ಪಾವಧಿ ಬೆಳೆ ಸಾಲ ಮಿತಿಯನ್ನು ನಿಗದಿಪಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಕೃಷಿತಜ್ಞ ಪ್ರತಿನಿಧಿಗಳ ಸಮಾಲೋಚನಾ ಸಭೆಯು ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಡಿಸೆಂಬರ್ -30 ಮಂಗಳವಾರ ಬ್ಯಾಂಕಿನ ಅಧ್ಯಕ್ಷರಾದ 'ಸಹಕಾರ ರತ್ನ'  ಡಾ | ಎಂ.ಎನ್. ರಾಜೇಂದ್ರ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಅಧ್ಯಕ್ಷತೆ ವಹಿಸಿದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಮಾತನಾಡಿ,  ಎಸ್‌ಸಿಡಿಸಿಸಿ ಬ್ಯಾಂಕ್ 2025-26ನೇ ಸಾಲಿಗೆ ಬೆಳೆಸಾಲಗಳ ಗುರಿಯು ರೂ.2150.00 ಕೋಟಿ ಆಗಿದ್ದು, ಈಗಾಗಲೇ ರೂ.1533.19 ಕೋಟಿ ಬೆಳೆಸಾಲ ನೀಡಲಾಗಿದೆ. 31-03-2025ರ ಅಂತ್ಯಕ್ಕೆ ಬೆಳೆಸಾಲಗಳ ಹೊರಬಾಕಿ ರೂ.2123.11 ಕೋಟಿ ಆಗಿದೆ ಎಂದರು.

ನಬಾರ್ಡ್ ಪುರ್ನಧನ ಸಾಲ ಹಾಗೂ ಎಸ್‌ಸಿಡಿಸಿಸಿ  ಬ್ಯಾಂಕಿನ ಸ್ವಂತ ಬಂಡವಾಳದಿಂದ ಕೃಷಿ ಉದ್ದೇಶಕ್ಕಾಗಿ 2024-25ನೇ ಸಾಲಿನಲ್ಲಿ ಒಟ್ಟು ರೂ.2300.74 ಕೋಟಿ ಅವಧಿ ಸಾಲವನ್ನು ನೀಡಲಾಗಿದ್ದು, 2025-26 ನೇ ಸಾಲಿಗೆ ಈಗಾಗಲೇ (ನವೆಂಬರ್ -2025ರವರೆಗೆ) ರೂ.107.45 ಕೋಟಿ ಮಧ್ಯಮಾವಧಿ/ದೀರ್ಘಾವಧಿ ಕೃಷಿ ಸಾಲವನ್ನು ಬ್ಯಾಂಕ್ ನೀಡಿದೆ ಎಂದು ಸಭೆಯಲ್ಲಿ ಡಾ| ಎಂ.ಎನ್. ರಾಜೇಂದ್ರ ಕುಮಾ‌ರ್ ತಿಳಿಸಿದರು.


2026-27ನೇ ಸಾಲಿಗೆ ವಿವಿಧ ಬೆಳೆಗಳಿಗೆ ಕೊಡತಕ್ಕ ಅಲ್ಪಾವಧಿ ಬೆಳೆಸಾಲದ ಮಿತಿಯನ್ನು ಕೃಷಿತಜ್ಞ ಪ್ರತಿನಿಧಿಗಳೊಂದಿಗೆ, ನಬಾರ್ಡ್ ಲೀಡ್ ಬ್ಯಾಂಕ್, ಸಹಕಾರಿ ಇಲಾಖೆ, ತೋಟಗಾರಿಕೆ, ಕೃಷಿ ಹಾಗೂ ಇತರ ಇಲಾಖಾಧಿಕಾರಿಗಳ ಸಮಾಲೋಚನೆಯ ಮೂಲಕ ನಿಗದಿಪಡಿಸಲಾಯಿತು.


ಸಭೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರುಗಳಾದ ಎಂ. ವಾದಿರಾಜ್ ಶೆಟ್ಟಿ,  ಶಶಿಕುಮಾರ್ ರೈ ಬಾಲ್ಯೋಟ್ಟು , ದೇವಿಪ್ರಸಾದ್ ಶೆಟ್ಟಿ ಬೆಳಪು, ಅಶೋಕ್ ಕುಮಾರ್ ಶೆಟ್ಟಿ. ಮೋನಪ್ಪ ಶೆಟ್ಟಿ ಎಕ್ಕಾರು, ಕುಶಾಲಪ್ಪ ಗೌಡ, ಎಸ್. ಎನ್. ಮನ್ಮಥ, ಕೆ. ಜೈರಾಜ್ ಬಿ. ರೈ. ಸದಾಶಿವ ಉಳ್ಳಾಲ್, ರಾಜೇಶ್ ರಾವ್,  ಮಹೇಶ್ ಹೆಗ್ಡೆ, ಎಸ್. ಬಿ. ಜಯರಾಮ ರೈ,
ದ.ಕ ಹಾಗೂ ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರುಗಳಾದ  ಹೆಚ್. ಎನ್. ರಮೇಶ್ ಮತ್ತು ಶ್ರೀಮತಿ ಲಾವಣ್ಯ,  ನಬಾರ್ಡ್ ಡಿಡಿಎಂ ಶ್ರೀಮತಿ ಸಂಗೀತಾ ಕರ್ತಾ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಗೋಪಾಲಕೃಷ್ಣ ಭಟ್ ಕೆ., ಮಂಗಳೂರು ಲೀಡ್ ಡಿಸ್ಟ್ರಿಕ್ಟ್ ಮೆನೇಜರ್ ಶ್ರೀಮತಿ ಕವಿತಾ ಶೆಟ್ಟಿ, ಉಡುಪಿ ಲೀಡ್ ಡಿಸ್ಟ್ರಿಕ್ಟ್ ಮೆನೇಜರ್ ಕೆ.ಎಸ್.ಮಹಾದೇವಪ್ಪ ,  ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ, ಉಡುಪಿ ಜಿಲ್ಲೆಯ ಉಪ ನಿರ್ದೇಶಕರಾದ ಚಂದ್ರಶೇಖರ್ ನಾಯ್ಕ,  ದಕ್ಷಿಣ ಕನ್ನಡ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ದರ್ಶನ್ ಜಿ., ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಅರುಣ್ ಕುಮಾರ್. ಶೆಟ್ಟಿ,  ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ದಿಲೀಪ್ ಕುಮಾರ್ ,  ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಸುಮಲತಾ , ರಬ್ಬರ್ ಬೋರ್ಡ್ ಡೆವೆಲಪ್ ಮೆಂಟ್ ಅಫೀಸರ್ ಮಿನಿ ನೀನನ್,  ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಉಳ್ಳಾಲ್ ಇದರ ಅಸಿಸ್ಟೆಂಟ್ ಪ್ರೊಫೆಸರ್ ಶ್ರೀಮತಿ ನಿಶ್ಮಿತಾ ,ಕೆ., ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ್ ಡಿ., ಸಹಕಾರ ಸಂಘಗಳ ಸಹಾಯಕ ನಿಬಂಧಕರುಗಳಾದ  ಶ್ರೀಮತಿ ತ್ರಿವೇಣಿ ರಾವ್ , ಸುಧೀರ್ ಕುಮಾರ್, ಎಸ್. ಎಂ. ರಘು,
ಮತ್ತು  ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.  

Category
ಕರಾವಳಿ ತರಂಗಿಣಿ