image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೈಂದೂರಿನಲ್ಲಿ ಶೀಘ್ರ ಸುಸಜ್ಜಿತ ಬಸ್‌ ಡಿಪೋ ನಿರ್ಮಾಣ ಮಾಡಲಾಗುವುದು : ಸಚಿವ ರಾಮಲಿಂಗಾ ರೆಡ್ಡಿ

ಬೈಂದೂರಿನಲ್ಲಿ ಶೀಘ್ರ ಸುಸಜ್ಜಿತ ಬಸ್‌ ಡಿಪೋ ನಿರ್ಮಾಣ ಮಾಡಲಾಗುವುದು : ಸಚಿವ ರಾಮಲಿಂಗಾ ರೆಡ್ಡಿ

ಬೈಂದೂರು : ಬೈಂದೂರು ತಾಲೂಕು ಕೇಂದ್ರದ ಅಭಿವೃದ್ಧಿಯ ದೂರದೃಷ್ಟಿಯಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ಉದ್ಘಾಟನೆಯಾಗಿದ್ದು ಜನರ ಬೇಡಿಕೆಯಂತೆ ಶೀಘ್ರ ಸುಸಜ್ಜಿತ ಬಸ್‌ ಡಿಪೋ ನಿರ್ಮಾಣ ಮಾಡುವುದಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ಬೈಂದೂರು ಕೆಎಸ್ಸಾರ್ಟಿಸಿ ನೂತನ ಬಸ್‌ ನಿಲ್ದಾಣ ಉದ್ಘಾಟಿಸಿ ಅವರು ಮಾತನಾಡಿದರು. ನೂತನ ಬಸ್‌ ನಿಲ್ದಾಣಕ್ಕೆ ಕೊಲ್ಲೂರು ಮೂಕಾಂಬಿಕಾ ಬಸ್‌ ನಿಲ್ದಾಣ ಎಂದು ನಾಮಕರಣ ಮಾಡಲು ಪ್ರಯತ್ನಿಸಲಾಗುವುದು ಎಂದರು. ರಾಜ್ಯದಲ್ಲಿ 900 ಹೊಸ ಸರಕಾರಿ ಬಸ್ಸುಗಳ ಖರೀದಿಗೆ ಟೆಂಡರ್‌ ಪೂರ್ಣಗೊಂಡಿದೆ. ಉಡುಪಿ -ಮಂಗಳೂರು ವಿಭಾಗಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಹಾಗೂ ಮಂಗಳೂರು ವಿಭಾಗದಲ್ಲಿ 100 ಹೊಸ ವಿದ್ಯುತ್‌ ಚಾಲಿತ ಬಸ್ಸುಗಳ ಪ್ರಯಾಣ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ವಿ.ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಅಶೋಕ್‌ ಕುಮಾರ್‌ ಕೊಡವೂರು, ಮೋಹನ್‌ ಪೂಜಾರಿ, ಬಾಬು ಶೆಟ್ಟಿ, ಗಿರೀಶ್‌ ಬೈಂದೂರು, ರಾಜು ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ