ಮಂಗಳೂರು: ನಗರಕ್ಕೆ ಆಗಮಿಸಿದ ಶ್ರೀಲಂಕಾ ಪತ್ರಕರ್ತರ ನಿಯೋಗ ಕರ್ನಾಟಕ ವಿಧಾನ ಸಭೆಯ ಸಭಾಪತಿ ಯು ಟಿ ಖಾದರ್ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿತು. ಅಲ್ಲದೆ ಶ್ರೀಲಂಕಾಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.
ಈ ವೇಳೆ ಮಾತನಾಡಿದ ಸ್ಪೀಕರ್ ಯು ಟಿ ಖಾದರ್ ಭಾರತ ಹಾಗೂ ಶ್ರೀ ಲಂಕಾ ಹಿಂದಿನಿಂದಲೂ ಬಹಳಷ್ಟು ಉತ್ತಮ ಸಂಬಂಧ ಹೊಂದಿದೆ. ಮುಂದಿನ ದಿನಗಳಲ್ಲಿ ಶಾಸಕರೊಂದಿಗೆ ಶ್ರೀ ಲಂಕಾಕ್ಕೆ ಭೇಟಿ ನೀಡುವುದಾಗಿ ನಿಯೋಗಕ್ಕೆ ತಿಳಿಸಿದರು. ಕರ್ನಾಟಕ ಪ್ರವಾಸದಲ್ಲಿರುವ ಶ್ರೀ ಲಂಕಾ ಪತ್ರಕರ್ತರ ನಿಯೋಗವನ್ನು ವಿಧಾನ ಸೌಧಕ್ಕೆ ಭೇಟಿ ನೀಡುವಂತೆ ಸ್ಪೀಕರ್ ಅಹ್ವಾನ ನೀಡಿದರು.
ನಿಯೋಗದಲ್ಲಿ ಏಷ್ಯಾನ್ ಮೀಡಿಯಾ ಮತ್ತು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಪ್ಯಾಟ ಮ್ ಪ್ಯಾಸ್ತುಲ್,ಶ್ರೀ ಲಂಕಾ ಪ್ರಧಾನಿ ಕಚೇರಿ ಮಾಜಿ ಮಾಧ್ಯಮ ಕಾರ್ಯದರ್ಶಿ ನಿಶಾಂತ್ ಅಲ್ವಿಸ್,ಶ್ರೀಲಂಕಾ ಹಿರಿಯ ಪತ್ರಕರ್ತರಾದ ಸಂಜೀವ ತಿಸೆರಾ, ಹೇಮಂತ್ ಕುಮಾರ್ ಸಿಂಘೆ,ದಾಮಿಸಿರಿ ಅಜಿತ್,ತುಷಾರ ಹೆಟ್ಟಿರಾಚಿ , ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.