image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಡಿಸೆಂಬರ್ 30ರಂದು 'ವೈಕುಂಠ ಏಕಾದಶಿ' ಸಂಭ್ರಮ

ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಡಿಸೆಂಬರ್ 30ರಂದು 'ವೈಕುಂಠ ಏಕಾದಶಿ' ಸಂಭ್ರಮ

ಮಂಗಳೂರು : ಸ್ವಸ್ತಿ! ಶ್ರೀ ವಿಶ್ವಾವಸು ನಾಮ ಸಂವತ್ಸವ ಧನುರ್ಮಾಸದ ಏಕಾದಶೀಯು ತಾ। 30-12-2025 ನೇ ಮಂಗಳವಾರದಂದು ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲೊ ವೈಕುಂಠ ಏಕಾದಶೀಯ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮುಕ್ತೇಸರಾದ ಪ್ರವೀಣ್ ಶೇಟ್ ನಾಗ್ವೆಕರ್ ರವರು ತಿಳಿಸಿದ್ದಾರೆ.

 'ನೈಕಾದಶ್ಯಾಃ ಪರಂ ವೃತಂ' ಎಂಬ ಮಾತಿನಂತೆ ಏಕಾದಶೀಗಿಂತ ಶ್ರೇಷ್ಠವಾದ ವೃತ ಬೇರೊಂದಿಲ್ಲ ಎಂಬುದು ಪುರಾಣಗಳ ಮಾತು. ಈ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂಬ ಪ್ರತೀತಿ ಇದೆ. ಅಂದು ವೆಂಕಟೇಶ್ವರ / ವಿಷ್ಣುದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುವುದೆಂಬ ನಂಬಿಕೆಯೂ ಇದೆ. ಈ ಪರ್ವ ಕಾಲದಂದು ಶ್ರೀ ದೇವರ ಸಾನಿಧ್ಯದಲ್ಲಿ ಚೈತನ್ಯಾಭಿವೃದ್ಧಿ ಹಾಗೂ ಲೋಕಕಲ್ಯಾಣ ಪ್ರಾಪ್ತಿಯ ಸಂಕಲ್ಪದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಈ ವೇಳೆ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆ ನಡೆಯಲಿದೆ  ದಿನಾಂಕ 30-12-2025 ರಂದು ಸಾಯಂಕಾಲ 4 ಘಂಟೆಗೆ ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ ನಡೆಯಲಿರುವುದೆ ಎಂದರು. 

 ಕಾರ್ಯಕ್ರಮದ ವಿವರ 

30-12-2025 ಮಂಗಳವಾರ ಪ್ರಾತಃಕಾಲ 5.30ಕ್ಕೆ : ಸುಪ್ರಭಾತ ಸೇವೆ

6.00ಕ್ಕೆ : ಸಾಮೂಹಿಕ ಪ್ರಾರ್ಥನೆ, ಅಷ್ಟಾಕ್ಷರೀ ಮಂತ್ರ ಜಪ, ಪ್ರಾತಃ ಪೂಜೆ

7 ರಿಂದ 8.00 ರವರೆಗೆ :

ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ,

8 ರಿಂದ 10.00 ರವರೆಗೆ : "ನಾಮತ್ರಯ ಮಹಾಮಂತ್ರ ಜಪಯಜ್ಞ"

ಮಧ್ಯಾಹ್ನ 12.00ಕ್ಕೆ : ಮಹಾಪೂಜೆ

1.00 ರಿಂದ 3.00 ರವರೆಗೆ : ಭಜನಾ ಕಾರ್ಯಕ್ರಮ,3.00 ರಿಂದ 4.00 ರವರೆಗೆ : ವೈದಿಕರಿಂದ ವೇದ ಪಾರಾಯಣ

ಸಾಯಂಕಾಲ 4.30 ರಿಂದ :

ಪುಷ್ಪಯಾಗ ಆರಂಭ, ಅಷ್ಟಾವಧಾನ ಸೇವೆ

9.00ಕ್ಕೆ : ದೀಪಾರಾಧನೆ, ಮಹಾಪೂಜೆ

10.00₫ ವಿಠೋಬ ದೇವರ ಸನ್ನಿಧಿಯಲ್ಲಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ  ಆಡಳಿತ ಮುಕ್ತೆಸರಾದ ವಿನಾಯಕ ಕೃಷ್ಣ ಶೇಟ್,ಬಿ ಸಾಯಿದತ್ತ ನಾಯಕ್,ಗಣೇಶ್ ನಾವೆಡ್ಕರ್, ರವರು ಉಪಸ್ಥಿತರಿದ್ದರು

Category
ಕರಾವಳಿ ತರಂಗಿಣಿ