image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟೆಕ್ನಾಲಜಿ ಕ್ಲಿನಿಕ್ ಕಾರ್ಯಾಗಾರ ಡಿ.29 – 30 ರಂದು

ಟೆಕ್ನಾಲಜಿ ಕ್ಲಿನಿಕ್ ಕಾರ್ಯಾಗಾರ ಡಿ.29 – 30 ರಂದು

ಮಂಗಳೂರು: ಎಂ.ಎಸ್.ಎಂ.ಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ವೇಗಗೊಳಿಸುವ ನಿಟ್ಟಿನಲ್ಲಿ ರ್ಯಾಂಪ್ ಯೋಜನೆಯಡಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಗಳೂರು ಹಾಗೂ ವಿ ಕೇರ್ ಸೊಸೈಟಿ , ಬೆಂಗಳೂರು ಇವರ ಸಹಯೋಗದಲ್ಲಿ  ಟೆಕ್ನಾಲಜಿ ಕ್ಲಿನಿಕ್  ಕಾರ್ಯಾಗಾರವನ್ನು ಜಿಲ್ಲೆಯ ಕೊಕೊನಟ್ ಕ್ಲಸ್ಟರ್  ಉದ್ಯಮಿಗಳಿಗೆ ಡಿಸೆಂಬರ್ 29  ಮತ್ತು 30 ರಂದು ಬೆಳಿಗ್ಗೆ 10 ಗಂಟೆಗೆ ಸುಳ್ಯ ಎ.ಪಿ.ಎಂ.ಸಿ  ಹಾಲ್‍ನಲ್ಲಿ  ಆಯೋಜಿಸಲಾಗಿದೆ.

ಈ ಕಾರ್ಯಾಗಾರದಲ್ಲಿ ನೋಂದಾಯಿತ ಎಂ.ಎಸ್.ಎಂ.ಇಗಳು ಭಾಗವಹಿಸಬಹುದು.  ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ (ದೂರವಾಣಿ ಸಂಖ್ಯೆ: 0824-2214021) ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ