ಮಂಗಳೂರು: ಹರಿಕಥಾ ಪರಿಷತ್ ಮಂಗಳೂರು ಹಾಗೂ ರಾಮಕೃಷ್ಣ ಮಿಷನ್ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸಿಎ ಎಸ್ ಎಸ್ ನಾಯಕ್ ಪ್ರಾಯೋಜಕತ್ವದಲ್ಲಿ, ಎಸ್ ಕೆ ಜಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಬ್ಯಾಂಕ್ ಲಿ. ಹಾಗೂ ಗ್ರಾಮ ಸಂಘ ಸಹಕಾರದ ವತಿಯಿಂದ ಕರಾವಳಿಯಲ್ಲಿ ಮೊದಲ ಬಾರಿಗೆ ರಾಜ್ಯದ ವಿದ್ಯಾರ್ಥಿಗಳಿಗೆ ಡಿ.27 ರಂದು 'ಹರಿಕಥಾ ಸ್ಪರ್ಧೆ-2025 ಮಂಗಳೂರಿನ ರಾಮಕೃಷ್ಣ ಮಿಷನ್ ನಲ್ಲಿ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ತಿಳಿಸಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಬೆಂಗಳೂರು, ಶಿವಮೊಗ್ಗ, ಬಾಗಲಕೋಟೆ ಸೇರಿದಮತೆ ವಿವಿಧ ಜಿಲ್ಕೆಗಳಿಂದ ಆಯ್ದ 23 ಮಂದಿ ಯುವ ಕಥಾಕೀರ್ತನ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ ಎಂದರು.
ಈ ಸ್ಪರ್ಧೆಯು 2 ವಿಭಾಗದಲ್ಲಿ ನಡೆಯಲಿದ್ದು, 10ನೇ ತರಗತಿಯ ವರೆಗಿನವರನ್ನು ಕಿರಿಯ ವಿಭಾಗವಾಗಿ ಹಾಗೂ 10ನೇ ತರಗತಿಯ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳನ್ನು ಹಿರಿಯ ವಿಭಾಗ ಎಂದು ಗುರುತಿಸಿದ್ದು, ಕಿರಿಯ ವಿಭಾಗದಲ್ಲಿ ಮೊದಲನೇ ಬಹುಮಾನ 5000, ದ್ವಿತೀಯ ಬಹುಮಾನ 3000 ಹಾಗೂ ತೃತೀಯ ಬಹುಮಾನ 2000 ರೂ. ನೀಡಲಾಗುವುದು. ಹಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ 7000 ರೂ., ದ್ವಿತೀಯ ಬಹುಮಾನ 5000 ರೂ. ತೃತೀಯ ಬಹುಮಾನ 3000 ರೂ. ಪ್ರಮಾಣ ಪತ್ರ, ಟ್ರೋಪಫಿಯನ್ನು ನೀಡಲಾಗುವುದು ಎಂದು ಹೇಳಿದರು.
ಸ್ಪರ್ಧೆಯು ಬೆಳಗ್ಗೆ 9 ಗಂಟೆಗೆ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜೀ ಉದ್ಘಾಟಿಸಲಿದ್ದು, ಪರಿಷತ್ತಿನ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕಡಪ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಅನುಪಮಾನಂದ ಜೀ ಆಶೀರ್ವಜನ ನೀಡಲಿದ್ದು, ಪರಿಷತ್ತಿನ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಸಮಾರೋಪ ನುಡಿಗಳನ್ನಾಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ, ಉಪಾಧ್ಯಕ್ಷ ಕೆ. ನಾರಾಯಣ ರಾವ್, ಶ್ರೀಣಿ ಮುರುಳಿ, ಸುಂದರ್ ಶೆಟ್ಟಿ ಉಪಸ್ಥಿತರಿದ್ದರು.