ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಆಟೋರಿಕ್ಷ ಚಾಲಕರ ಸಂಘ ಮತ್ತು ಸಮಾನ ಮನಸ್ಕರ ವೇದಿಕೆ ಆಶ್ರಯದಲ್ಲಿ ನಡೆದ ವಿವಿಧ ಪಾರ್ಕ್ ಸಮಿತಿಗಳ ಸಭೆಯಲ್ಲಿ ಅಕ್ಟೋಬರ್ 14 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದೆಂದು ನಿರ್ಧರಿಸಲಾಗಿದೆ. ನಗರದಲ್ಲಿ ಮೋಟಾರು ವಾಹನ ಕಾಯಿದೆ ವಿರುದ್ಧ ಮತ್ತು ಕಾನೂನು ನಿಯಮಗಳನ್ನು ಪಾಲಿಸದೆ ಬ್ಯಾಟರಿ ಚಾಲಿತ ಆಟೋರಿಕ್ಷಾ ಗಳಿಗೆ ನಿಯಮ ಮೀರಿ ನೀಡುತ್ತಿರುವ ಅವಕಾಶದಿಂದಾಗಿ ಪರವಾನಿಗೆ ಪಡೆದ ಆಟೋರಿಕ್ಷಾ ಚಾಲಕರಿಗೆ ಅನ್ಯಾಯವಾಗುತ್ತಿದೆ. ಆದುದರಿಂದ ಈ ಧರಣಿ ಅನಿವಾರ್ಯ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯಲ್ಲಿ ದಕ್ಷಿಣ ಕನ್ನಡ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಬಿ ವಿಷ್ಣುಮೂರ್ತಿ, ಸಮಾನ ಮನಸ್ಕರ ವೇದಿಕೆಯ ಅದ್ಯಕ್ಷ ದಯಾನಂದ ಶೆಟ್ಟಿ ಹಾಗೂ ವಿವಿಧ ಪಾರ್ಕ್ ಸಮಿತಿಯ ಮುಖಂಡರುಗಳು ಉಪಸ್ಥಿತರಿದ್ದು ನಿರ್ಣಯ ಕೈಕೊಂಡರು.