ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ರುಡ್‌ಸೆಟ್ ಸಂಸ್ಥೆ, ಸಿದ್ದವನ, ಉಜಿರೆ ಯಲ್ಲಿ ನಡೆದ 6 ದಿನಗಳ ‘NRLM – One GP One BC Sakhi’ ತರಬೇತಿ ಕಾರ್ಯಕ್ರಮವು ಭಾನುವಾರ ಯಶಸ್ವಿಯಾಗಿ ಸಂಪನ್ನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಅಜೇಯ ಅವರು ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಲಾಗಿ ಶ್ರೀ ಹರಿಪ್ರಸಾದ್, ಶ್ರೀಮತಿ ಶಕುಂತಲಾ, ಶ್ರೀಮತಿ ಉಷಾ, ಶ್ರೀ ಅಬ್ರಹಾಂ ಜೇಮ್ಸ್, ಶ್ರೀ ಕೆ. ಕರಣಾಕರ ಜೈನ್, ಉಪಸ್ಥಿತರಿದ್ದರು. ಸಮಾರಂಭಕ್ಕೆ ಶ್ರೀಮತಿ ಅಶ್ವಿನಿ ಅವರು ಹೃತ್ಪೂರ್ವಕ ಸ್ವಾಗತ ಕೋರಿದರು. ಶ್ರೀಮತಿ ಹರ್ಷಿತಾ ಅವರು ಧನ್ಯವಾದಗಳನ್ನು ಸಲ್ಲಿಸಿದರು.
ತರಬೇತಿಯಲ್ಲಿ ಭಾಗವಹಿಸಿದ BC Sakhi ಗಳು ತಮ್ಮ ಅನುಭವಗಳನ್ನು ಹೃದಯಂಗಮವಾಗಿ ಹಂಚಿಕೊಂಡರು. ಇವರು ತಮ್ಮ ಕಲಿಕೆ, ಪ್ರಾಕ್ಟಿಕಲ್ ಅನುಭವ, ಮತ್ತು ತರಬೇತಿಯಿಂದ ಪಡೆದ ಆತ್ಮವಿಶ್ವಾಸದ ಬಗ್ಗೆ ಮಾತನಾಡಿದರು.
BC Sakhi ಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿ ಬ್ಯಾಂಕಿಂಗ್ ಸೌಲಭ್ಯಗಳನ್ನು ಮನೆಮನೆಗೂ ತಲುಪಿಸುವ ಪ್ರಮುಖ ಕೊಂಡಿ ಎಂದು ಪ್ರಶಂಸಿಸಿದರು. NRLM ಯೋಜನೆ ಮಹಿಳೆಯರ ಸಬಲೀಕರಣ, ಡಿಜಿಟಲ್ ಸಾಕ್ಷರತೆ, ಮತ್ತು SHG ಚಟುವಟಿಕೆಗಳ ಬಲವರ್ಧನೆಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ನಿರ್ದೇಶಕರಾದ ಶ್ರೀ ಅಜೇಯ ಮಾತನಾಡಿ, ರುಡ್‌ಸೆಟ್ ಸಂಸ್ಥೆಯ practically ತರಬೇತಿ BC Sakhi ಗಳನ್ನು ಗ್ರಾಮೀನ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಮರ್ಥವಾಗಲು ಸಹಕಾರಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
6 ದಿನಗಳ ತರಬೇತಿಯಲ್ಲಿ ಭಾಗವಹಿಸಿದವರಿಗೆ ಡಿಜಿಟಲ್ ಬ್ಯಾಂಕಿಂಗ್, ಬ್ಯಾಂಕಿಂಗ್ ಕರಸ್ಪಾಂಡೆಂಟ್ ಕಾರ್ಯವಿಧಾನ, SHG–NRLM ಚಟುವಟಿಕೆಗಳು, ಹಣಕಾಸು ಸಾಕ್ಷರತೆ, ಬ್ಯಾಂಕ್ ಲಿಂಕೆಜ್, MIS & ಡಾಕ್ಯುಮೆಂಟೇಷನ್ ಇತ್ಯಾದಿ ವಿಷಯಗಳಲ್ಲಿ ಪ್ರಾಕ್ಟಿಕಲ್ ಮಾರ್ಗದರ್ಶನ ನೀಡಲಾಯಿತು. ಇದರಲ್ಲಿ ಭಾಗವಹಿಸಿದವರು ತರಬೇತಿ ತಮ್ಮ ಗ್ರಾಮದಲ್ಲಿ ಸುಲಭ ಮತ್ತು ಪರಿಣಾಮಕಾರಿ ಬ್ಯಾಂಕಿಂಗ್ ಸೇವೆ ಒದಗಿಸಲು ಸಹಕರಿಸುತ್ತದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಶಿಸ್ತುಪಾಲನೆ, ಪ್ರಾಕ್ಟಿಕಲ್ ಕಲಿಕೆ ಮತ್ತು ಉತ್ತಮ ಮಾರ್ಗದರ್ಶನದಿಂದ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿತು.