image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೇಂದ್ರ ಸರಕಾರದ ನೂತನ ಶ್ರಮ ಶಕ್ತಿ ನೀತಿ ವಾಪಸಾತಿಗೆ ಒತ್ತಾಯಿಸಿ ಪ್ರತಿಭಟನೆ

ಕೇಂದ್ರ ಸರಕಾರದ ನೂತನ ಶ್ರಮ ಶಕ್ತಿ ನೀತಿ ವಾಪಸಾತಿಗೆ ಒತ್ತಾಯಿಸಿ ಪ್ರತಿಭಟನೆ

ಮಂಗಳೂರು : ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳುವ, ಕಾರ್ಮಿಕ ಇಲಾಖೆಯನ್ನು ದುರ್ಬಲಗೊಳಿಸುವ, ಕೇಂದ್ರ ಸರಕಾರದ ಕರಾಳ ನೂತನ ಶ್ರಮ ಶಕ್ತಿ ನೀತಿ ವಾಪಸಾತಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯಾದ್ಯಂತ ಶ್ರಮಶಕ್ತಿ ನೀತಿ - 2025 ಕರಡು ಪ್ರತಿ ದಹನ ಪ್ರತಿಭಟನಾ ನಡೆಯುತ್ತಿದೆ. ಇದರ ಹಿನ್ನಲೆಯಲ್ಲಿ CITU ದ.ಕ.ಜಿಲ್ಲಾ ಸಮಿತಿ, ಮಂಗಳೂರು ಕ್ಲಾಕ್ ಟವರ್ ಬಳಿ ಕೇಂದ್ರ ಸರಕಾರದ ಶ್ರಮ ಶಕ್ತಿ ನೀತಿ ವಿರುದ್ಧ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಸುನಿಲ್ ಕುಮಾರ್ ಬಜಾಲ್ ಕೇಂದ್ರ ಸರಕಾರದ ಶ್ರಮ ಶಕ್ತಿ ನೀತಿ ವಿರುದ್ಧ ಆಕ್ರೋಶದ ಹೊರಹಾಕಿದರು. ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಶ್ರಮಶಕ್ತಿ ನೀತಿ - 2025 ಕರಡು ಪ್ರತಿ ದಹನ ಮಾಡಲಾಯಿತು.

Category
ಕರಾವಳಿ ತರಂಗಿಣಿ