ಮೂಡುಬಿದಿರೆ: ಜಿಲ್ಲಾ ಪಂಚಾಯತ್ ಹಾಸನ ಹಾಗೂ ಶಾಲಾ ಶಿಕ್ಷಣ ಇಲಾಖೆ, ಹಾಸನ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 14 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಒಟ್ಟು 12 ಚಿನ್ನ ಮತ್ತು 02 ಬೆಳ್ಳಿ ಪದಕಗಳೊಂದಿಗೆ ಒಟ್ಟು 14 ಪದಕಗಳನ್ನು ಗಳಿಸಿ, ದಕ್ಷಿಣ ಕನ್ನಡ ಜಿಲ್ಲೆ, ಬಾಲಕ ಬಾಲಕಿಯರ ವಿಭಾಗದಲ್ಲಿ ತಂಡ ಪ್ರಶಸ್ತಿಯ ಜೊತೆಗೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಬಾಲಕರ ವಿಭಾಗದ 4*100ಮೀ ರಿಲೇ ಸ್ಪರ್ಧೆಯಲ್ಲಿ ನೂತನ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ.
ಫಲಿತಾಂಶ :
14 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಫಲಿತಾಂಶ : ಆದರ್ಶ್ ಆರ್ – 200ಮೀ (ಪ್ರಥಮ), 100ಮೀ (ದ್ವಿತೀಯ), 4*100ಮೀ ರಿಲೇ (ಪ್ರಥಮ), ಪ್ರಣವ್ ಎಸ್ – ಉದ್ದ ಜಿಗಿತ (ಪ್ರಥಮ), ಸುಭಾಷ್ ಆರ್ – 80ಮೀ ಹರ್ಡಲ್ಸ್ (ಪ್ರಥಮ), 400ಮೀ (ದ್ವಿತೀಯ), 4*100ಮೀ ರಿಲೇ (ಪ್ರಥಮ), ಶ್ರೀಹರಿ ಪ್ರಕಾಶ್ – ಚಕ್ರ ಎಸೆತ (ದ್ವಿತೀಯ), ಕುಬೇರ ಸಿ ಎಂ - 4*100ಮೀ ರಿಲೇ (ಪ್ರಥಮ), ವೈಭವ್ - 4*100ಮೀ ರಿಲೇ (ಪ್ರಥಮ), ಮಾಲ ಟಿ ಆರ್ – 100ಮೀ (ಪ್ರಥಮ), ಗೀತಾಂಜಲಿ - 4*100ಮೀ ರಿಲೇ (ಪ್ರಥಮ), ಎಂ ಆರ್ ಭವಿಷ್ಯ - 4*100ಮೀ ರಿಲೇ (ಪ್ರಥಮ), ವೈಷ್ಣವಿ - 4*100ಮೀ ರಿಲೇ (ಪ್ರಥಮ), ವರ್ಷಿಣಿ - 4*100ಮೀ ರಿಲೇ (ಪ್ರಥಮ),
ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ರಾಷ್ಟç ಮಟ್ಟದ ಕ್ರೀಡಾಕೂಟಕ್ಕೆ ಒಂದೇ ಶಾಲೆಯಿಂದ 11 ಕ್ರೀಡಾಪಟುಗಳು ಆಯ್ಕೆಯಾಗಿರುವುದು ಆಳ್ವಾಸ್ಮ ಕ್ರೀಡಾ ಹಿರಿಮೆಗೆ ಹಿಡಿದ ಕೈಗನ್ನಡಿಯಾಗಿದೆ. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.