ಮಂಗಳೂರು: ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾರವರ ನೇತೃತ್ವದಲ್ಲಿ ಸರ್ವಧರ್ಮಗಳ ಕ್ರಿಸ್ಮಸ್ ಸಂಭ್ರಮಾಚರಣೆಯ ಪೂರ್ವಬಾವಿ ಸಭೆಯು ಅವರ ಗೃಹ ಕಛೇರಿಯಲ್ಲಿ ನಡೆಯಿತು, ಮಂಗಳೂರಿನ ಸೈಂಟ್ ಅಂತೋನಿ ಆಶ್ರಮ ಜೆಪ್ಪು ಇಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲು ಸಾರ್ವಜನಿಕರನ್ನು ಹಾಗೂ ಮಕ್ಕಳನ್ನು ಕರೆಯಿಸಿ, ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿ ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ಆಚರಿಸಲು ತೀರ್ಮಾನಿಸಲಾಯಿತು. ಎಂದು ಶಾಸಕರ ಪ್ರಕಟಣೆ ತಿಳಿಸಿದೆ. ಈ ಸಂದರ್ಭದಲ್ಲಿ ಐವನ್ ಡಿʼಸೋಜಾರವರ ಅಭಿಮಾನಿ ಬಳಗ ಉಪಸ್ಥಿತರಿದ್ದರು.