image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನವೆಂಬರ್ 22 ಮತ್ತು 23 ರಂದು ಮಂಗಳೂರಿನ ಡಾ. ಟಿ. ಎಂ. ಎ ಪೈ ಕನ್ವೆಂಷನ್ ಸೆಂಟರ್ ನಲ್ಲಿ ನಡೆಯಲಿದೆ ಭಾರತದ ಅತ್ಯಂತ ಪ್ರತಿಷ್ಠಿತ ನಾಣ್ಯ ಮತ್ತು ಅಂಚೆ ಚೀಟಿ ಪ್ರದರ್ಶನ

ನವೆಂಬರ್ 22 ಮತ್ತು 23 ರಂದು ಮಂಗಳೂರಿನ ಡಾ. ಟಿ. ಎಂ. ಎ ಪೈ ಕನ್ವೆಂಷನ್ ಸೆಂಟರ್ ನಲ್ಲಿ ನಡೆಯಲಿದೆ ಭಾರತದ ಅತ್ಯಂತ ಪ್ರತಿಷ್ಠಿತ ನಾಣ್ಯ ಮತ್ತು ಅಂಚೆ ಚೀಟಿ ಪ್ರದರ್ಶನ

ಮಂಗಳೂರು : ಭಾರತದ ಅತ್ಯಂತ ಪ್ರತಿಷ್ಠಿತ ನಾಣ್ಯ ಮತ್ತು ಅಂಚೆ ಚೀಟಿಯ ಸಂಗ್ರಹವನ್ನು ಫಿಲಾನಮಿಸ್ ಎನ್ನುವ ನಾಣ್ಯ ಮತ್ತು ಅಂಚೆ ಚೀಟಿ ಪ್ರದರ್ಶನವನ್ನು ನವೆಂಬರ್ 22 ಮತ್ತು 23 ರಂದು ಮಂಗಳೂರಿನ ಡಾ. ಟಿ. ಎಂ. ಎ ಪೈ ಕನ್ವೆಂಷನ್ ಸೆಂಟರ್ ನಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 8 ತನಕ ನಡೆಯಲಿರುವುದೆಂದು ಶ್ರೇಷ್ಠ ನಾಣ್ಯಶಾಸ್ತ್ರಜ್ಞ ಮತ್ತು ಫಿಲಾಟೆಲಿಸ್ಟ್ ಗಳಾದ ಎಂ. ಪ್ರಶಾಂತ್ ಶೇಟ್ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ,ಗಂಗಾ ರಾಜವಂಶದ ಅತಿದೊಡ್ಡ ನಾಣ್ಯ ಸಂಗ್ರಹಃ 2008 ರಲ್ಲಿ ಒಂದೇ ಚಿನ್ನದ ನಾಣ್ಯದಿಂದ ಪ್ರಾರಂಭಿಸಿ ಈಗ 310 ಪ್ರಭೇದಗಳ ಸಂಗ್ರಹವಾಗಿದೆ . ಇದು ಒಬ್ಬ ವ್ಯಕ್ತಿಯ ಬಳಿ ಇರುವ ಅತಿದೊಡ್ಡ ಸಂಗ್ರಹವಾಗಿದೆ.ಬ್ರಿಟಿಷ್ ಇಂಡಿಯಾ ನಾಣ್ಯಗಳನ್ನು ಮರು ವ್ಯಾಖ್ಯಾನಿಸುವುದುಃ ಪ್ರಸ್ತುತ ನಾಣ್ಯಶಾಸ್ತ್ರದ ನಿಯತಕಾಲಿಕಗಳಲ್ಲಿ ದಾಖಲೆರಹಿತವಾಗಿರುವ ಸುಮಾರು 650 ಪ್ರಭೇದಗಳನ್ನು ಒಳಗೊಂಡಂತೆ 2,100 ಪ್ರಭೇದಗಳ ಬ್ರಿಟಿಷ್ ಇಂಡಿಯಾ ನಾಣ್ಯಗಳ ಸಂಗ್ರಹ ಇದೆ ಎಂದರು

ನವೆಂಬ‌ರ್ 22 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಡಾ. ಪಿ. ಎಲ್. ಧರ್ಮ ಉದ್ಘಾಟಿಸುವರು ಗೌರವಾನ್ವಿತ ಅತಿಥಿಗಳಾಗಿ ಪ್ರೊ. ಡಾ. ಎಂ. ಎಸ್. ಮೂಡಿತ್ತಾಯ.ಡಾ.ಅಮರಶ್ರೀ ಅಮರನಾಥ ಶೆಟ್ಟಿ ಮತ್ತು ಶ್ರೀ ಮರ್ಕಡ್ ಪುಭಾಕರ ಕಾಮತ್ ಭಾಗವಹಿಸಲಿದ್ದಾರೆ ಎಂದರು .ನವೆಂಬರ್ 23 ರಂದು ಪ್ರಸಿದ್ಧ ತಜ್ಞರಿಂದ ವಿಚಾರ ಸಂಕಿರಣಗಳು ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಶಿವಪ್ರಕಾಶ್, ಸುಧಾಕರ್ ರಾವ್ ಪೇಜಾವರ, ವೆಂಕಟೇಶ ಬಾಳಿಗ ಉಪಸ್ಥಿತರಿದ್ದರು .

Category
ಕರಾವಳಿ ತರಂಗಿಣಿ