image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಅಂತರರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ 'ಎಕ್ಸ್‌ಪ್ಲೋರಾ 2025' ಉದ್ಘಾಟನೆ

ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಅಂತರರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ 'ಎಕ್ಸ್‌ಪ್ಲೋರಾ 2025' ಉದ್ಘಾಟನೆ

ಮಂಗಳೂರು : ಫಾದರ್ ಮಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್ (FMHMC) ಮತ್ತು ಗ್ಲೋಬಲ್ ಹೋಮಿಯೋಪಥಿ ಫೌಂಡೇಶನ್ (GHF) ಹಾಗೂ ನವದೆಹಲಿಯ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಹೋಮಿಯೋಪಥಿ (CCRH) ಯ ಸಹಯೋಗದಲ್ಲಿ, ಎಕ್ಸ್‌ಪ್ಲೋರಾ 2025 – ಹೋಮಿಯೋಪಥಿಕ್ ಶಿಕ್ಷಣ, ಅಭ್ಯಾಸ ಮತ್ತು ಸಂಶೋಧನೆಗಳ ಏಕೀಕರಣ ಎಂಬ ಅಂತರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವು  ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಶ್ರೀಮತಿ ಕಮಲಾ ಬಾಯಿ ಬಿ, KAS ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದಕ್ಷಿಣ ಆಫ್ರಿಕಾದ ಡರ್ಬನ್ ತಂತ್ರಜ್ಞಾನ ವಿಶ್ವವಿದ್ಯಾಲಯದ ಹೋಮಿಯೋಪತಿ ವಿಭಾಗದ ಮುಖ್ಯಸ್ಥ ಡಾ. ಆಶ್ಲೇ ರಾಸ್ ಮತ್ತು U K ಯ ಫಂಕ್ಷನಲ್ ಶಿಫ್ಟ್ ಕನ್ಸಲ್ಟಿಂಗ್ ಲಿಮಿಟೆಡ್ ನಿರ್ದೇಶಕರು ಮತ್ತು ವೈಧ್ಯಕೀಯ ಸಲಹೆಗಾರರಾದ ಡಾ. ಕಿಮ್ ಆಂಥೋನಿ ಜಾಬ್ಸ್ಟ್ ಅವರು ಗೌರವ ಅತಿಥಿಗಳಾಗಿದ್ದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ರೆವರೆಂಡ್ ಫಾದರ್ ಫೌಸ್ಟಿನ್ ಲ್ಯೂಕಾಸ್ ಲೋಬೊ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಔಪಚಾರಿಕ ಉದ್ಘಾಟನಾ ಕಾರ್ಯಕ್ರಮವು ಪ್ರಾರ್ಥನಾ ಹಾಡಿನ ರೂಪದಲ್ಲಿ ಆರಂಭವಾಯಿತು. ಆಯೋಜನಾ ಕಾರ್ಯದರ್ಶಿಯಾದ ಡಾ. ಶೀನಾ ಕೆ.ಎನ್. ಅವರು ಗಣ್ಯರನ್ನು ವೇದಿಕೆಗೆ ಬರಮಾಡಿಕೊಂಡರು. FMHMC&H ಸಂಸ್ಥೆಯ ಆಡಳಿತಾಧಿಕಾರಿ ರೆವರೆಂಡ್ ಫಾದರ್ ಡೊನಾಲ್ಡ್ ನಿಲೇಶ್ ಕ್ರಾಸ್ತಾ ಅವರು ಸ್ವಾಗತ ಭಾಷಣ ಮಾಡಿದರು. ಸಮ್ಮೇಳನವನ್ನು ವೇದಿಕೆಯ ಮೇಲಿದ್ದ ಗಣ್ಯರಿಂದ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ  ಡಾ. ಆಶ್ಲೇ ರಾಸ್ ಅವರು ಸಂಶೋಧನಾ ಬುಲೆಟಿನ್ 2025 ಅನ್ನು ಮತ್ತು ಡಾ. ಕಿಮ್ ಆಂಥೋನಿ ಜಾಬ್ಸ್ಟ್ ಅವರು ಪಯೋನಿಯರ್ 2025 ಅನ್ನು ಬಿಡುಗಡೆ ಮಾಡಿದರು. ಗ್ಲೋಬಲ್ ಹೋಮಿಯೋಪಥಿ ಫೌಂಡೇಶನ್‌ನ ಅಧ್ಯಕ್ಷರಾದ ಡಾ. ಜಯೇಶ್ ಸಾಂಘವಿಯವರು ಜಿಎಚ್‌ಎಫ್(GHF) ಮತ್ತು ಎಫ್‌ಎಂಎಚ್‌ಎಂಸಿ&ಎಚ್(FMHMC&H) ಇವರ ಯಶಸ್ವಿ ಸಹಯೋಗದಿಂದ ಈ ಅಂತರರಾಷ್ಟ್ರೀಯ ಸಮ್ಮೇಳನವನ್ನು ಸಾಕಾರಗೊಳಿಸಿದ ಬಗ್ಗೆ ಸಭಿಕರನ್ನು ಅಭಿನಂದಿಸಿದರು. ಹೋಮಿಯೋಪಥಿಯಲ್ಲಿ ಸಂಶೋಧನೆ ನಡೆಸುವುದು ಇಂದಿನ ಕಾಲದ ಅವಶ್ಯಕತೆಯಾಗಿದ್ದು, ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು ಅತ್ಯಂತ ಮುಖ್ಯ ಎಂದು ಅವರು ಹೇಳಿದರು.

ಎಫ್‌.ಎಂ.ಸಿ.ಐ ನಿರ್ದೇಶಕರಾದ ರೆವರೆಂಡ್ ಫಾದರ್ ಫಾಸ್ಟಿನ್ ಲೂಕಾಸ್ ಲೋಬೋ ಅವರು ವೇದಿಕೆಯ ಮೇಲಿರುವ ಗಣ್ಯರೊಂದಿಗೆ ಗ್ಲೋಬಲ್ ಹೋಮಿಯೋಪತಿ ಫೌಂಡೇಶನ್‌ನ ಟ್ರಸ್ಟಿ ಮತ್ತು ಪೋಷಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಮತ್ತು ಭಾರತ ಸರ್ಕಾರದ ಆಯುಷ್ ಇಲಾಖೆ ಮಾಜಿ ಸಲಹೆಗಾರ (ಹೋಮಿಯೋಪಥಿ)ರಾದ ಡಾ. ಈಶ್ವರದಾಸ್ ಅವರನ್ನು, ಹೋಮಿಯೋಪತಿ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ ಕಮಲಾ ಬಾಯಿ ಬಿ, ಕ್ರೇನಿಯಂ ಸಾಫ್ಟ್‌ವೇರ್ ಅನ್ನು ಬಿಡುಗಡೆ ಮಾಡಿ, ಔಷಧಿಗಳಲ್ಲಿಯೂ ಸಹ ಎಲ್ಲಾ ಅಂಶಗಳಲ್ಲಿ ಕಲಬೆರಕೆಯಿಂದ ಸೇರಿಸಲ್ಪಟ್ಟ ಜೀವನಶೈಲಿಯ ಅಸ್ವಸ್ಥತೆಗಳನ್ನು ಎಲ್ಲರೂ ಹೇಗೆ ಬೆನ್ನಟ್ಟುತ್ತಿದ್ದಾರೆ ಎಂಬುದನ್ನು ನೆನಪಿಸಿಕೊಂಡು, ಈ ಹೋಮಿಯೋಪಥಿಯಂತಹ ಪರ್ಯಾಯ ಚಿಕಿತ್ಸಾ ವಿಧಾನಗಳ ಉತ್ತೇಜನವು ಸಮಾಜದ ಆರೋಗ್ಯಮುಖಿ ಭವಿಷ್ಯಕ್ಕೆ ಮಹತ್ವದ್ದು ಎಂದರು. 

 ಅಧ್ಯಕ್ಷೀಯ ಬಾಷಣದಲ್ಲಿ ರೆವರೆಂಡ್ ಫಾದರ್ ಆಗಸ್ಟಸ್ ಮುಲ್ಲರ್ ರವರು ಹೋಮಿಯೋಪಥಿ ಮೂಲಕ ಎಫ್‌.ಎಂ.ಸಿ.ಐ.ಯ ಬೀಜಗಳನ್ನು ಬಿತ್ತಿದ ರೀತಿಯಿಂದ ಇಂದು ಅದು ಎಷ್ಟು ದೂರ ಬೆಳೆಯಲು ಸಾಧ್ಯವಾಗಿದೆ ಎಂಬುದನ್ನೂ ಸ್ಮರಿಸಿದರು. ಮಾನಸಿಕ, ದೈಹಿಕ ಮತ್ತು ಆತ್ಮೀಯ ಮಟ್ಟದಲ್ಲಿ ಗುಣಪಡಿಸುವುದು ಮತ್ತು ಆರೈಕೆ ನೀಡುವುದು ನಮ್ಮ ಎಫ್‌.ಎಂ.ಸಿ.ಐ.ಯ ಮಂತ್ರವಾಗಿದೆ. ಈ ಅಂತರರಾಷ್ಟ್ರೀಯ ಸಮ್ಮೇಳನವು ಹೋಮಿಯೋಪಥಿಯ ಸಂಶೋಧನಾ ಪ್ರಗತಿಗೆ ಮೂಲ ಕಾರಣವಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಫಾದರ್ ಮುಲ್ಲರ್ ಫಾರ್ಮಾಸ್ಯುಟಿಕಲ್ ವಿಭಾಗದ ಆಡಳಿತಾಧಿಕಾರಿ ರೆವರೆಂಡ್ ಫಾದರ್ ನೆಲ್ಸನ್ ಡಿ. ಪೈಸ್, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ರೆವರೆಂಡ್ ಫಾದರ್ ಅಶ್ವಿನ್ ಎಲ್. ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಲ್ಮಾ ಎಂ. ಡಿಸೋಜಾ, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಡಾ. ಗಿರೀಶ್ ನವಾಡ ಯು.ಕೆ., ಮತ್ತು ಡಾ. ಶೀನಾ ಕೆ.ಎನ್. ಸಂಘಟನಾ ಕಾರ್ಯದರ್ಶಿ ಎಕ್ಸ್‌ಪ್ಲೋರಾ 2025 ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಕಿಮ್ ಜಾಬ್ಸ್‌ಟ್ (ಯುನೈಟೆಡ್ ಕಿಂಗ್‌ಡಮ್), ಡಾ. ಅಶ್ಲಿ ರಾಸ್‌ (ದಕ್ಷಿಣ ಆಫ್ರಿಕಾ), ಡಾ. ಆಶಾ ಕಿರಣ್ (ಆಸ್ಟ್ರೇಲಿಯಾ), ಡಾ. ನಿಕೋಲಾ ಕ್ಯೂಟಿನ್ಹೋ (ಜರ್ಮನಿ) ಹಾಗೂ ಭಾರತದೆಲ್ಲೆಡೆಗಿನ ಇನ್ನೂ 24 ಮಂದಿ ತಜ್ಞರು ಉಪಸ್ಥಿತರಿದ್ದಾರೆ. ಇವರು ಸಂಶೋಧನೆ, ಶೈಕ್ಷಣಿಕ ವಿಧಾನ ಮತ್ತು ಹೋಮಿಯೋಪತಿಯಲ್ಲಿನ ಇತ್ತೀಚಿನ ಪ್ರಗತಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ಚರ್ಚಿಸಲಿರುವರು. ಭಾರತದಾದ್ಯಂತ 1500 ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

Category
ಕರಾವಳಿ ತರಂಗಿಣಿ