image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೇರಿಕಾದಲ್ಲಿ ಯಕ್ಷ ದ್ವಿಗ್ವಿಜಯ :ವಿದೇಶಿಗರಿಗೆ ಯಕ್ಷಗಾನದ ಗುಂಗೆಬ್ಬಿಸಿ ತವರಿಗೆ ಮರಳಿದ ಪಟ್ಲ ಸತೀಶ್ ಶೆಟ್ಟಿ ತಂಡ

ಅಮೇರಿಕಾದಲ್ಲಿ ಯಕ್ಷ ದ್ವಿಗ್ವಿಜಯ :ವಿದೇಶಿಗರಿಗೆ ಯಕ್ಷಗಾನದ ಗುಂಗೆಬ್ಬಿಸಿ ತವರಿಗೆ ಮರಳಿದ ಪಟ್ಲ ಸತೀಶ್ ಶೆಟ್ಟಿ ತಂಡ

ಮಂಗಳೂರು: ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಅಮೆರಿಕದಲ್ಲಿ ಯಕ್ಷಗಾನ ಪ್ರದರ್ಶಿಸಿ ಮೂರು ತಿಂಗಳ ಬಳಿಕ ತಂಡ ತಾಯ್ನಾಡಿಗೆ  ಬುಧವಾರ ರಾತ್ರಿ   10.30ರ ವೇಳೆಗೆ ಬಜಪೆ ವಿಮಾನ ನಿಲ್ದಾನಕ್ಕೆ ಉಲ್ಲಾಸದಿಂದ  ಬಂದಿಳಿಯಿತು. ಈ ಸಂದರ್ಭದಲ್ಲಿ ಅವರ‌ ಅಭಿಮಾನಿಗಳು ಸ್ವಾಗತಿಸಿದರು. 

ನಂತರ ಸುದ್ದಿಗಾರರೊಂದಿಗೆ ಪಟ್ಲ ಸತೀಶ್ ಶೆಟ್ಟಿ ಮತ್ತು‌ ಪ್ರೊ. ಸಾಮಗ  ತಮ್ಮ  ಅಮೆರಿಕ ಪ್ರವಾಸದ ಕಥನ ಅನುಭವ ಹಂಚಿಕೊಂಡರು. ಮೊದಲಿಗೆ ಪ್ರೊಫೆಸರ್ ಸಾಮಗ  ಮಾತನಾಡಿ ಸುಮಾರು 27 ಕಡೆಗಳಲ್ಲಿ ಯಕ್ಷಗಾನ ಮಾಡಿ ಅಲ್ಲಿಯ ಜನರಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ  ಮೂಡಿಸಲ್ಲಿ ಯಶಸ್ವಿಯಾಗಿದ್ದೇವೆ. ಅಮೇರಿಕಾಕ್ಕೆ ಹಲವು  ಸಾರಿ ಹೋಗಿದ್ದೆವು. ಹಿಂದಿನ ಎರಡು ಬಾರಿ ಬಂದಿದ್ದಕ್ಕಿಂತ ಈ ಸಾರಿ  ಹೆಚ್ಚಾಗಿ ಸ್ಪಂದನೆ  ಪ್ರತಿಕ್ರಿಯೆ ಬಂದಿದೆ. ಅಲ್ಲಿಯವರು ನಮ್ಮ ಜೊತೆ ಸೇರಿ ನಮಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಬಹುಶಃ ಕೆಲವರು ಅಲ್ಲಿ ಇಲ್ಲಿಯವರೆಗೆ ಯಕ್ಷಗಾನವನ್ನು ನೋಡಿಲ್ಲ. ಯಕ್ಷಗಾನ ಕಲೆಯನ್ನು ಅದ್ಭುತವಾಗಿ ಅವರು ಅನುಭವಿಸಿಕೊಂಡು,  ನಮ್ಮಲ್ಲಿಯೂ ಬನ್ನಿ ಎಂದು ಆಹ್ವಾನಿಸಿದವರು ಇದ್ದಾರೆ. ಎಲ್ಲಾ ಕಾರ್ಯಕ್ರಮಗಳು ಮೊದಲೇ ನಿಗದಿಯಾಗಿದ್ದರಿಂದ ಅಷ್ಟಕ್ಕೆ ನಾವು ನಿಲ್ಲಿಸಬೇಕಾಗಿತ್ತು. 

ಯಕ್ಷಗಾನದ ಬಗ್ಗೆ ಆಸಕ್ತಿ ಅವರಲ್ಲಿ ಇನ್ನು ಹೆಚ್ಚಾಗುವಂತೆ ನಾವು ಮಾಡಿದ್ದೇವೆ ತಾಳೆಮದ್ದಳೆಗಳನ್ನು ಮಾಡಿದ್ದೇವೆ. ಭಾಗವತರ  ಗಾನ ವೈಭವ ಆಗಿದೆ. ಯಕ್ಷಗಾನದ ಬೇರೆ ಬೇರೆ ಮುಖಗಳನ್ನು ಅವರಿಗೆ ತೋರಿಸಿಕೊಟ್ಟಿದ್ದೇವೆ.  ಅವರು ಯಕ್ಷಗಾನದ ಮೇಷ ಭೂಷಣವನ್ನು ಕೂಡ  ಖರೀದಿಸಿಕೊಂಡಿದ್ದಾರೆ. ಮುಂದೆ ಇಂತಹ ಅಭಿಯಾನ ಸಾಧ್ಯವಾಗುವುದಿದ್ದರೆ  ಯಕ್ಷಗಾನಂ ವಿಶ್ವಗಾನಂ ಅಂತ ನಾವು ಹೇಳಿಕೊಂಡದ್ದು  ಅರ್ಥಪೂರ್ಣವಾಗುತ್ತದೆ ಎಂದರು.

ಪಟ್ಲ ಫೌಂಡೇಶನ್ ನ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ 75 ದಿನಗಳ ಸುದೀರ್ಘ ಅಮೆರಿಕ ಯಕ್ಷಗಾನ ದಿಗ್ವಿಜಯ  ಮುಗಿಸಿ ಇಂದು ಬಜಿಪೆಗೆ ಬಂದಿಳಿದಿದ್ದೇವೆ ತುಂಬಾ ಖುಷಿಯಾಗುತ್ತಿದೆ. ಈ ಮೊದಲು ಅಮೆರಿಕ ಪ್ರವಾಸ ಮಾಡಿದ್ದೇವೆ ಆದರೆ ಈ ಸಲದ ಪ್ರವಾಸ ಅಭೂತಪೂರ್ವ.  ಎಲ್ಲಾ ಕಡೆ ಯಕ್ಷಮಯ. 21 ರಾಜ್ಯಗಳಲ್ಲಿ 27 ಪ್ರದರ್ಶನ ಮಾಡಿದ್ದೆವೆ. ಒಂದೊಂದು ಕಾರ್ಯಕ್ರಮದಲ್ಲೂ ಒಂದು ಸಾವಿರಕ್ಕಿಂತ ಹಚ್ಚು ಪ್ರೇಕ್ಷಕರು ಭಾಗವಹಿಸಿದ್ದಿದ್ದು ವಿಶೇಷ. ಯಕ್ಷದ್ರುವ ಫೌಂಡೇಶನ್ ಅಮೆರಿಕದ ಅಧ್ಯಕ್ಷರಾದ ಡಾಕ್ಟರ್ ಅರವಿಂದ ಉಪಾಧ್ಯಾಯ ಅವರು ಮುತುವರ್ಜಿ ವಹಿಸಿ ಎಲ್ಲಾ ಕಾರ್ಯಕ್ರಮಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ನಮ್ಮ ಎಲ್ಲಾ ಕನ್ನಡ ಸಂಘ ತುಳು ಸಂಘ ಇತರ ಎಲ್ಲಾ ಸಂಘಟನೆಗಳು ಯಾವುದೇ ಜಾತಿಭೇದವನ್ನು ತೋರದೆ ನಮಗೆ ಸಹಕಾರ ಕೊಟ್ಟಿದ್ದಾರೆ. ಆದ್ದರಿಂದ ಅಲ್ಲಿಯ ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿ ಎನ್ನುವುದು ನನ್ನ ಅನಿಸಿಕೆ. 

ಅಮೆರಿಕದ ಎಲ್ಲಾ ಬಂಧುಗಳಿಗೂ ಈ ಮೂಲಕ ನಾನು ಧನ್ಯವಾದ ಸಮರ್ಪಿಸುತ್ತೇನೆ ಅಲ್ಲಿಯ ಪ್ರೇಕ್ಷಕರಲ್ಲಿ ರಷ್ಯನ್ನರು ಚೀನಿಯರು ಮತ್ತು ಹಲವು ದೇಶಗಳ ಪ್ರಜೆಗಳು  ಇದ್ದಿದ್ದು, ಅಲ್ಲದೆ ಯಕ್ಷಗಾನದ ಬಗ್ಗೆ ಅವರು  ತೋರಿದ ಆಸಕ್ತಿ,  ಯಕ್ಷಗಾನ ಕಲಿಕೆಯ ಆಸಕ್ತಿ ತುಂಬಾ ಖುಷಿ ಕೊಟ್ಟಿತು. ಅವರು ಆನ್ಲೈನ್ ಮುಖಾಂತರ ಕಾರ್ಯಕಾರದಲ್ಲಿ ಭಾಗವಹಿಸುವ  ಬಗ್ಗೆ ಉತ್ಸುಕ ರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಯೋಜನೆ ಹಾಕಿಕೊಳ್ಳಲಾಗುವುದು.  ಇಲ್ಲಿಗೆ ಬಂದು ಯಕ್ಷಗಾನ ಕಲಿಯುವ ಆಸಕ್ತಿಯನ್ನು ಕೂಡ ಹೊಂದಿದ್ದಾರೆ ಎಂದರು.

Category
ಕರಾವಳಿ ತರಂಗಿಣಿ