ಮಂಗಳೂರು: ನವಮಂಗಳೂರು ಬಂದರು 90,000 ಟನ್ ಕಾರ್ಗೊ ನಿರ್ವಹಣೆ ಹೊಂದಿತ್ತು. ಹಾಲಿ 46 ಮಿಲಿಯನ್ ಟನ್ ಕಾರ್ಗೊ ನಿರ್ವಹಣೆ ಸಾಮರ್ಥ್ಯ ಹೊಂದಿದೆ.ಮುಂದಿನ 2047ರಲ್ಲಿ ಕೇಂದ್ರ ಸರಕಾರದ ಅಮೃತ್ ಕಾಲ್ ಮೆರಿಟೈಮ್ ಯೋಜನೆಯ ಮೂಲಕ ಮಂಗಳೂರು ಬಂದಿರಿನ ಸರಕು ನಿರ್ವಹಣಾ ಸಾರ್ಮರ್ಥ್ಯವನ್ನು 100ಮಿಲಿಯನ್ ಟನ್ ಏರಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ಕೇಂದ್ರ ಸರಕಾರದ ಬಂದರು ನೌಕಯಾನ ಹಾಗೂ ಜಲಸಾರಿಗೆ ಸಚಿವ ಸರ್ಬಾ ನಂದ ಸೋನಾವಾಲ್ ತಿಳಿಸಿದ್ದಾರೆ.
ಪಣಂಬೂರಿನಲ್ಲಿ ನವ ಮಂಗಳೂರು ಬಂದರು ಪ್ರಾಧಿಕಾರದ ಸುವರ್ಣ ಸಂಭ್ರಮ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದ ಅವರು, ನವ ಮಂಗಳೂರು ಬಂದರು ಪರಿಸರ ಸ್ನೇಹಿ ಹಸಿರು ಬಂದರಾಗಿ ಆಧುನಿಕ ಸೌಲಭ್ಯ ಗಳೊಂದಿಗೆ ದೇಶದ ಆರ್ಥಿಕ ಕ್ಷೇತ್ರಕ್ಕೆ, ಕರಾವಳಿಯಲ್ಲಿ ವಾಸಿಸುತ್ತಿರುವ ನಿವಾಸಿಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ ಎಂದರು.ಬಂದರಿನ ಆರ್ಥಿಕ ಪ್ರಗತಿ ಹತ್ತು ಪಟ್ಟು ಹೆಚ್ಚಾಗಿದೆ.ಇದರಿಂದ ಫಲಾನು ಭವಿಗಳಿಗೆ ಹೆಚ್ಚು ಸಹಾಯವಾಗಲಿದೆ.
ಭಾರತ ಪ್ರಪಂಚದ ಶಕ್ತಿ ಶಾಲಿ ಆಗಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಪ್ರಕಾರ ದೇಶದ ಆರ್ಥಿಕ ಪ್ರಗತಿ ವೇಗವಾಗಿ ಸಾಗುತ್ತಿದೆ.ಭಾರತದ ಆರ್ಥಿಕ ಬೆಳವಣಿಗೆ ಪ್ರಪಂಚದ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ.ಕರ್ನಾಟಕ ಸ್ವಾವಲಂಬಿ, ಶಕ್ತಿ ಶಾಲಿ ರಾಜ್ಯವಾಗಿದೆ.ಬಂದರುಗಳ ಆಧುನೀಕ ರಣದಿಂದ ದೇಶದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ .ಮೇಕ್ ಇನ್ ಇಂಡಿಯಾ,ಡಿಜಿಟಲ್ ಇಂಡಿಯಾ,ಆತ್ಮ ನಿರ್ಭರ ಭಾರತದ ಹಾದಿಯಲ್ಲಿ ಕರ್ನಾಟಕ ರಾಜ್ಯದ ಮಂಗಳೂರಿನ ಕೊಡುಗೆ ಮಹತ್ವದ್ದಾಗಿದೆ ಎಂದರು.
ಕೇಂದ್ರ ಸರಕಾರದನವೀಕರಿಸಬಹುದಾದ ಇಂಧನ, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ,50 ವರ್ಷ ಆಚರಣೆಯ ಸಂದರ್ಭದಲ್ಲಿ ಸಾಕಷ್ಟು ಜನರ ಕೊಡುಗೆ ಇದೆ. ನೇರ ಹಾಗೂ ಪರೋಕ್ಷವಾಗಿ 30 ಸಾವಿರ ಜನರಿಗೆ ನವಮಂಗಳೂರು ಬಂದರು ಪ್ರಾಧಿಕಾರ ಉದ್ಯೋಗ ನೀಡಿದೆ.ಜಗತ್ತಿನ ನಾಲ್ಕನೆಯ ಅತೀ ದೊಡ್ಡ ಆರ್ಥಿಕ ಶಕ್ತಿ ಯಾದ ಭಾರತ.ಕಳೆದ ಹತ್ತು ವರ್ಷಗಳಲ್ಲಿ ರಫ್ತು ಪ್ರಮಾಣ ಶೇ 70 ಏರಿಕೆಯಾಗಿದೆ ಎಂದರು.
ಸಮಾರಂಭದಲ್ಲಿ ಭಾರತ ಸರಕಾರದ ನೌಕಾ ಸಚಿವಾಲಾಯದ ಮಹಾ ಪ್ರಬಂಧಕ ಶ್ಯಾಮ್ ಜಗನ್ನಾಥ್ ,ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್,ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಂಸದ ನಳಿನ್ ಕುಮಾರ್ ಮೊದಲಾದವರು ಉಪಸ್ಥಿತ ರಿದ್ದರು. ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ. ಅಕ್ಕರಾಜು ವೆಂಕಟರಮಣ ಸ್ವಾಗತಿಸಿದರು.