image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ರಚಿಸಲು ಅರ್ಜಿ ಆಹ್ವಾನ

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ರಚಿಸಲು ಅರ್ಜಿ ಆಹ್ವಾನ

ಮಂಗಳೂರು: ದ.ಕ ಜಿಲ್ಲೆಯ ಪ್ರವರ್ಗ "ಸಿ" ವರ್ಗದ  ಕೆಳಕಂಡ ಅಧಿಸೂಚಿತ ಸಂಸ್ಥೆಗಳಿಗೆ 9 ಜನ ಸದಸ್ಯರಿರುವ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಸಲುವಾಗಿ ಆಸಕ್ತ ಭಕ್ತಾಧಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರವರ್ಗ “ಸಿ” ಅರ್ಜಿ ಸ್ವೀಕೃತವಾಗದಿರುವ ದೇವಸ್ಥಾನಗಳಿಗೆ ಮರು ಪ್ರಕಟಣೆ ಹೊರಡಿಸಿರುವ ವಿವರ:
ಮಂಗಳೂರು ತಾಲೂಕು ಕೆಂಜಾರು ಗ್ರಾಮದ ಶ್ರೀ ಸಾರಬಳಿ ಧೂಮಾವತಿ ದೈವಸ್ಥಾನ, ಮೂಡಬಿದ್ರೆ ತಾಲೂಕು ಧರೆಗುಡ್ಡೆ ಗ್ರಾಮ ಶ್ರೀ ವಿನಾಯಕ ದೇವಸ್ಥಾನ, ಮೂಡಬಿದ್ರೆ ತಾಲೂಕು ಮಾರೂರು ಗ್ರಾಮದ ಶ್ರೀ ಗೋಪಿನಾಥ ಕೊಡಮಣಿತ್ತಾಯ ದೈವಸ್ಥಾನ, ಮೂಡಬಿದ್ರೆ ತಾಲೂಕು ಹೊಸಬೆಟ್ಟು ಗ್ರಾಮದ ಶ್ರೀ ಕೊಡಮಣಿತ್ತಾಯ ದೈವಸ್ಥಾನ, ಕಡಬ ತಾಲೂಕು ಬಳ್ಪ ಗ್ರಾಮದ ಶ್ರೀ ಸಂಪುಟ ನರಸಿಂಹ ದೇವಸ್ಥಾನ, ಮತ್ತು ಯಜ್ಞಮೂರ್ತಿ ದೇವಸ್ಥಾನ.
ಖಾಲಿ ಉಳಿದಿರುವ ಪ್ರವರ್ಗಗಳಿಗೆ ಪ್ರಕಟಣೆ ಹೊರಡಿಸಿರುವ ವಿವರ:-
ಬಂಟ್ವಾಳ ತಾಲೂಕು ಕನ್ಯಾನ  ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನ (ಪರಿಶಿಷ್ಟ ಜಾತಿ/ಪಂಗಡ-1, ಮಹಿಳೆ-1, ಸಾಮಾನ್ಯ-2), ಬೆಳ್ತಂಗಡಿ ತಾಲೂಕು  ಕೊಕ್ಕಡ ಗ್ರಾಮದ ಶ್ರೀ ಪುತ್ತಿಗೆ ವಿಷ್ಣುಮೂರ್ತಿ ದೇವಸ್ಥಾನ, (ಸಾಮಾನ್ಯ -1), ಕಡಬ ತಾಲೂಕು ಶಿರಾಡಿ ಗ್ರಾಮದ ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (ಸಾಮಾನ್ಯ -1)
 ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಡಿಸೆಂಬರ್ 3 ರಂದು 5.30 ರೊಳಗಾಗಿ “ಪ್ರಜಾ ಸೌಧ” ಜಿಲ್ಲಾಧಿಕಾರಿ ಕಛೇರಿಯ ಮೊದಲನೇ ಮಹಡಿಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರ ಕಚೇರಿಗೆ ಸಲ್ಲಿಸಬೇಕು. ನಿಗಧಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗೆ ಅಥವಾ ನಿಗಧಿತ ಅರ್ಜಿ ನಮೂನೆಗೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರ ಕಚೇರಿ ಸಂಪರ್ಕಿಸಬಹುದು ಎಂದು  ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ