image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಜಿರೆಯ ರುಡ್ ಸೆಟ್ ನಲ್ಲಿ 13 ದಿನಗಳ ಕಾಲ 'ಉಚಿತ ಕೋಳಿ ಸಾಕಾಣಿಕೆ' ತರಬೇತಿ

ಉಜಿರೆಯ ರುಡ್ ಸೆಟ್ ನಲ್ಲಿ 13 ದಿನಗಳ ಕಾಲ 'ಉಚಿತ ಕೋಳಿ ಸಾಕಾಣಿಕೆ' ತರಬೇತಿ

ಉಜಿರೆ : ನಿರುದ್ಯೋಗಿ ಯುವ-ಯುವತಿಯರಿಗೆ, ಉದ್ಯೋಗವನ್ನು ಅರಸುತ್ತಿರುವವರಿಗೆ ಹಾಗೂ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರುತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ ಬೇರೆ ಬೇರೆ ಬ್ಯಾಂಕುಗಳಿಂದ ರುಡ್ ಸೆಟ್ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರಿಗೆ ಸ್ವ ಉದ್ಯೋಗ /ಉದ್ಯೋಗಗಳನ್ನು ಕಲ್ಪಿಸಿದೆ.

ಈಗ ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 17.11.2025 ರಿಂದ 29.11.2025ರ ವರೆಗೆ 13 ದಿನದ ಉಚಿತ ತರಬೇತಿ  ಊಟ-ವಸತಿಯೊಂದಿಗೆ ಕೃಷಿ ಉದ್ಯಮಿ-ಕೋಳಿ ಸಾಕಾಣಿಕೆ ತರಬೇತಿ ನಡೆಯಲಿದೆ.

ಆಸಕ್ತಿರುವ ಕರ್ನಾಟಕ ರಾಜ್ಯದ 18 ರಿಂದ 50 ವರ್ಷಗಳ ವಯೋಮಿತಿಯ ಪುರುಷ ಮತ್ತು ಮಹಿಳೆಯರು  ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಸಂಸ್ಥೆಯ ವೆಬ್ ಸೈಟ್ ನಲ್ಲಿ (www.rudsetujire.com) ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಬರೆದು ಅರ್ಜಿಯನ್ನು ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ-574240, ಬೆಳ್ತಂಗಡಿ ದ.ಕ ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08256-236404, 6364561982, 9902594791, 9591044014 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ