image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾಂಕ್ರೀಟೀಕರಣಗೊಂಡ ಪಿ.ವಿ.ಎಸ್ ವೃತ್ತದಿಂದ ಲಕ್ಷ್ಮೀ ನಗರ ವಸತಿ ಸಂಕೀರ್ಣ ಸಂಪರ್ಕ ರಸ್ತೆ ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್

ಕಾಂಕ್ರೀಟೀಕರಣಗೊಂಡ ಪಿ.ವಿ.ಎಸ್ ವೃತ್ತದಿಂದ ಲಕ್ಷ್ಮೀ ನಗರ ವಸತಿ ಸಂಕೀರ್ಣ ಸಂಪರ್ಕ ರಸ್ತೆ ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಪಿ.ವಿ.ಎಸ್ ವೃತ್ತದಿಂದ ಲಕ್ಷ್ಮೀ ನಗರ ವಸತಿ ಸಂಕೀರ್ಣ ಸಂಪರ್ಕ ರಸ್ತೆಯು ರೂ 5.ಲಕ್ಷ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಂಡಿದ್ದು, ರಸ್ತೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ಉದ್ಘಾಟನೆಗೊಳಿಸಿದರು. ನಂತರ ಮಾತನಾಡಿದ ಶಾಸಕರು, ಸ್ಥಳೀಯ ನಿಕಟ ಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಲೀಲಾವತಿ ಪ್ರಕಾಶ್ ರವರು ವಿಶೇಷ ಮುತುವರ್ಜಿ ವಹಿಸಿದ್ದರ ಪರಿಣಾಮ ಈ ರಸ್ತೆಯು ಕಾಂಕ್ರೀಟೀಕರಣಗೊಂಡಿದ್ದು ವಿಶೇಷವಾಗಿ ಲಕ್ಷ್ಮೀನಗರ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಅನುಕೂಲವಾಗಿರುವುದು ಸಂತಸದ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಪುಷ್ಪರಾಜ್ ಬಿ.ಎನ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ಕಾರ್ಯದರ್ಶಿ ಸತೀಶ್ ಇರಾ ರವರನ್ನು ಶಾಸಕರು ಸನ್ಮಾನಿಸಿದರು.

ದಕ್ಷಿಣ ಮಂಡಲದ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಜಿಲ್ಲಾ ವಕ್ತಾರರಾದ ರಾಜಗೋಪಾಲ್ ರೈ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರಕಾಶ್ ಕೊಡಿಯಾಲ್ ಬೈಲ್, ಮಂಡಲದ ಕಾರ್ಯಾಲಯ ಕಾರ್ಯದರ್ಶಿ ನೀಲೇಶ್ ಕಾಮತ್, ಲಕ್ಷ್ಮೀ ನಾರಾಯಣಿ ದೇವಸ್ಥಾನದ ಕೃಷ್ಣ ಶೇಟ್, ಅರ್ಚಕರಾದ ಅಶೋಕ್ ಭಟ್, ಲಕ್ಷ್ಮೀನಗರ ಅಪಾರ್ಟ್ಮೆಂಟ್ ಅಸೋಸಿಯೇಶನ್ ಅಧ್ಯಕ್ಷರಾದ ಶರತ್ ಕುಮಾರ್, ಕೋಶಾಧಿಕಾರಿ ಪದ್ಮಜ ಎನ್, ಅಚ್ಯುತ ಎಲ್, ಜಗದೀಶ್ ಕಾಮತ್, ಪದ್ಮಿನಿ ಕಾಮತ್, ಪ್ರಭಾವತಿ ಶೆಟ್ಟಿ, ರಾಧಿಕಾ ಆರ್.ನಾಯಕ್, ವಾರಿಜಾ ಎಂ.ಪಿ, ಗೀತಾ ಪೈ, ಗೀತಾ ಬಿ. ರೈ, ಶಾಂತೇರಿ ಪೈ, ಸುರೇಶ್ ಪ್ರಭು, ದೀಪಾ ಕಾಮತ್, ಶೋಭಾ, ಬಸಪ್ಪ, ಹನುಮವ್ವ, ಮಣಿಕಂಠ, ಭರತ್ ಮೊದಲಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ