image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನ.14ರಿಂದ 16ರವರೆಗೆ ಫಾದರ್ ಮುಲ್ಲರ್‌ನಲ್ಲಿ ಅಂತರರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ-ಎಕ್ಸ್‌ಪ್ಲೋರಾ - 2025

ನ.14ರಿಂದ 16ರವರೆಗೆ ಫಾದರ್ ಮುಲ್ಲರ್‌ನಲ್ಲಿ ಅಂತರರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ-ಎಕ್ಸ್‌ಪ್ಲೋರಾ - 2025

ಮಂಗಳೂರು : ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಎಫ್‌ಎಂಸಿಐ) ಆಶ್ರಯದಲ್ಲಿ ಅಂತರರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ-ಎಕ್ಸ್‌ಪ್ಲೋರಾ ನ.14ರಿಂದ 16ರ ವರೆಗೆ ಫಾದರ್ ಮುಲ್ಲರ್ ಕನ್ವೆನ್ಸನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಎಫ್‌ಎಂಸಿಐ ನಿರ್ದೇಶಕ ಫಾ. ಫೌಸ್ಟಿನ್ ಲ್ಯೂಕಸ್‌ ಲೋಬೊ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

 ನ.14ರಂದು ಮಧ್ಯಾಹ್ನ 12ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿದ್ದು, ಈ ಸಮ್ಮೇಳನದಲ್ಲಿ ಭಾರತ ಮತ್ತು ವಿದೇಶಗಳಿಂದ 1,500 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಯುಕೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಜರ್ಮನಿ ಮತ್ತು ಭಾರತ ಸೇರಿದಂತೆ ಐದು ದೇಶಗಳ ತಜ್ಞರು ಭಾಗವಹಿಸಲಿದ್ದಾರೆ ಎಂದರು. ಕರ್ನಾಟಕ ಸರಕಾರದ ಆಯುಷ್‌ ಇಲಾಖೆಯ ಮುಖ್ಯ ನಿರ್ದೇಶಕ ಕಮಲಾ ಬಾಯಿ ಬಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ದಕ್ಷಿಣ ಆಫ್ರಿಕಾದ ದರ್ಬನ್ ತಾಂತ್ರಿಕ ವಿಶ್ವವಿದ್ಯಾಲಯದ ಹೋಮಿಯೊಪತಿ ವಿಭಾಗದ ಮುಖ್ಯಸ್ಥೆ ಡಾ. ಆಶ್ಲೇ ರೋಸ್ ಮತ್ತು ಯು.ಕೆ. ಫಮಖ್ಯನಲ್‌ ಶಿಫ್ಟ್ ಕನ್ಸಲ್ಡಿಂಗ್‌ನ ನಿರ್ದೇಶಕ ಡಾ. ಕಿಮ್ ಆಂಥೋನಿ ಜಾಬ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಶೋಧನಾ ವಿಧಾನ, ಶೈಕ್ಷಣಿಕ ನಾವೀನ್ಯತೆ ಮತ್ತು ವೈದ್ಯಕೀಯ ಪ್ರಗತಿಗಳ ಕುರಿತು ಅಧಿವೇಶನಗಳ ಮೂಲಕ ಹೋಮಿಯೋಪತಿ ವಿಜ್ಞಾನದ ತಿಳುವಳಿಕೆಯನ್ನು ಹೆಚ್ಚಿಸುವ ಗುರಿಯನ್ನು ಸಮ್ಮೇಳನ ಹೊಂದಿದೆ ಎಂದರು.

ಗುಂಪು ಸಂವಹನ, ವಸ್ತುನಿಷ್ಠ ರಚನಾತ್ಮಕ ಕ್ಲಿನಿಕಲ್ ಪರೀಕ್ಷೆ ಕುರಿತು ಕಾರ್ಯಾಗಾರ, ಸಂಶೋಧನಾ ಪ್ರಬಂಧ ಮತ್ತು ಪೋಸ್ಟರ್ ಸ್ಪರ್ಧೆಗಳು ನಡೆಯಲಿದ್ದು, 130 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 2025 ವಾರ್ಷಿಕ ಕಾಲೇಜು ನಿಯತಕಾಲಿಕೆ ಮತ್ತು ಸಂಶೋಧನಾ ಬುಲೆಟಿನ್ 2025ರ ಬಿಡುಗಡೆ ಮತ್ತು ಆಸ್ಪತ್ರೆ ಮಾಹಿತಿ ನಿರ್ವಹಣಾ ವ್ಯವಸ್ಥೆಯ ಉದ್ಘಾಟನೆಯೂ ನಡೆಯಲಿದೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಸಂಜೆ 4:30ರಿಂದ 9ರ ತನಕ ಸಾಂಸ್ಕೃತಿಕ ಕಾರ್ಯಕ್ರಮ  ಕಂಕನಾಡಿಯ ಫಾದರ್ ಮುಲ್ಲರ್ ಮೈದಾನದಲ್ಲಿ ನಡೆಯಲಿದೆ. ಈ ಉತ್ಸವವನ್ನು ದುಬೈನ ಉದ್ಯಮಿ ಮೈಕೆಲ್ ಡಿ ಸೋಜ ಉದ್ಘಾಟಿಸಲಿದ್ದು, ಭರತನಾಟ್ಯ ಕಲಾವಿದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ ಪುರಸ್ಕೃತ ರೆಮೋನಾ ಎವೆಟ್ ಪೆರೇರಾ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರೂಬೆನ್ ಜೇಸನ್ ಮಚಾದೊ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಎಫ್‌ಎಂಎಂಸಿಎಚ್‌) ಎನ್‌ಎಬಿಎಚ್ ಮಾನ್ಯತೆ ದೊರೆತು 10 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇದರ ಸಂಭ್ರಮಾಚರಣೆ ನ.14ರಂದು ಪರಾಹ್ನ 3 ಗಂಟೆಗೆ ಡಿಎಂ ಹಾಲ್‌ನಲ್ಲಿ ನಡೆಯಲಿದೆ. 2015ರಲ್ಲಿ ಮಾನ್ಯತೆಯನ್ನು ಸಾಧಿಸಿದಾಗಿನಿಂದ ಆಸ್ಪತ್ರೆಯು ನಿರಂತರ ಪರಿಶೋಧನೆ ಮತ್ತು ಸುಧಾರಣೆಗಳ ಮೂಲಕ ತನ್ನ ಮಾನದಂಡಗಳನ್ನು ಕಾಯ್ದುಕೊಂಡಿದೆ ಎಂದು ವಿವರಿಸಿದರು. ಇದೀಗ 6ನೇ ಆವೃತ್ತಿಯ ಎನ್‌ಎಬಿಎಚ್‌ ಮಾನದಂಡಗಳ ಅಡಿಯಲ್ಲಿ ಮಾನ್ಯತೆ ಪಡೆದಿದ್ದು, ಈ ಮಾನ್ಯತೆ 2029ರವರೆಗೆ ಇದೆ. ಎನ್‌ಎಬಿಎಚ್ ಡಿಜಿಟಲ್ ಆರೋಗ್ಯ ಮಾನದಂಡಗಳ ಅಡಿಯಲ್ಲಿ ಗೋಲ್ಡನ್ ಸ್ಟಾಂಡರ್ಡ್ ನೀಡಲಾಗಿದೆ ಎಂದು ವಿವರಿಸಿದರು.

ಫಾದ‌ರ್ ಮುಲ್ಲ‌ರ್ ಸಂಸ್ಥೆಯ ಸಮ್ಮೇಳನ ಸಭಾಂಗಣದಲ್ಲಿ ನ.15ರಂದು ಹೊರರೋಗಿಗಳು, ಒಳರೋಗಿಗಳು ಮತ್ತು ಎಫ್ ಎಂಸಿಐ ಸಿಬ್ಬಂಂದಿಯ ಮಕ್ಕಳಿಗಾಗಿ ಮಕ್ಕಳ ದಿನಾಚರಣೆ ಆಯೋಜಿಸಲಾಗಿದೆ. ಮಕ್ಕಳಿಗಾಗಿ ಚಿತ್ರಕಲೆ ಮತ್ತು ವೇಷಭೂಷಣ ಸ್ಪರ್ಧೆ, ಜಾದೂ ಪ್ರದರ್ಶನ ಏರ್ಪಡಿಸಲಾಗಿದೆ. ಸಂಸ್ಥೆಯ ವತಿಯಿಂದ ನ. 13ರಂದು ಬಜಾಲ್ ನ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಯೋಜಿಸಲಾಗಿದೆ ಎಂದು ಫಾ. ಫೌಸ್ಟಿನ್ ಲ್ಯೂಕಸ್ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತಾ, ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ಔಷಧೀಯ ವಿಭಾಗದ ಆಡಳಿತಾಧಿಕಾರಿ ರೆವರೆಂಡ್ ಫಾದರ್ ನೆಲ್ಸನ್ ಧೀರಜ್ ಪೈಸ್, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಫಾ. ಮೈಕೆಲ್ ಸಾಂತುಮೇಯ‌ರ್,

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ಜಾರ್ಜ್ ಜೀವನ್ ಸಿಕ್ವೆರಾ, ಸಹಾಯಕ ಆಡಳಿತಾಧಿಕಾರಿ ರೆವರೆಂಡ್ ಫಾದರ್ ವಿಲಿಯಂ ಡಿಸೋಜ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಡೀನ್ ಡಾ. ಆಂಟನಿ ಡಿ ಸೋಜ, ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಇ.ಎಸ್‌.ಜೆ. ಪ್ರಭು ಕಿರಣ್, ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವುಡ, ಹೆಚ್ಚುವರಿ ವೈದ್ಯಕೀಯ ಅಧೀಕ್ಷಕ ಡಾ. ಕಿರಣ್ ಶೆಟ್ಟಿ, ಎನ್‌ಎಬಿಎಚ್‌ ಸಂಯೋಜಕ ಡಾ. ಪ್ರಥ್ವಿ ಶೆಟ್ಟಿ, ಮುಖ್ಯ ಗುಣಮಟ್ಟ ವ್ಯವಸ್ಥಾಪಕ ಡಾ. ಹೆಲೆನ್ ಗಣಲಲಂಜಿಯಂ, ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಅನಿಲ್‌ ಶೆಟ್ಟಿ, ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್‌ನ ಮುಖ್ಯಸ್ಥೆ ವಿಲ್ಮಾ ನರ್ಸಿಂಗ್ ಫ್ಯಾಕಲ್ಟಿ ಆಫ್ ನರ್ಸಿಂಗ್‌ನ ಪ್ರಿಯಾ ಎಸ್ ಪೆರೇರಾ, ಜೋಸ್ಮಿತಾ ಡಿ ಸೋಜ, ಡಾ. ಕೆಲ್ವಿನ್, ಇಲಿಯಾಸ್‌ ಫೆರ್ನಾಂಡಿಸ್‌ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ