ಉಜಿರೆ: ಹರಿಯಾಣದಲ್ಲಿ ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ನ. 11 ರಿಂದ 12ರ ವರೆಗೆ ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸುತ್ತಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಮಂಗಳೂರು ವಿ.ವಿ. ಯಿಂದ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಮಹೇಶ್‌ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಎಂಟು ಮಂದಿ ರಾಷ್ಟ್ರೀಯ ಸೇವಾ ಯೋಜನಾ ಸ್ವಯಂ ಸೇವಕರು ಆಯ್ಕೆಯಾಗಿದ್ದು ಈಗಾಗಲೆ ಹರಿಯಾಣ ತಲುಪಿದ್ದಾರೆ.
ನೆವಿಲ್ ನವೀನ್ ಮೊರಾಸ್ (ಎಸ್.ಡಿ.ಎಂ. ಕಾಲೇಜು, ಉಜಿರೆ), ಯುವರಾಜ್ (ಕೆನರಾ ಕಾಲೇಜು, ಮಂಗಳೂರು), ಪಲ್ಲವಿ (ಗೋವಿಂದದಾಸ್ ಕಾಲೇಜು, ಸುರತ್ಕಲ್), ಶರಣ್ಯಾ ಶೆಟ್ಟಿ (ಬಿ.ಬಿ ಹೆಗ್ಡೆ ಕಾಲೇಜು, ಕುಂದಾಪುರ), ದೇವಿಕಾ (ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು, ಸುಬ್ರಹ್ಮಣ್ಯ), ದೀಪ್ತಿ (ವಿಜಯಾ ಕಾಲೇಜು, ಮುಲ್ಕಿ), ಬಿರಾದಾರ್ (ಸರ್ಕಾರಿ ಕಾಲೇಜು, ತೆಂಕನಿಡಿಯೂರು, ಉಡುಪಿ) ಮತ್ತು ಗಣೇಶ್ (ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ) ಆಯ್ಕೆಯಾದ ಸ್ವಯಂ ಸೇವಕರು. ಮಂಗಳೂರು ವಿ.ವಿ. ರಾಷ್ಟ್ರೀಯ ಸೇವಾ ಯೋಜನಾ ಸಂಯೋಜನಾಧಿಕಾರಿಗಳಾದ ಡಾ. ಶೇಷಪ್ಪ ಕೆ. ಮತ್ತು ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ್ ತಂಡವನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ.