image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಾಲ್ಯಪದವಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಸುಸಜ್ಜಿತ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಪ್ರಯೋಗಾಲಯಗಳನ್ನು ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್

ನಾಲ್ಯಪದವಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಸುಸಜ್ಜಿತ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಪ್ರಯೋಗಾಲಯಗಳನ್ನು ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್

ಸರಕಾರಿ ಪದವಿ ಪೂರ್ವ ಕಾಲೇಜು ನಾಲ್ಯಪದವು, ಶಕ್ತಿನಗರ ಇಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಪ್ರಯೋಗಾಲಯಗಳು ಹಾಗೂ ಸಾರ್ಟ್ ಡಿಜಿಟಲ್ ಪ್ಯಾನಲ್ ಬೋರ್ಡ್‌ಗಳ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, ಇಲ್ಲಿನ ಸ್ಥಳೀಯರ ಬೇಡಿಕೆಯಂತೆ ಈ ಪದವಿಪೂರ್ವ ಕಾಲೇಜನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರುಗೊಳಿಸಲಾಗಿತ್ತು. ನಂತರ ಹಂತ ಹಂತವಾಗಿ ಇಲ್ಲಿ ಅಗತ್ಯವಿರುವ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸಹ ಕೈಗೊಳ್ಳಲಾಗಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್, ಮಂಗಳೂರು ಹಾಗೂ ಶ್ರೀರಾಮ ಸೇವಾ ಸಂಕಲ್ಪ ಫೌಂಡೇಶನ್ ( ಶ್ರೀರಾಮ್ ಫೈನಾನ್ಸ್ ) ರವರ 20 ಲಕ್ಷ ಹಾಗೂ 19 ಲಕ್ಷ ಸಿ.ಎಸ್.ಆರ್ ಅನುದಾನದಲ್ಲಿ ಈ ಪ್ರಯೋಗಾಲಯಗಳು ಹಾಗೂ ಸ್ಮಾರ್ಟ್ ಪ್ಯಾನಲ್ ಗಳು ಉದ್ಘಾಟನೆಗೊಂಡಿವೆ. ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ  ಅವರಿಗೆ ವಿಶೇಷ ಧನ್ಯವಾದಗಳು. ವಿದ್ಯಾರ್ಥಿಗಳು ಇವುಗಳ ಸದ್ಬಳಕೆ ಮಾಡುವ ಮೂಲಕ ಉಪಯೋಗವನ್ನು ಪಡೆದುಕೊಂಡರೆ ಎಲ್ಲರ ಶ್ರಮ ಸಾರ್ಥಕವಾದಂತೆ ಎಂದರು.

ಚೇತನ್ ಮೆಂಡೋನ್ಸಾ, ಶರಚಂದ್ರ ಭಟ್ ಕಾಕುಂಜೆ, ಎಂ.ಪುರುಷೋತ್ತಮ ಭಟ್, ಪ್ರಾಂಶುಪಾಲರಾದ ಜಯಾನಂದ ಯನ್. ಸುವರ್ಣ, ಶ್ರೀಮತಿ ವಾಣಿ, ಅಶೋಕ್ ನಾಯಕ್, ಕುಶಲ್ ಕುಮಾರ್, ಕಿಶೋರ್ ಕುಮಾರ್, ಸೇರಿದಂತೆ ಕಾಲೇಜು ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ