ಮಂಗಳೂರು : ಅಬಕಾರಿ ಮತ್ತು ಪಿಡಬ್ಲ್ಯೂಡಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದ್ದು, ಅಧಿಕಾರಿಗಳನ್ನು ವರ್ಗಾಯಿಸಿ ದಕ್ಷ ಅಧಿಕಾರಿಯನ್ನು ನೇವಿಸುವಂತೆ ಆರ್. ಧನರಾಜ್ ಒತ್ತಾಯಿದ್ದಾರೆ. ನಗರದ ಖಾಸಗಿ ಹೊಟೇಲಿನಲ್ಲಿ ಏರ್ಪಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಪ್ರಸ್ತುತ ದ.ಕ. ಜಿಲ್ಲೆಯ ಅಬಕಾರಿ ಮತ್ತು ಪಿಡಬ್ಲ್ಯೂಡಿ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಅಬಕಾರಿ ಇಲಾಖೆಯಿಂದ ಸಿಎಲ್-7 ಲೈಸನ್ಸ್ ನೀಡಲು 20-22 ಲಕ್ಷ ರು. ಲಂಚ ಪಡೆಯಲಾಗುತ್ತಿದೆ. ಸಿಎಲ್-7 ಲೈಸನ್ಸ್ ಪಡೆಯಲು ಕನಿಷ್ಠ 10 ಕೊಠಡಿಗಳಿರಬೇಕು. ಆದರೆ ಯಾವ ಮೂಲಸೌಕರ್ಯ ಇಲ್ಲದಿದ್ದರೂ ಲಂಚ ಪಡೆದು ಬೇಕಾಬಿಟ್ಟಿ ಲೈಸನ್ಸ್ ನೀಡಲಾಗುತ್ತಿದೆ. ಇದರಲ್ಲಿ ಅಬಕಾರಿ ಸಚಿವರು ಮತ್ತು ಆಯಾ ಜಿಲ್ಲೆಗಳ ಅಬಕಾರಿ ಡಿಸಿಗಳು ಭಾಗಿಯಾಗಿದ್ದಾರೆ. ಇದಕ್ಕಾಗಿ ಅಬಕಾರಿ ಡಿಸಿಗಳು 20 ಲಕ್ಷ, ಸಚಿವರು 10 ಲಕ್ಷ ಲಂಚ ಪಡೆಯುತ್ತಿದ್ದಾರೆ. ಇದಲ್ಲದೆ, ಸರ್ಕಾರಕ್ಕೆ 9-10 ಲಕ್ಷ ತೆರಿಗೆ ಕಟ್ಟಬೇಕಾಗುತ್ತದೆ. ಲೈಸನ್ಸ್ ಹೆಸರಲ್ಲಿ ಯಾಕೆ ಭ್ರಷ್ಟಾಚಾರ ಮಾಡುತ್ತಿದ್ದಾರೆ, ನೇರವಾಗಿ ಕೊಡಬಹುದಲ್ವಾ ಎಂದರು.
ಮಂಗಳೂರಿನಲ್ಲಿ ಎರಡು ವರ್ಷಗಳ ಹಿಂದೆ ಬಿಂದುಶ್ರೀ ಎನ್ನುವ ಅಬಕಾರಿ ಡಿಸಿ ಇದ್ದು, ಆನಂತರ ಉಡುಪಿಗೆ ಹೋಗಿದ್ದರು, ಇದೀಗ ಮತ್ತೆ ಮಂಗಳೂರಿಗೆ ಬಂದಿದ್ದಾರೆ. ಮಂಗಳೂರಿನಲ್ಲಿ ಡೀಸಿಯಾಗಿದ್ದ ಶ್ರೀನಿವಾಸ್ ಉಡುಪಿಗೆ ಹೋಗಿದ್ದಾರೆ. ಇವರೆಲ್ಲ ಪರಮ ಭ್ರಷ್ಟರಾಗಿದ್ದವರು. ಇವರನ್ನೇ ಮತ್ತೆ ಯಾಕೆ ಇಲ್ಲಿಗೆ ಹಾಕಿದ್ದಾರೆ ಎಂದು ಧನರಾಜ್ ಪ್ರಶ್ನೆ ಮಾಡಿದ್ದಾರೆ. ಇವರ ವಿರುದ್ಧ ಲೋಕಾಯುಕ್ತಕ್ಕೂ ದೂರು ಕೊಟ್ಟಿದ್ದೇನೆ ಎಂದರು.
ಪಿಡಬ್ಲ್ಯುಡಿ ಇಲಾಖೆಯಲ್ಲಿ ಬೆಂಗಳೂರಿನಲ್ಲಿ ಸೋಮನಾಥ ಎಂಬ ಅಧಿಕಾರಿ ಒಂಬತ್ತು ವರ್ಷಗಳಿಂದ ಒಂದೇ ಕಡೆ ಇದ್ದಾರೆ. ತನಗೆ ಬೆಳಗಾವಿ ಸಾಹುಕಾರ್ ಬಾರೀ ದೋಸ್ತ್. ಮೂರು ಸಿಎಂ ಚೇಂಜ್ ಆದರೂ ನಾನು ಚೇಂಜ್ ಆಗಲ್ಲ ಎಂದು ಹೇಳುತ್ತ ಸಚಿವ ಸತೀಶ್ ಜಾರಕಿಹೊಳಿ ಹೆಸರನ್ನೂ ದುರುಪಯೋಗ ಮಾಡುತ್ತಿದ್ದಾರೆ. ಯಾಕೆ ಸರ್ಕಾರ ಇವರನ್ನು ಒಂದೇ ಸ್ಥಳದಲ್ಲಿ ಇಟ್ಟುಕೊಂಡಿದೆ ಎಂದು ಪ್ರಶ್ನಿಸಿದ್ದಾರೆ.