ಮಂಗಳೂರು: ವರ್ಲ್ಡ್ ಅಕಾಡೆಮಿಕ್ ಕಾಂಗ್ರೆಸ್ ಆಫ್ ಎಮರ್ಜನ್ಸಿ ಮೆಡಿಸನ್ ವಾರ್ಷಿಕ ಸಮ್ಮೇಳನವು ಮಂಗಳೂರಿನ ಎಜೆ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯಿನ್ಸ್ ಆಂಡ್ ರಿಸರ್ಚ್ ಸೆಂಟರ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ, ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ವರ್ಲ್ಡ್ ಅಕಾಡೆಮಿಕ್ ಕಾಂಗ್ರೆಸ್ ಆಫ್ ಎಮರ್ಜನ್ಸಿ ಮೆಡಿಸನ್ ಮುಖ್ಯ ಶೈಕ್ಷಣಿಕ ಅಧಿಕಾರಿ ಡಾ.ಸಾಗರ್ ಗಾಲ್ವಾಂಕರ್ ಅವರು, ವೈದ್ಯಕೀಯ ಬಿಕ್ಕಟ್ಟಿನ ವೇಳೆ ಸಕಾಲಿವಾಗಿ ರೋಗ ನಿರ್ಣಯ, ತ್ವರಿತ ಚಿಕಿತ್ಸೆ ಹಾಗೂ ಸಂಘಟಿತ ಆರೈಕೆಯನ್ನು ಮಾಡುವ ಮೂಲಕ ಜೀವ ಉಳಿಸುವ ಕೆಲಸದಲ್ಲಿ ತುರ್ತು ಔಷಧ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಮಂಗಳೂರು ವಿಶ್ವದ ಅತ್ಯಂತ ಪ್ರಾಚೀನ ಶೈಕ್ಷಣಿಕ ತುರ್ತು ವೈದ್ಯಕೀಯ ಕಾಂಗ್ರೆಸ್ ನ ಕೇಂದ್ರ ಬಿಂದು ಆಗಿದೆ ಅವರು ಹೇಳಿದರು. ಎಜೆ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಅವರು ಮಾತನಾಡಿ, ಎಜೆ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿರುವ ಈ ಸಮಾವೇಶವನ್ನು ಇಂಡೋ ಯುಎಸ್ ಕೊಲಾಬರೇಟ ಫಾರ್ ಅಕಾಡೆಮಿಕ್ ಎಮೆರ್ಜನ್ಸಿ ಅಂಡ್ ಟ್ರಾಮಾ ಇನ್ ಇಂಡಿಯಾ ಆಯೋಜನೆ ಮಾಡಿದ್ದು, ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ಕೋಲಾಬರೇಟಿಂಗ್ ಸೆಂಟರ್ ಫಾರ್ ಎಮರ್ಜನ್ಸಿ ಅಂಡ್ ಟ್ರಾಮಾ ಇನ್ ಆಗ್ನೇಯ ಏಷ್ಯಾ ಸಹಭಾಗಿತ್ವದಲ್ಲಿ ಹಲವಾರು ಜಾಗತಿಕ ಸಂಸ್ಥಗಳು ಭಾಗವಹಿಸುವಿಕೆ ಜತೆಗೆ ಈ ಕಾರ್ಯಕ್ರಮ ಅರ್ಥಪೂರ್ಣ ಆಚರಣೆ ಮಾಡಲಾಗಿದೆ ಎಂದರು.
ವಿಶ್ವದ ೮೦೦ ಮಂದಿ ತುರ್ತು ವೈದ್ಯಕೀಯ ತಜ್ಞರು, ೬೦ ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಅಧ್ಯಾಪಕ ಸದಸ್ಯರು ಈ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ತುರ್ತು ಔಷಧ ವಿಭಾಗದಲ್ಲಿ ಪದವಿ ಪಡೆದ ವೈದ್ಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು. ವರ್ಲ್ಡ್ ಅಕಾಡೆಮಿಕ್ ಕಾಂಗ್ರೆಸ್ ಆಫ್ ಎಮರ್ಜನ್ಸಿ ಮೆಡಿಸನ್ ೨೫ರ ಸಮ್ಮೇಳನದ ಅಧ್ಯಕ್ಷ ಎ.ಜೆ, ಶೆಟ್ಟಿ ಅಧ್ಯಕ್ಷತೆ ವಹಿಸಿದ್ರು. ಈ ವೇಳೆ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಡಬ್ಲುಸಿಇಎಂ೨೫ ನ ಆಯೋಜಕ ಡಾ. ಸಂತೋಷ ಸೋನ್ಸ್, ಡಬ್ಲುಸಿಇಎಂ೨೫ ರ ಪ್ರಧಾನ ಕಾರ್ಯದರ್ಶಿ ಡಾ. ವಿಮಲ್ ಕೃಷ್ಣನ್ ಪಿಳೈ, ಡಾ. ಅಶೋಕ್ ಹೆಗ್ಡೆ, ಡಾ. ಪ್ರವೀಣ್ ಅಗರವಾಲ್, ಡಾ. ಸಂಜೀವ್ ಕುಮಾರ್ ಭೋಯಿ, ಡಾ. ಸಿದ್ದಾರ್ಥ ದುಭಾಶಿ ಸೇರಿದಂತೆ ಹಲವರು ಇದ್ದರು.