image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸರ್ವ ಭಾಷ ಸಂಗಮವೇ ನಿಜವಾದ ರಾಜ್ಯೋತ್ಸವ - ಡಾ. ಬೋಳಾರ್ ಶಿವರಾಮ್ ಶೆಟ್ಟಿ

ಸರ್ವ ಭಾಷ ಸಂಗಮವೇ ನಿಜವಾದ ರಾಜ್ಯೋತ್ಸವ - ಡಾ. ಬೋಳಾರ್ ಶಿವರಾಮ್ ಶೆಟ್ಟಿ

ಮಂಗಳೂರು: ಕನ್ನಡ ಸoಘ, ನವ ಮಂಗಳೂರು ಬಂದರು ಪ್ರಾಧಿಕಾರದ ವತಿಯಿಂದ ಜೆ. ಏನ್. ಸಿ. ಸಭಾಭನದಲ್ಲಿ  ನಡೆದ ಕನ್ನಡ ರಾಜ್ಯೋತ್ಸವ ಸಮಾರoಭದಲ್ಲಿ ಮುಖ್ಯ ಅತಿಥಿಯಾಗಿ ತಮ್ಮ ಸಂದೇಶವನ್ನು ನೀಡಿದರು. ಅಧ್ಯಕ್ಷತೆಯನ್ನು ನವ ಮಂಗಳೂರು ಬಂದರು ಪ್ರಾಧಿಕಾರಾದ ಅಧ್ಯಕ್ಷರಾದ ಡಾ. ವೆoಕಟ ರಮಣ ಅಕ್ಕರಾಜು ವಹಿಸಿದರು. ತಮ್ಮ ಸoದೇಶದಲ್ಲಿ ಕನ್ನಡ ಕಾರ್ಯಕ್ರಮಗಳಿಗೆ ಪ್ರಾಧಿಕಾರವು ಸಹಕಾರ ನೀಡುತ್ತಾ ಬoದಿದೆ. 2047  ರ ಕನಸ್ಸನ್ನು ನನಸು ಮಾಡಲು ನಾವೆಲ್ಲರೂ ಶ್ರಮಿಸೋಣವೆoದು ಕರೆ ನೀಡಿದರು.

ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀಮತಿ ಯಸ್. ಶಾoತಿ ತಮ್ಮ ಭಾಷಣದಲ್ಲಿ ಎಲ್ಲರನ್ನು ಸ್ಮರಿಸಿ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಸಲ್ಲಿಸಿದರು.

ಕನ್ನಡ ಸಂಘದ ಅಧ್ಯಕ್ಷರಾದ ಶ್ರೀಮತಿ ಲೀಲಾ ಮುನ್ನುಡಿ ಭಾಷಣ ಮಾಡಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ನೋರ್ಬಟ್ ಮಿಸ್ಕಿತ್ ವoದಿಸಿದರು. ಶ್ರೀಮತಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಸಾoಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪಣoಬೂರು ಅಸುಪಾಸಿನ ಪ್ರೌಢಶಾಲಾ ವಿದ್ಯಾರ್ಥಿಗಳಿoದ ವಿವಿದೋತ್ಸವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

Category
ಕರಾವಳಿ ತರಂಗಿಣಿ