image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕನ್ನಡ ರಾಜ್ಯೋತ್ಸವದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಬಿಸಿಲಲ್ಲಿ ಕಾಯುವಂತೆ ಮಾಡಿದ ಸುಳ್ಯ ಶಾಸಕರ ವರ್ತನೆ ಖಂಡನೀಯ : ಕೀರ್ತನ್ ಗೌಡ ಕೊಡಪಾಲ

ಕನ್ನಡ ರಾಜ್ಯೋತ್ಸವದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಬಿಸಿಲಲ್ಲಿ ಕಾಯುವಂತೆ ಮಾಡಿದ ಸುಳ್ಯ ಶಾಸಕರ ವರ್ತನೆ ಖಂಡನೀಯ : ಕೀರ್ತನ್ ಗೌಡ ಕೊಡಪಾಲ

ಸುಳ್ಯ : ಕನ್ನಡ ರಾಜ್ಯೋತ್ಸವವನ್ನು ಜಾತಿ, ಮತ, ಪಕ್ಷ ಭೇದ ಮರೆತು ಆಚರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಸುಳ್ಯದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಇಂದು ಸಮಯಕ್ಕೆ ಸರಿಯಾಗಿ ಬಾರದೆ, ಮಕ್ಕಳನ್ನು ಅಧಿಕಾರಿಗಳನ್ನು ಕಾಯಿಸುವುದರ ಮೂಲಕ ಜಾವಾಬ್ದಾರಿ ಇಲ್ಲದವರಂತೆ ವರ್ತಿಸಿರುವುದು ಖಂಡನೀಯ ಎಂದು ಎನ್ ಯು ಎಸ್ ಐ ಜಿಲ್ಲಾ ಉಪಾಧ್ಯಕ್ಷ ಕೀರ್ತನ್ ಗೌಡ ಕೊಡಪಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಯಕ್ಕೆ ಸರಿಯಾಗಿ ಧ್ವಜಾರೋಹಣ ನೇರವೇರಿಸದೆ, ತಡವಾಗಿ ಕಾರ್ಯಕ್ರಮಕ್ಕೆ ಬರುವುದರ ಮೂಲಕ ಮಕ್ಕಳನ್ನು ಬಿಸಿಲಲ್ಲಿ ಕಾಯಿಸಿದ್ದಾರೆ. ಇದೇ ರೀತಿಯ ಬೇಜಾವಬ್ದಾರಿ ವರ್ತನೆಯಿಂದ ಸುಳ್ಯ ಅಭಿವೃದ್ಧಿಯಲ್ಲಿಯೂ ಹಿಂದೆ ಉಳಿದಿದೆ. ಈ ರೀತಿಯ ವ್ಯವಸ್ಥೆಯನ್ನು ಎನ್ ಎಸ್ ಯು ಐ ತೀವ್ರವಾಗಿ ಖಂಡಿಸುತ್ತದೆ ಎಂದು  ಹೇಳಿದ್ದಾರೆ.

Category
ಕರಾವಳಿ ತರಂಗಿಣಿ