image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾನುವಾರ ದಿನಾಂಕ 29 ಸೆಪ್ಟೆಂಬರ್ 2024, ಸಂಘನಿಕೇತನದಲ್ಲಿ ಮಾತಾ ಅಮೃತಾನಂದಮಯಿಯವರ ಜನ್ಮದಿನಾಚರಣೆ ಅಮೃತೋತ್ಸವ 2024

ಭಾನುವಾರ ದಿನಾಂಕ 29 ಸೆಪ್ಟೆಂಬರ್ 2024, ಸಂಘನಿಕೇತನದಲ್ಲಿ ಮಾತಾ ಅಮೃತಾನಂದಮಯಿಯವರ ಜನ್ಮದಿನಾಚರಣೆ ಅಮೃತೋತ್ಸವ 2024

ಮಂಗಳೂರು:  ನಗರದ ಸಂಘನಿಕೇತನದಲ್ಲಿ ಭಾನುವಾರ ದಿನಾಂಕ29-9-2024 ರಂದು ವಿಶ್ವದ ಅಗ್ರಗಣ್ಯ ಆಧ್ಯಾತ್ಮಿಕ ನೇತಾರರಲ್ಲೋರ್ವರಾದ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿಯವರ 71 ನೆಯ ಅವತರಣೋತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಜರುಗಲಿರುವುದು ಎಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಾ ಅಮೃತಾನಂದಮಯಿ ಮಠದ ಅಧ್ಯಕ್ಷರಾದ ಡಾ. ವಸಂತ ಕುಮಾರ್ ಪೆರ್ಲ ಹೇಳಿದರು. 

ಮಾತಾ ಅಮೃತಾನಂದಮಯಿ ಮಠದ ಕರಾವಳಿ ಕರ್ನಾಟಕದ ವಿವಿಧ ಸೇವಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಅಂದು ಬೆಳಗ್ಗೆ 9.00 ಗಂಟೆಗೆ ಮಠದ ಮುಖ್ಯಸ್ಮರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ಸಾರಥ್ಯದಲ್ಲಿ ಶ್ರೀ ಗುರುಪಾದುಕಾ ಪೂಜೆ ನಡೆಯಲಿದೆ.

ಮಾತಾ ಅಮೃತಾನಂದಮಯಿ ಸೇವಾಸಮಿತಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ನೂತನ ಸೇವಾ ಸಮಿತಿಗಳ ಪದಗ್ರಹಣ ಸಮಾರಂಭ ಜರುಗಲಿರುವುದು. ಈ ಸಂದರ್ಭದಲ್ಲಿ ಕಥಾಮೃತ ಎಂಬ ವಿಶೇಷ ಹರಿಕಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅಮೃತೋತ್ಸವ-2024 ರ ಸಭಾ ಕಾರ್ಯಕ್ರಮವು ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ರವರ ಘನ ಉಪಸ್ಥಿತಿಯಲ್ಲಿ ಜರುಗಲಿದ್ದು

ಮುಖ್ಯ ಅತಿಥಿಯಾಗಿ ಅದಾನಿ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಕಿಶೋರ್ ಆಳ್ವ ಮತ್ತು ಗೌರವಾನಿತ ಅತಿಥಿಯಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ  ಡಾ.ಎಂ.ಮೋಹನ ಆಳ್ವ ಭಾಗವಹಿಸಲಿರುವರು. ಮಠದ ಮಾನವೀಯ ಸೇವಾ ಯೋಜನೆಗಳ ಅನ್ವಯ ವಸ್ತ್ರದಾನ ಹಾಗೂ ಅಮೃತ ಆರೋಗ್ಯ ಸೇವೆಗಳ ವಿತರಣೆ ಇರುತ್ತದೆ. ಆ ನಂತರ ಭಕ್ತರಿಗೆ ಮಹಾಪ್ರಸಾದ ವಿತರಣೆ ಇರುತ್ತದೆ.

ಸಾರ್ವಜನಿಕರು ಬಂದು ಭಾಗವಹಿಸಿ ಅಮ್ಮನ ಕೃಪಾಕಟಾಕ್ಷಕ್ಕೆ,  ಪಾತ್ರರಾಗಬೇಕೆಂದು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ಅಮಿನ್, ಯೋಗೀಶ್ ಕೊಡವೂರು, ರಾಮನಾಥ್ ನಾಯಕ್ ಮತ್ತು ಡಾ. ದೇವದಾಸ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ