ಮಂಗಳೂರು: ಬೈಕಂಪಾಡಿ ಜಿ.ಟಿ.ಟಿ.ಸಿ ಡಿಪ್ಲೋಮಾ ಕಾಲೇಜಿನಲ್ಲಿ ಸಿ.ಎನ್.ಸಿ. ಮಿಲ್ಲಿಂಗ್, ಸಿ.ಎನ್.ಸಿ. ಟರ್ನಿಂಗ್, ಮ್ಯಾನುವಲ್ ಲೇತ್, ಮಿಲ್ಲಿಂಗ್ ಮೆಶಿನ್ ಆಪರೇಟರ್, ಸರ್ಫೇಸ್ ಗ್ರೈಂಡಿಂಗ್ ಆಪರೇಟರ್, ಮೆಕ್ಯಾನಿಕಲ್ ಕ್ಯಾಡ್, ಆಟೋಮೇಷನ್/ಸ್ಕಾಡಾ ಮತ್ತು ಐಒಟಿಯಂತಹ ಉನ್ನತ ಮತ್ತು ಉದ್ಯೋಗಾಧಾರಿತ ಅಲ್ಪಾವಧಿಯ ಕೋರ್ಸುಗಳು (1 ತಿಂಗಳಿಂದ 3 ತಿಂಗಳವರೆಗೆ) ಲಭ್ಯವಿದೆ. ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಅಥವಾ ಬಿ.ಇ. ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಎಲ್ಲಾ ಕೋರ್ಸುಗಳು ದೇಶ-ವಿದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತವೆ. ಹೆಚ್ಚಿನ ಮಾಹಿತಿಗೆ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಜಿ.ಟಿ.ಟಿ.ಸಿ ಕೇಂದ್ರವನ್ನು (ದೂ.ಸಂಖ್ಯೆ:8073208137, 7899070548, 9481265587) ಸಂಪರ್ಕಿಸುವಂತೆ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.