image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ವಿಶ್ವವಿದ್ಯಾನಿಲಯದ 45ನೇ ಸಂಸ್ಥಾಪನಾ ದಿನ

ಮಂಗಳೂರು ವಿಶ್ವವಿದ್ಯಾನಿಲಯದ 45ನೇ ಸಂಸ್ಥಾಪನಾ ದಿನ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವನ್ನು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಗೂ ಇನ್ನಿತರ ಆಸಕ್ತರಿಗೆ ಉನ್ನತ ಶಿಕ್ಷಣ ಒದಗಿಸಲು 10ನೇ ಸೆಪ್ಟೆಂಬರ್ 1980 ಪ್ರಾರಂಭಿಸಲಾಗಿತ್ತು. ಆದುದರಿಂದ 10ನೇ ಸೆಪ್ಟೆಂಬರ್ 1980 ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನವಾಗಿದ್ದು, ಈಗ ವಿಶ್ವವಿದ್ಯಾನಿಲಯಕ್ಕೆ 44 ವರ್ಷಗಳಾಗಿ ದಿನಾಂಕ 25.09.2024ರಂದು ಬುಧವಾರ 45ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪಿ ಎಲ್ ಧರ್ಮ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ಸುಸಂದರ್ಭದಲ್ಲಿ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ, ನಿವೃತ್ತ ನ್ಯಾಯಾಧೀಶರು ಮತ್ತು ಕರ್ನಾಟಕದ ಮಾಜಿ ಲೋಕಾಯುಕ್ತರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಂಸ್ಥಾಪನಾ ದಿನಾಚರಣೆಯ ಉಪನ್ಯಾಸವನ್ನು ನೀಡಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ. ಪಿ.ಎಲ್. ಧರ್ಮ, ಮಾನ್ಯ ಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯ ಇವರು ವಹಿಸಿಕೊಳ್ಳುವರು ಎಂದರು. 

ಕಳೆದ 44 ವರ್ಷಗಳಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಹಾಗೂ ಮಹನೀಯರಲ್ಲಿ ಪ್ರಮುಖರಾದ ಶ್ರೀ ಗಿರೀಶ್ ಕಾರ್ನಾಡು, ಡಾ. ರಾಜಾರಾಮಣ್ಣ, ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮುಂತಾದವರು ಸಂಸ್ಥಾಪನಾ ದಿನದ ಉಪನ್ಯಾಸ ನೀಡಿರುತ್ತಾರೆ. ಸಂಸ್ಥಾಪನಾ ದಿನಾಚರಣೆಯ ಸಮಾರಂಭವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಪೂರ್ವಾಹ್ನ ಗಂಟೆ 11.00ಕ್ಕೆ ಪ್ರಾರಂಭಿಸಲಾಗುವುದು. ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿ ಸದಸ್ಯರು, ಅಧ್ಯಾಪಕ ಹಾಗೂ ಅಧ್ಯಾಪಕೇತರ ವೃಂದದವರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಆಹ್ವಾನಿತ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು. ಪ್ರತಿ ವರ್ಷ ಸಪ್ಟೆಂಬರ್ ಹತ್ತರಂದು ನಡೆಯುತ್ತಿದ್ದು, ಈ ಬಾರಿ ಜಸ್ಟಿಸ್ ಸಂತೋಷ್ ಹೆಗ್ಡೆಯವರನ್ನು ಕರೆತರುವ ಸಲುವಾಗಿ 45ನೇ ಸಂಸ್ಥಾಪನಾ ದಿನ‌  ಸೆಪ್ಟೆಂಬರ್ ಇಪ್ಪತೈದನೆ ತಾರೀಖು ನಡೆಯಲಿದೆ ಎಂದರು.

Category
ಕರಾವಳಿ ತರಂಗಿಣಿ