ಅಧ್ಯಕ್ಷತೆ ವಹಿಸಿದ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಸಂತೋಷ್ ಮಾತನಾಡಿ, ಎಲ್ಲಾ ದಾನಗಳಲ್ಲಿ ವಿದ್ಯಾದಾನ ಶ್ರೇಷ್ಠ ದಾನವಾಗಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ಶುಲ್ಕದಲ್ಲಿ ತಾಂತ್ರಿಕಶಿಕ್ಷಣ ನೀಡುತ್ತಿರುವ ಹೆಗ್ಗಡೆಯವರ ಹೃದಯಶ್ರೀಮಂತಿಕೆಯ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದರು.
ಎಸ್.ಡಿ.ಎಂ ಎಂಜಿನಿಯರಿಂಗ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕಕುಮಾರ್, ಪಾಲಿಟೆಕ್ನಿಕ್‌ನ ಪ್ರಬಂಧಕ ಚಂದ್ರನಾಥ ಜೈನ್, ಮಿಥುನ್‌ಕುಮಾರ್ ಮತ್ತು ಗ್ರಂಥಪಾಲಕಿ ನಮಿತಾ ಶೆಟ್ಟಿ ಉಪಸ್ಥಿತರಿದ್ದರು.