image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕ್ರೀಡೆಯಿಂದ ದೈಹಿಕ, ಮಾನಸಿಕ ಕ್ಷಮತೆ ವೃದ್ದಿ: ಕೆ.ಹರೀಶ್ ಕುಮಾರ್

ಕ್ರೀಡೆಯಿಂದ ದೈಹಿಕ, ಮಾನಸಿಕ ಕ್ಷಮತೆ ವೃದ್ದಿ: ಕೆ.ಹರೀಶ್ ಕುಮಾರ್

ಮಂಗಳೂರು: ಕ್ರೀಡೆಯಿಂದ  ದೈಹಿಕ, ಮಾನಸಿಕ ಕ್ಷಮತೆ ವೃದ್ದಿಯಾಗುತ್ತದೆ. ಅದುದರಿ೦ದ  ಕ್ರೀಡಾ ಚಟುವಟಿಕೆಗಳಲ್ಲಿ  ಪ್ರತಿಯೋವ೯ರು ತೊಡಗಿಸಿಕೊಳ್ಳುವುದು ಅಗತ್ಯ ಎಂದು ಮೆಸ್ಕಾಂ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ಹೇಳಿದ್ದಾರೆ. ಮಂಗಳೂರು ವಿದ್ಯುತ್‌ ಸರಬರಾಜು ಕ೦ಪೆನಿ ನಿಯಮಿತ (ಮೆಸ್ಕಾಂ) ಮಂಗಳೂರು ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಯೋಜಿಸಿದ್ದ ಬ್ಯಾಡ್ಮಿಂಟನ್‌ ಸೀಜನ್-‌4 ಪಂದ್ಯಾಟ ಹಾಗೂ ಚಿತ್ರ ಕಲಾಸ್ಪರ್ಧೆಯನ್ನು ನಗರದ ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ    ಉದ್ಘಾಟಿಸಿ ಅವರು  ಮಾತನಾಡಿದರು.ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಜಯಕುಮಾರ್ ಆರ್.ಅವರು ಮಾತನಾಡಿ ಬ್ಯಾಡ್ಮಿಂಟನ್‌ ಪಂದ್ಯಾಟ ಉತ್ತಮ ರೀತಿಯಲ್ಲಿ ಆಯೋಜನೆಗೊಂಡಿದೆ ಎಂದು ಅಭಿನಂದಿಸಿ ಪಂದ್ಯಾಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ತಾಂತ್ರಿಕ ನಿರ್ದೇಶಕರಾದ ಹರೀಶ್ ಕುಮಾರ್, ಮುಖ್ಯ ಆರ್ಥಿಕ ಅಧಿಕಾರಿಗಳಾದ ಮುರಳೀಧರ ‌ನಾಯಕ್, ಆರ್ಥಿಕ ಸಲಹೆಗಾರರಾದ   ದೇವರಾಜ್, ಪ್ರಧಾನ ವ್ಯವಸ್ಥಾಪಕರಾದ ಡಾ.ಬಿ.ಎಸ್.ಮ೦ಜುನಾಥ ಸ್ವಾಮಿ,ಕವಿಪ್ರನಿನಿ ಯೂನಿಯನ್‌ಗಳ ಪದಾಧಿಕಾರಿಗಳಾದ ಶಂಕರ್ ಪ್ರಕಾಶ್‌, ನವೀನ್‌ ಕುಮಾರ್‌, ತೇಜಸ್ವಿ, ಶ್ರೀನಿವಾಸಪ್ಪ, ನಿತೇಶ್, ಉಪಸ್ಥಿತರಿದ್ದರು. 

‌ಸಿದ್ದಲಿಂಗಪ್ಪ  ಪ್ರಮಾಣ ವಚನ ಬೋಧಿಸಿದರು.ಬ್ಯಾಡ್ಮಿಂಟನ್ ಸೀಜನ್-‌ 4 ಪಂದ್ಯಾಟ ಆಯೋಜನಾ ಸಮಿತಿಯ ಪ್ರಭಾತ್ ಜೋಶಿ ಅವರು ಪಂದ್ಯಾಟದ ಸ್ವರೂಪದ ಕುರಿತು ಮಾಹಿತಿ ನೀಡಿದರು,  ದೀಪಕ್‌  ನಿಯಮಗಳ ಬಗ್ಗೆ ವಿವರಿಸಿದರು.

ಕುಮಾರಿ ಬೀನಾ  ಎ.ಅವರು ಸ್ವಾಗತಿಸಿದರು.  ಪುಷ್ಪರಾಜ್ ವಂದಿಸಿದರು. ಬಿಂದು ಅವರು ನಿರೂಪಿಸಿದರು. ತಂಡಗಳ ವ್ಯವಸ್ಥಾಪಕರು, ಮಂಗಳೂರು ಮತ್ತು ಉಡುಪಿ ಮೆಸ್ಕಾಂ ವೃತ್ತ ವ್ಯಾಪ್ತಿಯ ಕ್ರೀಡಾಪಟುಗಳು,ಅಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ