ಮಂಗಳೂರು: ಲೋಹಿತ್ ನಗರದ ನಿವಾಸಿ 1971ರ ಭಾರತ-ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದ ಯೋಧ ಗರೊಡಿ ತಿಮ್ಮಪ್ಪಆಳ್ವ ಅವರು ಗುರುವಾರ ತನ್ನ ಮನೆಯಲ್ಲಿ ನಿಧನರಾದರು.
ತುಳುನಾಡಿನ ಕೃಷಿ ಕುಟುಂಬದಲ್ಲಿ ಜನಿಸಿದ್ದ ತಿಮ್ಮಪ್ಪ ಆಳ್ವ ದೇಶದ ಸೇನೆಗೆ ಸೇರಿದ್ದರು. 1971ರ ಯುದ್ಧದಲ್ಲಿ ಹೆಲಿಕಾಪ್ಟರ್‌ನಲ್ಲಿ ಯುದ್ಧ ಶಿಬಿರಕ್ಕೆ ಪ್ರಯಾಣಿಸುವ ವೇಳೆ ಪಾಕ್ ಸೈನಿಕರ ಫಿರಂಗಿ ದಾಳಿಗೆ ತುತ್ತಾಗಿ ಚಿತ್ತಗಾಂಗ್ ಪ್ರದೇಶದ ಕಾಡಿನಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸಿದ್ದರು. ಅವರ ಬದುಕಿ ಉಳಿದ ಅನುಭವ ಕಥನ 'ಗರೋಡಿ ಮನೆಯಿಂದ ಸೇನಾ ಗರಡಿ'ಗೆ ಪ್ರಕಟವಾಗಿತ್ತು.
ಪಾಕಿಸ್ತಾನದ ವಿರುದ್ಧದ ಮೂರೂ ಯುದ್ಧದಲ್ಲಿ ಭಾಗವಹಿಸಿದ್ದ ಹಿರಿಮೆ ಜಿ.ಟಿ. ಆಳ್ವ ಅವರದ್ದಾಗಿದೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.