ಮಂಗಳೂರು: ಪೇಸ್ ಶಿಕ್ಷಣ ಸಂಸ್ಥೆಗಳು 25ನೇ ವರ್ಷದ ಸಂಭ್ರಮದಲ್ಲಿದ್ದು 'ಪೇಸ್ ಸಿಲ್ವಿಯೋರಾ 2025' ಹೆಸರಿನಲ್ಲಿ ಡಿಸೆಂಬರ್ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಿಎ ಎಜುಕೇಶನಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಅಬ್ದುಲ್ಲಾ ಇಬ್ರಾಹೀಂ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2000ನೇ ಇಸವಿಯಲ್ಲಿ ಮಂಗಳೂರಿನ ಪಿ.ಎ. ಇಂಜಿನಿಯರಿಂಗ್ ಕಾಲೇಜಿನೊಂದಿಗೆ ಆರಂಭಗೊಂಡ ಪೇಸ್ ಇಂದು, ಯುಎಇ, ಭಾರತ ಮತ್ತು ಕುವೈತ್ ಗಳಲ್ಲಿ 20 ಸಂಸ್ಥೆಗಳ ಜಾಗತಿಕ ಜಾಲವಾಗಿ ಬೆಳೆದಿದೆ.
ಪೇಸ್ ಗ್ರೂಪ್ ಭಾರತದಲ್ಲಿನ ರಿಮ್ಸ್ ಇಂಟರ್ ನ್ಯಾಶನಲ್ ಸ್ಕೂಲ್ ಕಣ್ಣೂರು ಮತ್ತು ವೆಸ್ಟ್ ಲಂಡನ್ ವಿಶ್ವವಿದ್ಯಾನಿಲಯ, ರಾಸ್ ಅಲ್ ಖೈಮಾಗಳಲ್ಲಿ ಪಾಲುದಾರಿಕೆಯನ್ನು ಹೊಂದಿದೆ ಎಂದರು.ಪೇಸ್ ಸಿಲ್ವಿಯೋರಾ ಕಾರ್ಯಕ್ರಮದ ಬ್ಯಾನರ್ ಡ್ರಾಪ್ ಹಾಗೂ ಕಾರ್ಯಕ್ರಮಗಳ ಉದ್ಘಾಟನೆ ಅ.14ರಂದು ಪೇಸ್ ನಾಲೆಡ್ಜ್ ಸಿಟಿ ಕ್ಯಾಂಪಸ್ ನಲ್ಲಿ ನಡೆದಿದೆ. ಮೂರು ತಿಂಗಳ ಉತ್ಸವ 'ಒಂದು ಪರಂಪರೆಯನ್ನು ಗೌರವಿಸುವುದು, ಭವಿಷ್ಯವನ್ನು ಬೆಳಗಿಸುವುದು' ಎಂಬ ಥೀಮ್ ನಡಿ ವಿವಿಧ ವಿಭಾಗಗಳಲ್ಲಿ ನಡೆಯಲಿದೆ. ಸಂಭ್ರಮದ ಅಂಗವಾಗಿ ಆಹ್ವಾನಿತ ಉಪನ್ಯಾಸ ಸರಣಿ, ಹಳೆಯ ವಿದ್ಯಾರ್ಥಿಗಳ ಉಪನ್ಯಾಸ ಸರಣಿ, ಹಣಕಾಸು ಜಾಗೃತಿ ಕಾರ್ಯಕ್ರಮಗಳು, ಸೈಬರ್ ಮತ್ತು ಡ್ರಗ್ಸ್ ಜಾಗೃತಿ ಅಭಯಾನಗಳು, ವೃತ್ತಿ ಮಾರ್ಗದರ್ಶನ ಮತ್ತು ನವೀನತೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಆರೋಗ್ಯ ರಕ್ತದಾನ, ಕ್ಯಾನ್ಸರ್ ಜಾಗೃತಿ ಅಭಿಯಾನ, ವೃದ್ಧಾಶ್ರಮ ಭೇಟಿ, ಹೈಜಿನ್ ಮತ್ತು ಗಿಡ ನೆಡುವ ಕಾರ್ಯಕ್ರಮ ಮತ್ತು ಫಿಟೈಸ್ ಚಾಲೆಂಜ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಂಸ್ಥೆಯ ಸಿಬಂದಿ, ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳಿಗಾಗಿ ಕ್ರೀಡಾ ಚಟುವಟಿಕೆಗಳು, ಗೌರವ ಮತ್ತು ಸನ್ಮಾನಗಳ ಬಳಿಕ ಡಿಸೆಂಬರ್ ಅಂತ್ಯದಲ್ಲಿ ಫೈನ್ ಕಾರ್ಯಕ್ರಮ ಮಂಗಳೂರಿನ ಪೇಸ್ ನಾಲೆಡ್ಜ್ ಸಿಟಿ ಕ್ಯಾಂಪಸ್ ನಲ್ಲಿ ಹಾಗೂ ಗ್ರಾಂಡ್ ಫೈನಲ್ ಕಾರ್ಯಕ್ರಮ ಜನವರಿ 24ರಂದು ದುಬೈನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.