image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ನಾಯಕರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ವಿರುದ್ಧದ ನಿಂದನೆ – ರಾಷ್ಟ್ರಭಕ್ತರ ಅವಮಾನ : ನಂದನ್ ಮಲ್ಯ

ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ನಾಯಕರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ವಿರುದ್ಧದ ನಿಂದನೆ – ರಾಷ್ಟ್ರಭಕ್ತರ ಅವಮಾನ : ನಂದನ್ ಮಲ್ಯ

ಮಂಗಳೂರು : ಈ ಮಾತೃಭೂಮಿಗೆ ನಮನ ಸಲ್ಲಿಸುತ್ತಾ, ದೇಶದ ಸಂಕಷ್ಟದ ಸಂದರ್ಭಗಳಲ್ಲಿ ಜನಸೇವೆಗೆ ಸದಾ ನಿಂತಿರುವ ಸಂಘಟನೆ — ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS). ಆದರೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ಈ ರಾಷ್ಟ್ರಭಕ್ತ ಸಂಘಟನೆಯ ವಿರುದ್ಧ ವಿಷ ಉಗುಳುತ್ತಿರುವುದು ಅತ್ಯಂತ ಖೇದಕರ. ಕಳೆದ ದಿನಗಳಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಾರ್ವಜನಿಕವಾಗಿ ಬಿಜೆಪಿ ಶಾಸಕರಿಗೆ ಅವಮಾನ ಮಾಡುವುದರ ಜೊತೆಗೆ, “ಕಪ್ಪು ಟೋಪಿ” ಎಂದು ಹೀಯಾಳಿಸುವ ಮೂಲಕ RSS ಸಂಘಟನೆಯನ್ನೂ ನಿಂದಿಸಿದ್ದಾರೆ. ಈ ರೀತಿಯ ಹೇಳಿಕೆಗಳು ಕೇವಲ ಸಂಘಟನೆಯನ್ನಲ್ಲ, ಭಾರತೀಯ ಸಂಸ್ಕೃತಿ, ರಾಷ್ಟ್ರಭಕ್ತಿ ಮತ್ತು ಸಮಾಜಸೇವೆಯ ಮೂಲ ತತ್ತ್ವಗಳನ್ನೇ ಅವಮಾನಿಸುವಂತಿವೆ.

ಡಿಕೆ ಶಿವಕುಮಾರ್ ಅವರ ಈ ಮಾತುಗಳು ದ್ವೇಷದಿಂದ ಬಂದವೋ ಅಥವಾ RSS ನ ಜನಪ್ರಿಯತೆ ಮತ್ತು ಜನಭಕ್ತಿಯಿಂದ ಹುಟ್ಟಿದ ಭಯದಿಂದವೋ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಒಂದೆಡೆ ಗಲಭೆ ಮಾಡಿದವರನ್ನ ಜೈಲಿನಿಂದ ಬಿಡಿಸಿ, ಬಾಂಬ್ ಇಟ್ಟವರನ್ನ ‘ಬ್ರದರ್’ ಎನ್ನುತ್ತಿರುವ ಕಾಂಗ್ರೆಸ್ ನಾಯಕರು, ದೇಶಸೇವೆಯ ಪಥದಲ್ಲಿರುವ RSS ನ ಮೇಲೆ ತಾತ್ಸಾರ ತೋರಿಸುತ್ತಿದ್ದಾರೆ. ಇದು ರಾಜ್ಯದಲ್ಲಿ ಅಘೋಷಿತ ತುರ್ತುಸ್ಥಿತಿ (Emergency) ಹೇರಿದಂತಾಗಿದೆ. ಇನ್ನೊಂದು ಕಡೆ ಪ್ರಿಯಾಂಕ್ ಖರ್ಗೆ ಅವರು RSS ಗೆ ಸರ್ಕಾರಿ ಜಾಗದಲ್ಲಿ ಚಟುವಟಿಕೆ ನಡೆಸಲು ಅನುಮತಿ ಕೊಡಬಾರದು ಎಂದು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಮತ್ತು ದ್ವೇಷ ರಾಜಕೀಯದ ಸ್ಪಷ್ಟ ಉದಾಹರಣೆ.

ಪ್ರಿಯಾಂಕ್ ಖರ್ಗೆ ಅವರೇ, ನಿಮಗೆ ನಿಜವಾದ ಧರ್ಮನಿರಪೇಕ್ಷತೆ ಬಗ್ಗೆ ಕಾಳಜಿ ಇದ್ದರೆ, ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ನಮಾಜ್ ಕುರಿತು ಮಾತನಾಡುವ ಧೈರ್ಯ ತೋರಿಸಿ. ಒಂದು ಪಕ್ಷದ ವಿರುದ್ಧ ಮಾತ್ರ ದ್ವೇಷ ತೋರಿಸುವುದು ನಿಲ್ಲಿಸಿ. ಪಾಕಿಸ್ತಾನ್ ಜಿಂದಾಬಾದ್ ಘೋಷಿಸಿದವರ ಹಿನ್ನಲೆಯನ್ನು ವಿಚಾರಿಸುವ ಧೈರ್ಯ ಕಾಂಗ್ರೆಸ್ ನಾಯಕರಿಗೆ ಇಲ್ಲ, ಆದರೆ ಮಾತೃಭೂಮಿಗೆ ನಮನ ಸಲ್ಲಿಸುವ RSS ಕಾರ್ಯಕರ್ತರ ವಿರುದ್ಧ ಕಠಿಣ ನಿಲುವು — ಇದು ಪಾಕಿಸ್ತಾನದ ಮೇಲಿನ ಪ್ರೀತಿ ಅಥವಾ ರಾಷ್ಟ್ರಭಕ್ತರ ಮೇಲಿನ ದ್ವೇಷ ಎಂದು ಜನ ಕೇಳುತ್ತಿದ್ದಾರೆ. ಈ ಹೇಳಿಕೆಗಳು ಡಿಕೆ ಶಿವಕುಮಾರ್ ಮತ್ತು ಪ್ರಿಯಾಂಕ್ ಖರ್ಗೆ ಅವರ ವೈಯಕ್ತಿಕ ಅಭಿಪ್ರಾಯಗಳೋ ಅಥವಾ ಇಡೀ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯವಾದಿಗಳ ವಿರುದ್ಧದ ಅಜೆಂಡಾವೋ ಎಂಬ ಪ್ರಶ್ನೆ ಎಲ್ಲರ ಮನದಲ್ಲಿದೆ. ಡಿಕೆ ಶಿವಕುಮಾರ್ ಅವರು ಕರಿ ಟೋಪಿಯನ್ನ ದ್ವೇಷಿಸಿದರೆ ಅವರ ರಾಜಕೀಯ ಬೆಳವಣಿಗೆ ಆಗುವುದು ಎಂಬ ಬ್ರಹ್ಮೆಯಲ್ಲಿ ಇದ್ದಾರೆ. ಸಿದ್ದರಾಮಯ್ಯ ಅವರ ನಕಲು ಮಾಡಿದರೆ ಸಿಎಂ ಪಟ್ಟ ಖಚಿತವಾಗುವುದಿಲ್ಲ. ಪ್ರಿಯಾಂಕ್ ಖರ್ಗೆ ಅವರು, RSS ವಿರುದ್ಧದ ಅವರ ಮಾತುಗಳಿಂದ ಹುದ್ದೆ ದೊರೆಯುತ್ತದೆ ಅನ್ನೋ ಭ್ರಮೆ ಮೂರ್ಖತನ. ಅವರ ತಂದೆಯವರ ಅನುಭವವೇ ಇದಕ್ಕೆ ಸಾಕ್ಷಿ.  ರಾಷ್ಟ್ರೀಯವಾದಿಗಳನ್ನು, ದೇಶಭಕ್ತರನ್ನು ಹೀಯಾಳಿಸುವ ಕಾಂಗ್ರೆಸ್ ನ ಧೋರಣೆಗಳು ಶಾಶ್ವತವಾಗಲಾರವು. ರಾಷ್ಟ್ರಪ್ರೇಮಿಗಳು, ದೇಶದ ಪ್ರಜೆಗಳು ಮತ್ತು ನಿಜವಾದ ಭಾರತೀಯರು ಇಂತಹ ದ್ವೇಷಪೂರ್ಣ ರಾಜಕೀಯಕ್ಕೆ ಶೀಘ್ರದಲ್ಲೇ ತಕ್ಕ ಪಾಠ ಕಲಿಸುವರು ಎಂದು ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಉಲ್ಲಾಳ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ