image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುದ್ರೋಳಿಯಲ್ಲಿ ಚಿಣ್ಣರ ಕಲರವ...

ಕುದ್ರೋಳಿಯಲ್ಲಿ ಚಿಣ್ಣರ ಕಲರವ...

ಮಂಗಳೂರು: ಕಲ್ಮಶವಿಲ್ಲದ ನಿರ್ಮಲ ಮನಸ್ಸಿನ ಪುಟಾಣಿಗಳ ಸ್ವರ್ಗವೇ ಭಾನುವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕಂಡುಬಂತು.ಪುಟಾಣಿಗಳ ಸಂತೋಷ, ಕ್ರೀಡೆ, ನಗು, ಕಲಾ ಕೌಶಲಗಳಿಗೆ ವೇದಿಕೆ ಸೃಷ್ಟಿಸುವ ಉದ್ದೇಶದಿಂದ ಹಲವು ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಗುಚ್ಛ ಮಕ್ಕಳ ದಸರಾ-2025ರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಹಸ್ರಾರು ಪುಟಾಣಿಗಳು ಸಾಕ್ಷಿಯಾದರು.ಕ್ಷೇತ್ರದ ದ್ವಾರದಿಂದ ವೇದಿಕೆ ತನಕ ಪುಟಾಣಿಗಳ ಆಕರ್ಷಕ, ವೈಭವದ ಮೆರವಣಿಗೆ ನಡೆಯಿತು. ಸಾಮಾಜಿಕ ಜಾಲತಾಣ ತಾರೆ, ಸ್ಮಾರ್ಟ್ ಕಿಡ್ ಖ್ಯಾತಿಯ ಅಗ್ನಿವ್ ಮಕ್ಕಳ‌ ದಸರಾ ಉದ್ಘಾಟಿಸಿದರು. ಡಾ.ಸುಶ್ಮಾ ಅಕ್ಕರಾಜು, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಸಾಯಿರಾನ್ ಎಚ್.ಎಸ್., ಸಂತೋಷ್ ಜೆ.ಪೂಜಾರಿ, ಕೃತಿನ್ ಧೀರಜ್ ಅಮೀನ್, ಅಭಿವೃದ್ಧಿ ಸಮಿತಿ ಸದಸ್ಯರಾದ ರಮಾನಾಥ ಕಾರಂದೂರು, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷರಾದ ಉದಯಪೂಜಾರಿ ಬಳ್ಳಾಲ್‌ಭಾಗ್, ಕಾರುಣ್ಯ ಸೇತು ಫೌಂಡೇಷನ್ ಸ್ಥಾಪಕ ಸ್ವಸ್ತಿಕ್ ಆರ್ಯ ಮೊದಲಾದವರು ಉಪಸ್ಥಿತರಿದ್ದರು.

ಪುಣಿಗಳಿಗಾಗಿ ಬಿರುವೆರ್ ಕುಡ್ಲ ಪ್ರಾಯೋಜಕತ್ವದಲ್ಲಿ ಕಿನ್ನಿಪಿಲಿ ಸ್ಪರ್ಧೆ, ಭವಾನಿ ಶಿಪ್ಪಿಂಗ್ಸ್  ಪ್ರಾಯೋಜಕತ್ವದಲ್ಲಿ ಭಕ್ತಿಗೀತೆ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದ್ದು, ಸಹಸ್ರಾರು ಪುಟಾಣಿಗಳು ಪಾಲ್ಗೊಂಡರು.

Category
ಕರಾವಳಿ ತರಂಗಿಣಿ