image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೂರನೇ ಆವೃತ್ತಿಯ ರಾಜ್ಯಮಟ್ಟದ ಮಂಗಳೂರು ದಸರಾ ಮ್ಯಾರಥಾನ್-2025

ಮೂರನೇ ಆವೃತ್ತಿಯ ರಾಜ್ಯಮಟ್ಟದ ಮಂಗಳೂರು ದಸರಾ ಮ್ಯಾರಥಾನ್-2025

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ‘ಮಂಗಳೂರು ದಸರಾ-2025’ರ ಅಂಗವಾಗಿ ಜೂಯಿಸ್ ಫಿಟ್ನೆಸ್ ಕ್ಲಬ್, ಯೂನಿಯನ್‌ ಬ್ಯಾಂಕ್ ವತಿಯಿಂದ ಭಾನುವಾರ ಮೂರನೇ ಆವೃತ್ತಿಯ ರಾಜ್ಯಮಟ್ಟದ ಮಂಗಳೂರು ದಸರಾ ಮ್ಯಾರಥಾನ್-2025 ಸ್ಪರ್ಧೆ ನಡೆಯಿತು.ಮ್ಯಾರಥಾನ್‌ ನಲ್ಲಿ ಚಿಣ್ಣರಿಂದ ವೃದ್ಧರವರೆಗೂ 2 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದರು. ಕೇರಳ ಸಹಿತ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸ್ಪರ್ಧಾಳುಗಳು ಪಾಲ್ಗೊಂಡರು. 

21 ಕೆ ರನ್, ೧೦ಕೆ ರನ್, 5ಕೆ ರನ್, 2ಕೆ ಸ್ಯಾರಿ ರನ್ ಆಯೋಜಿಸಲಾಗಿತ್ತು. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.21 ಕಿ.ಮೀ. ಪ್ರಥಮ ವಿಜೇತರಿಗೆ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ., ತೃತೀಯ 10 ಸಾವಿರ ರೂ., 10 ಕಿ.ಮೀ.  ಪ್ರಥಮ 15 ಸಾವಿರ ರೂ., ದ್ವಿತೀಯ 10  ಸಾವಿರ ರೂ., ತೃತೀಯ 5 ಸಾವಿರ ರೂ. 5 ಕಿ.ಮೀ.ನಲ್ಲಿ ಪ್ರಥಮ 5 ಸಾವಿರ ರೂ., ದ್ವಿತೀಯ 2  ಸಾವಿರ ರೂ., ತೃತೀಯ 1 ಸಾವಿರ ರೂ. ನೀಡಲಾಯಿತು.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ಚಾಲನೆ ನೀಡಿದರು. ಯೂನಿಯನ್‌ ಬ್ಯಾಂಕ್ ಮಂಗಳೂರು ಪ್ರಾದೇಶಿಕ ಮುಖ್ಯಸ್ಥ ನರಸಿಂಹ ಕುಮಾರ್‌, ವಲಯ ಮುಖ್ಯಸ್ಥೆ ತೇಜಸ್ವಿನಿ ವಿ.ಸಿ., ಕುದ್ರೋಳಿ ಕ್ಷೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್.‌ಪೂಜಾರಿ, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಕಿಶೋರ್ ದಂಡೆಕೇರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಅಭಿವೃದ್ಧಿ ಸಮಿತಿ ಸದಸ್ಯ ಲೀಲಾಕ್ಷ ಕರ್ಕೇರಾ,  ಜೂಯಿಸ್ ಫಿಟ್ನೆಸ್ ಕ್ಲಬ್‌ನ ರಾಜೇಶ್ ಪಾಟಾಲಿ ಸಹಿತ ಮತ್ತಿತರರು ಇದ್ದರು.

ಬಹುಮಾನ ವಿಜೇತರು

21 ಕಿ.ಮೀ. ಮ್ಯಾರಥಾನ್ ಪುರುಷರ ವಿಭಾಗ: ಪ್ರಥಮ-ಲೈಡ್ ಶಫ್ರಂಗ್‌ ಲಮಾರೆ (01:26:29), ದ್ವಿತೀಯ-ಶಿವಾನಂದ್‌ (01:29:29:), ತೃತೀಯ: ಕಿರಣ್‌ ಕುಮಾರ್‌ ಕುಲಾಲ್‌ (02:00:56), ಮಹಿಳೆಯರ ವಿಭಾಗದಲ್ಲಿ ಪ್ರಥಮ: ನಂದಿನಿ (01:52:23), ದ್ವಿತೀಯ: ಆಸ ಪತ್ರೋಸೆ (01:59:02) ತೃತೀಯ: ಸಾಕ್ಷಿ(02:00:57)

10 ಕಿ.ಮೀ. ಮ್ಯಾರಥಾನ್ ಪುರುಷರ ವಿಭಾಗದಲ್ಲಿ ಪ್ರಥಮ: ಶ್ರೀಧರ್ (48:15), ದ್ವಿತೀಯ: ಐರಪ್ಪ ಹಲಗಣ್ಣನವರ್ (48:42), ತೃತೀಯ: ಘನಶ್ಯಾಮ್‌ ಪ್ರಸಾದ್ (49:52), ಮಹಿಳೆಯರ ವಿಭಾಗದಲ್ಲಿ ಪ್ರಥಮ: ಚರಿಷ್ಮ (59:47), ದ್ವಿತೀಯ: ಶ್ರೇಯಾ (59:59), ತೃತೀಯ: ಮರಿಯ ಲವೀನ ರೋಡ್ರಿಗಸ್‌ (01:00:18)

5 ಕಿ.ಮೀ. ಮ್ಯಾರಥಾನ್‌ ಪುರಷರ ವಿಭಾಗದಲ್ಲಿ ಪ್ರಥಮ: ಆರ್.‌ ಮಹೇಶ್‌ (18:12), ದ್ವಿತೀಯ: ಪುನೀತ್‌ ಕುಮಾರ್‌ (18:31), ತೃತೀಯ: ನಾಗರಾಜ್‌ (19:15), ಮಹಿಳೆಯರ ವಿಭಾಗದಲ್ಲಿ ಪ್ರಥಮ: ನಾಗಿಣಿ (23:03), ದ್ವಿತೀಯ: ರೇಖ (12:03), ತೃತೀಯ: ರಿತುಶ್ರೀ (26:00)

Category
ಕರಾವಳಿ ತರಂಗಿಣಿ