ಮಂಗಳೂರು: 2007 ರಲ್ಲಿ ಅಸ್ತಿತ್ವಕ್ಕೆ ಬಂದ ಈ ನಮ್ಮ ಸಂಘಟನೆಯು ಗಾಯಕರೂ ಹಾಗೂ ಹಿನ್ನಲೆ ವಾದಕರೂ ಸೇರಿ ಸುಮಾರು 350 ಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡ ನೊಂದಾಯಿತ ಸಂಸ್ಥೆಯಾಗಿದ್ದು, ಸಂಗೀತ ಕಲಾಕ್ಷೇತ್ರದ ಅಶಕ್ತರಿಗೆ ಸಹಾಯ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳ ಪ್ರತಿಬಾನ್ವೇಷನೆ, ಯುವ ಪ್ರತಿಭೆಗೆ ಪ್ರೋತ್ಸಾಹ, ಮುಂತಾದ ಧೈಯಗಳಲ್ಲಿ ಮುನ್ನಡೆದು ಮತ್ತಷ್ಟೂ ಸಾಮಾಜಿಕ ಕಳಕಳಿಯಿಂದ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾಪುರಸ್ಕಾರ ಅಪಘಾತ ಹಾಗೂ ಅನಾರೋಗ್ಯದಲ್ಲಿ ನೊಂದ ಕಲಾವಿದರಿಗೆ ಸಹಾಯ ನೀಡುತ್ತಾ ಬಂದಿದೆ. ಇದೀಗ 17 ನೇ ವಾರ್ಷಿಕ ಸಮಾರಂಭ ಪ್ರಯುಕ್ತ ಸಪ್ಟಂಬರ್ 26 ಸಂಜೆ 4.00 ಕ್ಕೆ ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಸ್ವರ ಕುಡ್ಡ ಗ್ರಾಂಡ್ ಫಿನಾಲೆ ಹಾಗೂ ವಾರ್ಷಿಕ ಸಮಾರಂಭ, ಗೌರವ ಸನ್ಮಾನ, ವಿದ್ಯಾರ್ಥಿ ವೇತನ, ಕಾರ್ಯಕ್ರಮ ಜರಗಲಿದೆ ಎಂದು ಸಂಘದ ಮಾಜಿ ಅಧ್ಯಕ್ಷರಾದ ಜಗದೀಶ್ ಶೆಟ್ಟಿ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಅಧ್ಯಕ್ಷರಾದ ದೀಪಕ್ ರಾಜ್ ಉಳ್ಳಾಳ್ ಮಾತನಾಡಿ, ಅಂದಿನ ಸಭೆಯ ಉದ್ಘಾಟನೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ನಡೆಸಿಕೊಡಲಿದ್ದು, ಸಭೆಯ ಅಧ್ಯಕ್ಷತೆಯನ್ನು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಶ್ರೀ ದೀಪಕ್ ರಾಜ್ ಉಳ್ಳಾಲ್ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದ.ಕ. ಜಿಲ್ಲೆ, ಶ್ರೀ ಯು. ಟಿ. ಖಾದರ್ ವಿಧಾನ ಸಭಾಧ್ಯಕ್ಷರು ಕರ್ನಾಟಕ, ಶ್ರೀ ವೇದವ್ಯಾಸಕಾಮತ್ ಶಾಸಕರು ಮಂಗಳೂರು ದಕ್ಷಿಣ, ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಮಾಜಿ ಮಹಾ ಪೌರರು ಎಂ.ಸಿ.ಸಿ., ಶ್ರೀ ಸದಾಶಿವ ಉಳ್ಳಾಲ್ ಅಧ್ಯಕ್ಷರು ನಗರಾಭಿವ್ರದ್ದಿ ಪ್ರಾದಿಕಾರ, ಶ್ರೀ ಜಗದೀಶ್ ಶೆಟ್ಟಿ ಸದಸ್ಯರು ಎಂ.ಸಿ.ಸಿ., ಶ್ರೀ ಎಸ್. ಮಹೇಶ್ ಕುಮಾರ್ ಡಿ. ವೈ. ಎಸ್. ಪಿ. ಮಡಿಕೇರಿ, ಶ್ರೀ ಶ್ರೀಧರ್ ಎ.ಸಿ.ಫ್ ಮೂಡಬಿದ್ರಿ, ಶ್ರೀ ವಾಲ್ಟರ್ ನಂದಳಿಕೆ ದೈಜಿವರ್ಲ್ಡ್ ಮೀಡಿಯಾ, ಶ್ರೀ ಲಾರೆನ್ಸ್ ಡಿ'ಸೋಜ ನಿರ್ದೇಶಕರು ಪ್ಲಾಂಟ್ ಟೆಕ್, ಶ್ರೀ ಲತೀಫ್ ಗುರುಪುರ ಮಾಲಕರು ಎನ್.ಎನ್. ಐ ಎಂಟರ್ ಪ್ರೈಸಸ್, ಶ್ರೀ ಮಹಮ್ಮದ್ ಅಯಾಜ್ ಸಿ.ಇ.ಓ. ರೈಟ್ ಜೋಯ್ಸ್ ಇಂಡಸ್ಟ್ರೀಯಲ್, ದೇವದಾಸ್ ಕೊಲ್ಯ ಉಪಾಧ್ಯಕ್ಷರು ಭಗವತಿ ಕೊ ಅಪ್ ಬ್ಯಾಂಕ್, ಶ್ರೀ ಲಕ್ಷ್ಮಣ್ ಕುಂದರ್ ನಿರ್ದೇಶಕರು ವಿ.4 ನ್ಯೂಸ್, ಲಯನ್ ಚಂದ್ರಹಾಸ್ ಶೆಟ್ಟಿ ಮಾಲಕರು ಹೋಟೇಲ್ ಕಂಫರ್ಟ್ ಇನ್, ಶ್ರೀಮತಿ ನಿರೂಪಮ ಪ್ರಸಾದ್ ಸಮಾಜ ಸೇವಕರು, ಶ್ರೀ ಚಂದ್ರಶೇಖರ್ ಶೆಟ್ಟಿ ಕುಕ್ಕುಂದೂರು ವಚನಾ ಹಾಸ್ಪಿಟಾಲಿಟಿ ಮುಂಬಾಯಿ, ಲಯನ್ ರಾಜೇಶ್ ಶೆಟ್ಟಿ ಮಾಲಕರು ಶಬರೀ ಕ್ಯಾಟರರ್ಸ್ ಭಾಗವಹಿಸಲಿದ್ದಾರೆ.ಸಂಗೀತ ಕ್ಷೇತ್ರದ ಹಿರಿಯ ಸಾಧಕ ಕಲಾವಿದರಾದ ಶ್ರೀ ರಾಜರಾಮ್ ಭಕ್ತ ಉಡುಪಿ, ಖ್ಯಾತ ಕೀ ಬೋರ್ಡ್ ವಾದಕರಾದ ಶ್ರೀ ಗುಡ್ ವಿಲ್ ಫೆಡ್ರಿಕ್ಸ್ ಉಡುಪಿ, ಹಿರಿಯ ಬಾಜ್ ಗೀಟಾರ್ ವಾದಕರಾದ ಶ್ರೀ ಕೆ.ಸಿ. ಬಶೀರ್ ಅಹಮ್ಮದ್ ಅವರನ್ನು ಸನ್ಮಾನಿಸಲಾಗುವುದು, ಸ್ವರಕುಡ್ಡ ಗ್ರಾಂಡ್ ಫಿನಾಲೆ ವಿಜೇತರಿಗೆ ಪ್ರಶಸ್ತಿ ಪ್ರಧಾನ, ಮತ್ತು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸದಸ್ಯರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಕೂಡಾ ನಡೆಯಲಿದೆ 61 ಎಲ್ಲಾ ಕಾರ್ಯಕ್ರಮಕ್ಕೂ ಸೂಕ್ತ ಸಮಯದಲ್ಲಿ ಕಲಾಭಿಮಾನಿಗಳು ಆಗಮಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್, ಮಲ್ಲಕಾ ಶೆಟ್ಟಿ ಸಂಘಟನಾ ಕಾರ್ಯದರ್ಶಿ ರಾಮ್ ಕುಮಾರ್, ತೋನ್ಸೆ ಪುಷ್ಕಳ್ ಕುಮಾರ್ ಮತ್ತು ಕೇಶವ ಕನಿಲ ಉಪಸ್ಥಿತರಿದ್ದರು.