ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ತೆಂಕಿಲ ವಿವೇಕಾನಂದ ವಿದ್ಯಾ ಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ ಖೋ-ಖೋ ಪಂದ್ಯಾಟದಲ್ಲಿ 14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನಗಳಿಸಿ ತಾಲೂಕು ಮಟ್ಟದ ಪಂದ್ಯಾಕೂಟದಲ್ಲಿ ಭಾಗವಹಿಸಿರುತ್ತಾರೆ.
ಈ ತಂಡದಲ್ಲಿ ಪೂರ್ವಿ, ವಂಶಿತಾ. ಎನ್, ಆತ್ಮ ಕೆ. ಎಲ್, ಸಾನ್ವಿ ಆನಂದ್, ಚರೀಷ್ಮಾ ಪಿ. ಡಿ., ಮಾನ್ಯ. ಪಿ. ಎಸ್, ದಿಯಾ.ಜೆ, ಸಾನ್ವಿ.ಆರ್. ಕೆ, ಅದಿತಿ. ಎಸ್, ತನ್ವಿತಾ. ಕೆ, ವಿತಿಕ .ಪಿ .ರೈ, ಲಿಖಿತ. ಜೆ, ಕೆ.ಮಾನ್ವಿ ರೈ, ತಶ್ವಿನಿ.ಎ ಎಸ್, ಹರ್ಷಿಣಿ ಪ್ರಭು, ಆರಾಧ್ಯಾ ಕೆ ಭಾಗವಹಿಸಿರುತ್ತಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.