image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗನ ಕಾಯಿಲೆಯ ಭೀತಿ; ಕ್ಷಣ ಕನ್ನಡದಲ್ಲಿ ಮುನ್ನೆಚ್ಚರಿಕಾ ಕ್ರಮ

ಮಂಗನ ಕಾಯಿಲೆಯ ಭೀತಿ; ಕ್ಷಣ ಕನ್ನಡದಲ್ಲಿ ಮುನ್ನೆಚ್ಚರಿಕಾ ಕ್ರಮ

ಮಂಗಳೂರು: ನಿಫಾ ಜೊತೆಗೆ ಮಂಗನ ಕಾಯಿಲೆಯ ಭೀತಿ ಎದುರಿಸುತ್ತಿರುವ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡದಲ್ಲೂ ನಿಗಾ ವಹಿಸಲು ಆರೋಗ್ಯ ಇಲಾಖೆ ಮುಂದಾಗಿದ್ದು,ಆಫ್ರಿಕನ್ ದೇಶಗಳಲ್ಲೂ ಮಂಗನ ಕಾಯಿಲೆ ಹರಡಿದ್ದು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಂಗಳೂರು ಬಂದರಿನ ಮೂಲಕ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರನ್ನು ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. ಪ್ರತ್ಯೇಕ ಆ್ಯಂಬುಲೆನ್ಸ್ ಸನ್ನದ್ಧವಾಗಿದೆ.ಮಂಗನ ಕಾಯಿಲೆ ಪೀಡಿತ ರೋಗಿಗಳ ಚಿಕಿತ್ಸೆಗೆಂದು ವೆಸ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಅನ್ನು ಕಾದಿರಿಸಲಾಗಿದೆ.“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯಕ್ಕೆ ಮಂಗನ ಕಾಯಿಲೆಯ ಯಾವುದೇ ಆತಂಕ ಇಲ್ಲ. ರಾಜ್ಯ ಸರಕಾರದಿಂದಲೂ ಸದ್ಯಕ್ಕೆ ಯಾವುದೇ ಸೂಚನೆ ಬಂದಿಲ್ಲ. ವಿಮಾನ ನಿಲ್ದಾಣ, ಬಂದರಿನಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ನಿರಂತರ ತಪಾಸಣೆ ನಡೆಸಲಾಗುತ್ತಿದೆ. ಮುನ್ನೆಚ್ಚರಿಕೆಗೆಂದು ವೆಸ್ಲಾಕ್‌ನಲ್ಲಿ ಆರು ಬೆಡ್‌ಗಳನ್ನು ಮೀಸಲಿಟ್ಟಿದ್ದೇವೆ. ಸದ್ಯದಲ್ಲೇ ವಿಶೇಷ ಸಭೆ ನಡೆಸಲಾಗುತ್ತದೆ' ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ತಿಳಿಸಿದ್ದಾರೆ.

.

Category
ಕರಾವಳಿ ತರಂಗಿಣಿ