ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಕುದ್ರೋಳಿಯಲ್ಲಿ ಅರುಣ್ ಕುಮಾರ್ ಗಟ್ಟಿ ಅಗರಿಮಾರ್,ದೀಪಕ್ ಪಿಲಾರ್, ದೀಪಕ್ ಕೋಟ್ಯಾನ್ ಗುರುಪುರ ಹಾಗೂ ಪದ್ಮರಾಜ್ ಆರ್ ಪೂಜಾರಿಯವರ ನೇತೃತ್ವದಲ್ಲಿ ಸೆ.26ರಂದು ಮಿಸ್ಟರ್ ಮಂಗಳೂರು ದಸರಾ ಕ್ಲಾಸಿಕ್ 2025 ರಾಜ್ಯ ಮಟ್ಟದ ದೇಹದಾಢ್ಯಾ ಸ್ಪರ್ಧೆ ನಡೆಯಲಿದೆ.
ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು ಮತ್ತು ಗಟ್ಟಿಸ್ ಫಿಟ್‌ಲೈನ್ ಜಿಮ್ ಇದರ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್ ಮಂಗಳೂರು ಇವರ ಮಾನ್ಯತೆಯೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.