ಮಂಗಳೂರು: ಕದ್ರಿ ಉದ್ಯಾನವನದಲ್ಲಿ ದಕ್ಷಿಣ ಭಾರತದಲ್ಲಿ ಎರಡನೇ ಸ್ಥಾನದಲ್ಲಿರುವ 75 ಮೀಟರ್ ಎತ್ತರದ ಧ್ವಜಸ್ತಂಭವನ್ನು ನಿರ್ಮಿಸಲಾಯಿತು. ನಿರಂತರ ಮಳೆ ಇದ್ದರೂ ಈ ಯೋಜನೆಯನ್ನು ಒಂದು ತಿಂಗಳ ಒಳಗಾಗಿ ಮುಗಿಸಲಾಗಿದೆ ಎನ್ನುತ್ತಾರೆ ಈ ಯೋಜನೆಯ ಉಸ್ತುವಾರಿಯನ್ನು ವಹಿಸಿದ್ದ ಹಿರಿಯ ಇಂಜೀನಿಯರ್, ಕದ್ರಿ ಉದ್ಯಾನವನದ ಅಭಿವೃದ್ಧಿ ಸಮಿತಿಯ ಕಾರ್ಯಕಾರಿ ಸದಸ್ಯರಾಗಿರುವ ಶ್ರೀಯುತ ಜಗನ್ನಾಥ್ ಗಾಂಬೀರ್. ಇವರನ್ನು ದ್ವಜ ಸ್ಥಂಭ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಈ ಸನ್ಮಾನ ಸಮಾರಂಭದಲ್ಲಿ ಮಹಾ ಪೌರರಾದ ಸುಧೀರ್ ಶೆಟ್ಟಿ ಕಣ್ಣೂರ್, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಶ ವೇದವ್ಯಾಸ್ ಕಾಮತ್, ಮಾಜಿ ಮೇಯರ್‌ಗಳು ಮೂಡ ಮಾಜಿ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಮಹಾನಗರ ಪಾಲಿಕೆಯ ಎಲ್ಲಾ ಸದಸ್ಯರು ಹಾಗೂ ಕದ್ರಿ ಉದ್ಯಾನವನದ ಸುತ್ತಮುತ್ತಲಿನ ಎಲ್ಲಾ ನಾಗರಿಕರು ಉಪಸ್ಥಿತರಿದ್ದರು.
ಇಂಜಿನಿಯರ್ ಜಗನ್ನಾಥ್ ಗಾಂಭೀರ್ ಮಾರ್ಗದರ್ಶನದಲ್ಲಿ ಈ ಹಿಂದೆ ಮೂಡದ ಸಹಕಾರದಿಂದ ಮಾಡಿದ ಗಂಗನಪಳ್ಳ ಅಭಿವೃದ್ಧಿ, ಕಾರಂಜಿ, ಬಯಲು ರಂಗಮಂದಿರ, ಹಾಗೂ ವಿಶೇಷ ಮಕ್ಕಳಿಗಾಗಿ ಉದ್ಯಾನವನದ ಕೆಲಸವು ನಡೆದಿತ್ತು.