ಧರ್ಮಸ್ಥಳ : ಧರ್ಮಸ್ಥಳ ವಿರುದ್ದ ಸುಳ್ಳು ಆರೋಪಗಳು, ಬುರುಡೆ ತೋರಿಸಿ ಹೊಸ ಕತೆ ಸೃಷ್ಟಿಸಿದವರೆಲ್ಲಾ ಇದೀಗ ಎಸ್‌ಐಟಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಪೈಕಿ ಧೂತ ಸಮೀರ್ ಎಂಡಿ ಧರ್ಮಸ್ಥಳ ವಿರುದ್ದ ಎಐ ವಿಡಿಯೋ ಸೃಷ್ಟಿಸಿ ಇಲ್ಲ ಸಲ್ಲದ ಆರೋಪ ಮಾಡಿದ್ದ. ಈತನ ವಿಡಿಯೋವನ್ನು ಹಲವರು ನಂಬಿ ಧರ್ಮಸ್ಥಳ ವಿರುದ್ಧ ಹೋರಾಟಕ್ಕಿಳಿದಿದ್ದರು. ಇದೀಗ ಸಮೀರ್ ಎಂಡಿ ಸುಜಾತಾ ಭಟ್ ಹೇಳಿದ ಕತೆ ಸುಳ್ಳಾದರೆ ನಾನೇನು ಮಾಡಲಿ ಎಂದು ಹೊಸ ರಾಗ ಹಾಡಿದ್ದಾನೆ ಎಂದು ವರದಿಯಾಗಿದೆ. ಅನನ್ಯಾ ಭಟ್ ಕೊಲೆ ಎಂದಿದ್ದ ಸಮೀರ್ ಇದೀಗ ಹೊಸ ಕತೆ ಹೇಳುತ್ತಿದ್ದು, ಸುಜಾತಾ ಭಟ್ ಕಣ್ಣೀರು ಹಾಕಿದ್ದರು. ಅವರಿಗೆ ನ್ಯಾಯ ಒದಗಿಸಲು ವಿಡಿಯೋ ಮಾಡಿದ್ದೆ. ಆದರೆ ಅವರ ಕತೆ ಸುಳ್ಳಾಗಿದ್ದರೆ ನಾನು ಏನು ಮಾಡಲಿ ಎಂದಿದ್ದಾನೆ ಎಂದು ವರದಿಯಾಗುತ್ತಿದೆ.