image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧಾರ್ಮಿಕ ಉತ್ಸವಗಳಿಗೆ ಪೊಲೀಸ್ ಇಲಾಖೆ ಯಾವುದೇ ತೊಂದರೆ ಮಾಡುವುದಿಲ್ಲ : ಮಂಗಳೂರು ಕಮಿಷನರ್

ಧಾರ್ಮಿಕ ಉತ್ಸವಗಳಿಗೆ ಪೊಲೀಸ್ ಇಲಾಖೆ ಯಾವುದೇ ತೊಂದರೆ ಮಾಡುವುದಿಲ್ಲ : ಮಂಗಳೂರು ಕಮಿಷನರ್

ಮಂಗಳೂರು : ಸೌಂಡ್ ವಿಚಾರಣದಲ್ಲಿ ಗಣೇಶೋತ್ಸವಕ್ಕೆ ಪೊಲೀಸರು ಯಾವುದೇ ತೊಂದರೆ ಮಾಡಿಲ್ಲ, ನಮ್ಮ ಕಚೇರಿ ಎದುರಗಡೆನೇ ಗಣೇಶೋತ್ಸವ ಕಾರ್ಯಕ್ರಮ ನಡೆದಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ. ‌ಮಂಗಳೂರಿನಲ್ಲಿ ಮಾತನಾಡಿದ ಅವರು ಮೈಕ್, ಧ್ವನಿವರ್ಧಕ ಹೆಸರಲ್ಲಿ ಯಾವುದೇ ಹೊಸ ನಿಯಮ ಹೇರಲಾಗಿಲ್ಲ. ಇರೋ ಕಾನೂನನ್ನೇ ಅನುಷ್ಠಾನ ಮಾಡಿದ್ದೇವೆ.‌ ಅಷ್ಟಮಿ, ಗಣೇಶೋತ್ಸವದಲ್ಲಿ ಧಾರ್ಮಿಕ ಆಚರಣೆ, ಉತ್ಸವಕ್ಕೆ ತೊಂದರೆ ಆಗಿಲ್ಲ. ದಸರಾ ಉತ್ಸವಕ್ಕೂ ಪೊಲೀಸ್ ಇಲಾಖೆ ಅಡ್ಡಿ ಮಾಡುವುದಿಲ್ಲ ಎಂದರು.

ನಮ್ಮ ಕಚೇರಿ ಎದುರು ನೆಹರು ಮೈದಾನದಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆ ರಾತ್ರಿ 3.30ರ ವರೆಗೂ ನಡೆದಿತ್ತು. ಯಾವುದೇ ಹಬ್ಬಗಳ ಸಾರ್ವಜನಿಕ ಆಚರಣೆಗಳಿಗೆ ಪೊಲೀಸ್ ಇಲಾಖೆ ಅಡ್ಡಿ ಪಡಿಸುವುದಿಲ್ಲ. ಆದರೆ ಇತರರಿಗೆ ಸಮಸ್ಯೆಯಾಗದಂತೆ ಶಬ್ಧದ ಮಿತಿಯನ್ನು ಪಾಲಿಸಿ ಆಯೋಜಿಸುವುದು ಸಂಘಟಕರ ಜವಾಬ್ದಾರಿ. ನಾಟಕ, ಯಕ್ಷಗಾನಗಳಿಗೂ ಇದೇ ಮಾರ್ಗಸೂಚಿಯಿದ್ದು, ಎಷ್ಟು ಬೇಕಾದರೂ ಸೌಂಡ್ ಬಳಕೆ ಮಾಡುವ ಅವಕಾಶ ಇಲ್ಲ. ಒಳಾಂಗಣ ಮತ್ತು ಹೊರಾಂಗಣ ಕಾರ್ಯಕ್ರಮಗಳ ವ್ಯಾಪ್ತಿಗೆ ಎಷ್ಟು ಜನ ಸೇರುತ್ತಾರೆ ಎನ್ನುವುದನ್ನು ಆಧರಿಸಿ ಮೈಕ್ ಬಳಕೆ ಮಾಡಲು ಅವಕಾಶ ಇದೆ. ಆದರೆ ಸಂಘಟಕರು ಕಾರ್ಯಕ್ರಮದ ಬಗ್ಗೆ ಸ್ಪಷ್ಟ ವಿವರ ನೀಡಿ ಅನುಮತಿ ಪಡೆದುಕೊಳ್ಳಬೇಕು. ಅದನ್ನು ಉಲ್ಲಂಘಿಸಿದರೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. 

 

Category
ಕರಾವಳಿ ತರಂಗಿಣಿ